Home Jobs SSLC ವಿದ್ಯಾರ್ಥಿಗಳೇ ಗಮನಿಸಿ | ಮೂರೇ ದಿನದಲ್ಲಿ ಕೂತಲ್ಲೇ ಸಿಗುತ್ತೆ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ -ನಕಲು...

SSLC ವಿದ್ಯಾರ್ಥಿಗಳೇ ಗಮನಿಸಿ | ಮೂರೇ ದಿನದಲ್ಲಿ ಕೂತಲ್ಲೇ ಸಿಗುತ್ತೆ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ -ನಕಲು ಪ್ರತಿ ಪಡೆಯಲು ಈ ರೀತಿ ಮಾಡಿ |

Hindu neighbor gifts plot of land

Hindu neighbour gifts land to Muslim journalist

ಇನ್ನು ಮುಂದೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮರುಮೌಲ್ಯಮಾಪನ ಹಾಗೂ ಅಂಕಗಳ ಮರು ಎಣಿಕೆಗೆ ಅರ್ಜಿ ಸಲ್ಲಿಸಿ ಉತ್ತರ ಪತ್ರಿಕೆಗಾಗಿ ಹಲವು ದಿನ ಕಾಯಬೇಕಿಲ್ಲ. ಬರೀ 3 ದಿನದಲ್ಲೇ ಅದೂ ಇಲಾಖೆ ವೆಬ್‌ಸೈಟ್‌ನಲ್ಲೇ ಲಭಿಸುವ ವ್ಯವಸ್ಥೆಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಜಾರಿಗೊಳಿಸಲು ಮುಂದಾಗಿದೆ.

ಫಲಿತಾಂಶ ಬಂದ ಬಳಿಕ ಕೆಲ ವಿದ್ಯಾರ್ಥಿಗಳು ತಮಗೆ ಅಂಕಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮರು ಮೌಲ್ಯಮಾಪನ ಸಲ್ಲಿಸುತ್ತಾರೆ. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಮುನ್ನ ಉತ್ತರ ಪತ್ರಿಕೆಯ ನಕಲು ಪ್ರತಿ ಪಡೆದುಕೊಳ್ಳಬೇಕು. ಇದರಲ್ಲಿ ಎಲ್ಲಿ ಅಂಕಗಳು ಹೆಚ್ಚು ಕಡಿತವಾಗಿದೆ ಎಂಬುವುದು ಗೊತ್ತಾಗಲಿದೆ. ಈಗ ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತು ಮೂರು ದಿನದಲ್ಲಿ ಉತ್ತರ ಪತ್ರಿಕೆಯನ್ನು ಪಡೆದುಕೊಳ್ಳಬಹುದು.

ಇಲಾಖೆಯ ವೆಬ್ ಸೈಟ್ ನಲ್ಲಿ ಉತ್ತರ ಪತ್ರಿಕೆ ಲಭಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮುಂದಾಗಿದೆ. ಇದರಿಂದ ವಿದ್ಯಾರ್ಥಿಗಳ ಇ-ಮೇಲ್ ಗೆ ಉತ್ತರ ಪತ್ರಿಕೆ ಕಳುಹಿಸಲು ಆಗುತ್ತಿದ್ದ ತಾಂತ್ರಿಕ ತೊಂದರೆಗಳು ಈ ವ್ಯವಸ್ಥೆಯಿಂದ ದೂರವಾಗಲಿದೆ.

ಉತ್ತರ ಪತ್ರಿಕೆ ನಕಲು ಪ್ರತಿ ಹೀಗೆ ಪಡೆದುಕೊಳ್ಳಿ

*ಮರು ಮೌಲ್ಯಮಾಪನ ಅಥವಾ ಮರು ಎಣಿಕೆ ಬಯಸುವ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ನೋಂದಣಿ ಸಂಖ್ಯೆ ಮತ್ತು ಒಟಿಪಿ ಹೋಗಲಿದೆ. ಈ ಮೂಲಕ ವಿದ್ಯಾರ್ಥಿಗಳ ಹೆಸರಿನಲ್ಲಿ ಲಾಗ್ ಇನ್ ಕ್ರಿಯೇಟ್ ಆಗಲಿದೆ.

*ಕ್ರಿಯೇಟ್ ಆಗಿರುವ ಲಾಗಿನ್ ಗೆ ಪರೀಕ್ಷಾ ಮಂಡಳಿ ವಿದ್ಯಾರ್ಥಿ ಹೇಳಿದ ಉತ್ತರ ಪತ್ರಿಕೆಯನ್ನು ಅಪ್ಲೋಡ್ ಮಾಡುತ್ತದೆ.

*ಆ ವೆಬ್ ಸೈಟ್ ನಲ್ಲಿ ವಿದ್ಯಾರ್ಥಿಗಳು ತಮ್ಮ ನೋಂದಣಿ ಮತ್ತು ಓಟಿಪಿ ದಾಖಲಿಸಿಬೇಕು. ನಂತರ ಅಲ್ಲಿರುವ ನಕಲು ಪ್ರತಿಯನ್ನು ಡೌನ್ ಲೌಡ್ ಮಾಡಿಕೊಳ್ಳಬೇಕು.

ಈ ಮೊದಲು ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಸ್ಕ್ಯಾನ್ ಮಾಡಿ ಅಂಚೆ ಮೂಲಕ ಕಳುಹಿಸಲಾಗುತ್ತಿತ್ತು. ಈ ವ್ಯವಸ್ಥೆ ತುಂಬಾ ಸಮಯ ತೆಗೆದುಕೊಳ್ಳುತ್ತಿತ್ತು. ಕಳೆದ 4 ವರ್ಷಗಳಿಂದ ವಿದ್ಯಾರ್ಥಿಗಳ ಮೇಲ್ ಗೆ ಉತ್ತರ ಪತ್ರಿಕೆಯನ್ನ ಕಳುಹಿಸಲಾಗುತ್ತಿದೆ. ಇದೀಗ ಈ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಣೆಗೊಳಿಸಲಾಗುತ್ತಿದೆ.

ಸ್ಕ್ಯಾನ್ ಪ್ರತಿಯನ್ನು ಅಂಚೆ ಮೂಲಕ ಕಳುಹಿಸುವುದು ತುಂಬಾ ವಿಳಂಬವಾಗುತ್ತಿದ್ದರಿಂದ ಇದನ್ನು ಇ-ಮೇಲ್ ಮೂಲಕ ಕಳುಹಿಸಿಕೊಡಲು ನಿರ್ಧರಿಸಿತು. ಈ ವೇಳೆ ಕೆಲ ವಿದ್ಯಾರ್ಥಿಗಳು ಇ-ಮೇಲ್ ವಿಳಾಸ ನೀಡುವಲ್ಲಿ ಅಕ್ಷರಗಳಲ್ಲಿ ಕೆಲವು ತಪ್ಪುಗಳು ಮಾಡುತ್ತಿದ್ದರು. ಇದರ ಪರಿಣಾಮ, ವಿದ್ಯಾರ್ಥಿಗಳಿಗೆ ಸ್ಕ್ಯಾನ್ ಪ್ರತಿ ತಲುಪುತ್ತಿರಲಿಲ್ಲ. ವೆಬ್‌ಸೈಟ್ ನಲ್ಲಿಯೇ ಅಪ್‌ಲೋಡ್ ಮಾಡಿದರೆ, ಡೌನ್‌ಲೋಡ್ ಮಾಡಿಕೊಳ್ಳಲು ಸುಲಭ ಎಂಬುದು ಮಂಡಳಿ ಆಯೋಚನೆ ಮಾಡಿದೆ.