Home Jobs ಪಿಯುಸಿ ಮೇಲ್ಪಟ್ಟ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸಿದ್ದಿ!! ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ...

ಪಿಯುಸಿ ಮೇಲ್ಪಟ್ಟ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸಿದ್ದಿ!! ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Hindu neighbor gifts plot of land

Hindu neighbour gifts land to Muslim journalist

ಪಶ್ಚಿಮ ಬಂಗಾಳದ ಪೋಸ್ಟಲ್ ನಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಪಿಯುಸಿ ಮೇಲ್ಪಟ್ಟ ಉದ್ಯೋಗಾಕಾಂಕ್ಷಿಗಳು ಪ್ರಯತ್ನಿಸಬಹುದಾಗಿದೆ.

ಒಟ್ಟು ಹುದ್ದೆಗಳು –
ಪೋಸ್ಟ್ ಮ್ಯಾನ್ -48
ಪೋಸ್ಟಲ್ ಅಸಿಸ್ಟೆಂಟ್ -51
ಸಾರ್ಟಿಂಗ್ ಅಸಿಸ್ಟೆಂಟ್- 25

ಕ್ರೀಡೆಯಲ್ಲಿ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವ ಅಭ್ಯರ್ಥಿಗಳಿಗೆ ಹಾಗೂ ಕ್ರೀಡೆಯಲ್ಲಿ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿರುವ ಕ್ರೀಡಾಪಟುಗಳಿಗೆ ಮೊದಲನೇ ಆದ್ಯತೆ ನೀಡಲಾಗಿದೆ.

ಅಭ್ಯರ್ಥಿಗಳು ವಯೋಮಿತಿಯಲ್ಲಿ ಕನಿಷ್ಠ 18 ಹಾಗೂ ಗರಿಷ್ಠ 27 ಮೀರಿರಬಾರದು. ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ನೇರ ಸಂದರ್ಶನ ಹಾಗೂ ದಾಖಲಾತಿ ಪರಿಶೀಲನೆಯ ಜೊತೆಗೆ ಲಿಖಿತ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.

ಅರ್ಜಿ ಸಲ್ಲಿಸಲು ಡಿಸೆಂಬರ್ 24 ಕೊನೆಯ ದಿನವಾಗಿದ್ದು, ಅಂಚೆ ಮೂಲಕ ಸಲ್ಲಿಸುವ ಅರ್ಜಿಯ ಜೊತೆಗೆ ರೂಪಾಯಿ 100 ಶುಲ್ಕ ಪಾವತಿಸಬೇಕಾಗಿದೆ.
ಅರ್ಜಿಯನ್ನು : ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಪೋಸ್ಟಲ್ ಸರ್ವಿಸಸ್, ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕಚೇರಿ ಪಶ್ಚಿಮ ಬಂಗಾಳ ಸರ್ಕಲ್ ಪಿ-36, ಸಿ.ಆರ್. ಅವೆನ್ಯೂ ಯೋಗಾಯೋಗ್ ಭವನ್ ಕೋಲ್ಕತ್ತಾ -700012 ಇಲ್ಲಿಗೆ ಕಳುಹಿಸತಕ್ಕದ್ದು.

ಹೆಚ್ಚಿನ ಮಾಹಿತಿಗೆ http://indiapost.gov.in ಪೋಸ್ಟಲ್ ಅಧಿಕೃತ ವೆಬ್ಸೈಟ್ ಗೆ ಭೇಟಿಕೊಡಿ.