Home Jobs Job in Transport corporations: ಸಾರಿಗೆ ನಿಗಮಗಳಲ್ಲಿ ಬೃಹತ್‌ ಸಂಖ್ಯೆ ಉದ್ಯೋಗಾವಕಾಶ! ಶೀಘ್ರವೇ 13,415 ಹುದ್ದೆ...

Job in Transport corporations: ಸಾರಿಗೆ ನಿಗಮಗಳಲ್ಲಿ ಬೃಹತ್‌ ಸಂಖ್ಯೆ ಉದ್ಯೋಗಾವಕಾಶ! ಶೀಘ್ರವೇ 13,415 ಹುದ್ದೆ ಭರ್ತಿ

Job in Transport corporations
Image source: search engine gernal

Hindu neighbor gifts plot of land

Hindu neighbour gifts land to Muslim journalist

Job in Transport corporations : ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಖುಷಿಯ ಸುದ್ದಿಯೊಂದನ್ನು ನೀಡಿದ್ದಾರೆ. ಸಚಿವರು ಹೇಳಿದ ಹಾಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಮಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ( Job in Transport corporations) ನೇಮಕಕ್ಕೆ ಸಿದ್ಧತೆ ನಡೆದಿದೆ. ನಾಲ್ಕು ನಿಗಮಗಳಲ್ಲಿ ಖಾಲಿ ಇರುವ 13ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದೆ ಎಂದು ಹೇಳಿದ್ದಾರೆ. ಸಾರಿಗೆ ನಿಗಮದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯದೇ ಖಾಲಿ ಬಿದ್ದಿರುವ ಹುದ್ದೆಗೆ ಸಚಿವರು ಚಾಲನೆ ನೀಡಲು ಮುಂದಾಗಿದ್ದಾರೆ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಈ ಕೆಳಗೆ ನೀಡಲಾಗಿದೆ.

ಕೆಎಸ್‌ಆರ್‌ಟಿಸಿ ಹುದ್ದೆಗಳ ಕುರಿತು ಇಲ್ಲಿದೆ ಮಾಹಿತಿ;
ಚಾಲಕರು- ನೇಮಕಾತಿ ಚಾಲ್ತಿಯಲ್ಲಿರುವ ಹುದ್ದೆ- 3745, ತಾಂತ್ರಿಕ ಸಿಬ್ಬಂದಿ-726
ಚಾಲಕರು- ಹೊಸದಾಗಿ ಭರ್ತಿಗಾಗಿ ಇರುವ ಹುದ್ದೆ- 1433, ತಾಂತ್ರಿಕ ಸಿಬ್ಬಂದಿ-2738
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ : 1773 ನಿರ್ವಾಹಕ ಹುದ್ದೆಗಳು
ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ 186 ಹುದ್ದೆ ನೇಮಕ: ಪಿಯು, ಡಿಗ್ರಿ ವಿದ್ಯಾರ್ಹತೆ ಹೊಂದಿರಬೇಕು.

ಬಿಎಂಟಿಸಿ
ನಿರ್ವಾಹಕರು (ಕಂಡಕ್ಟರ್ ) : 2000
ಚಾಲಕ ಕಂ ನಿರ್ವಾಹಕರು : 1000

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ತೇರ್ಗಡೆ, ಚಾಲನ ಪರವಾನಗಿ- ಚಾಲಕ ಹುದ್ದೆಗೆ
ಪಿಯುಸಿ ತೇರ್ಗಡೆ, ಚಾಲಕ ಪರವಾನಗಿ-ಚಾಲಕ ಕಂ ನಿರ್ವಾಹಕರು
ಐಟಿಐ, ಡಿಪ್ಲೋಮ ತೇರ್ಗಡೆ- ತಾಂತ್ರಿಕ ಸಿಬ್ಬಂದಿ ಹುದ್ದೆಗೆ.

ಹಲವು ವರ್ಷಗಳಿಂದ ಚಾಲಕಮ ನಿರ್ವಾಹಕರು, ತಾಂತ್ರಿಕ ವಿಭಾಗ, ಇನ್ನಿತರ ವಿಭಾಗಗಳಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಈ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಖಾಲಿ ಇರುವ 13,415 ಹುದ್ದೆಗಳ ಭರ್ತಿಗೆ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಕಡಬ : ವಾಹನ ಸವಾರರಿಗೆ ತೊಂದರೆಯಾದ ಕುದುರೆ ಸವಾರಿ : ಪೊಲೀಸರಿಂದ ವಾರಸುದಾರರಿಗೆ ಮುಚ್ಚಳಿಕೆ