Home Education KEA ನಿಂದ ಮಹತ್ವದ ಮಾಹಿತಿ ಪ್ರಕಟ : ವಿವಿಧ ಪರೀಕ್ಷೆಗಳ ಬೆಲ್ ಸಮಯ ವೇಳಾಪಟ್ಟಿ ಬಿಡುಗಡೆ

KEA ನಿಂದ ಮಹತ್ವದ ಮಾಹಿತಿ ಪ್ರಕಟ : ವಿವಿಧ ಪರೀಕ್ಷೆಗಳ ಬೆಲ್ ಸಮಯ ವೇಳಾಪಟ್ಟಿ ಬಿಡುಗಡೆ

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದ ಇಂಜಿನಿಯರ್ ಹಾಗೂ ಇತರೆ ಹುದ್ದೆಗಳು, ರಾಜ್ಯ ಬೀಜ ನಿಗಮ ನಿಯಮಿತದ ಅಸಿಸ್ಟಂಟ್‌ ಮ್ಯಾನೇಜರ್ ಹುದ್ದೆಗಳು, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಹುದ್ದೆಗಳು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಹುದ್ದೆಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಇತ್ತೀಚೆಗೆ ಪರಿಷ್ಕೃತ ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಿರುವ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಬೆಲ್‌ ಸಮಯ ಹಾಗೂ ಸೂಚನೆಗಳ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮುಖ್ಯ ಮಾಹಿತಿ ನೀಡಿದೆ. ಕೆಆರ್‌ಐಡಿಎಲ್, ಕೆಎಸ್‌ಎಸ್‌ಸಿಎಲ್‌, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ, ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದ ವಿವಿಧ ಹುದ್ದೆ ಪರೀಕ್ಷೆಗಳಿಗೆ ಸಂಬಂಧಿಸಿದ ಬೆಲ್‌ ಸಮಯ, ಪ್ರಮುಖ ಸೂಚನೆಗಳನ್ನು ಕೆಇಎ ಬಿಡುಗಡೆ ಮಾಡಿದೆ. ಇದೀಗ ಈ ಎಲ್ಲ ಹುದ್ದೆಗಳ ಪರೀಕ್ಷೆ ದಿನದ ಬೆಲ್‌ಸಮಯ ಸೇರಿದಂತೆ, ಇತರೆ ಪ್ರಮುಖ ಸೂಚನೆಗಳ ಪ್ರಕಟಣೆ ಬಿಡುಗಡೆ ಮಾಡಿದೆ.

ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ ಜೆಇ, ಎಇ, ಎಸ್‌ಡಿಎ, ಎಫ್‌ಡಿಎ ಹುದ್ದೆಗಳ ಪರೀಕ್ಷೆಗೆ ಪರಿಷ್ಕೃತ ವೇಳಾಪಟ್ಟಿಯ ಅನುಸಾರ 2023 ರ ಜನವರಿ 29, ಫೆಬ್ರುವರಿ 05, 06, 07, 12 ರಂದು ಪರೀಕ್ಷೆ ನಡೆಯಲಿವೆ. ಈ ಪರೀಕ್ಷೆಗೆ ಗಂಟೆಗೆ ಹಾಜರಾಗಬೇಕಾದ ಸಮಯ ಹಾಗೂ ಯಾವ್ಯಾವ ಬೆಲ್‌ ಸಮಯ ಹೇಗಿರುತ್ತದೆ ಎಂದು ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಕಿರಿಯ ಪಶುವೈದ್ಯಕೀಯ ಪರೀಕ್ಷಕರು ಹುದ್ದೆಗಳ ಪರೀಕ್ಷೆಗೆ ಬೆಲ್‌ ಸಮಯವನ್ನು ತಿಳಿಯಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು. ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ ವಿಳಾಸ https://cetonline.karnataka.gov.in/kea/ ಕ್ಕೆ ಭೇಟಿ ನೀಡಬಹುದು.

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ 2023 ರ ಜನವರಿ 30, ಫೆಬ್ರುವರಿ 01, 12 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗೂ ಬೆಲ್‌ ಸಮಯ ಬಿಡುಗಡೆ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಈ ಪರೀಕ್ಷೆಗಳ ಕುರಿತಂತೆ ಕೆಇಎ ಮಾಹಿತಿ ನೀಡಿದೆ.ಅರ್ಹ ಅಭ್ಯರ್ಥಿಗಳು ಕೊಠಡಿಯಲ್ಲಿ ಕೆಇಎ ಸೂಚಿಸಿದಂತೆ ನಡೆದುಕೊಳ್ಳಬೇಕಾಗಿದೆ. ಅದಕ್ಕೆ ವಿರುದ್ಧವಾಗಿ ತಪ್ಪು ಎಸಗಿದಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೆಇಎ ಸೂಚಿಸಿದೆ. ಈ ಪರೀಕ್ಷೆಗೆ ಪ್ರವೇಶ ಪತ್ರವನ್ನು ಮತ್ತು ಗುರುತಿನ ಚೀಟಿಯನ್ನು ಪ್ರದರ್ಶಿಸುವ ಮೂಲಕ ಅಭ್ಯರ್ಥಿಗಳು ಪರೀಕ್ಷೆಯ ಕೊಠಡಿಯನ್ನು ಪ್ರವೇಶಿಸಬಹುದಾಗಿದ್ದು, ನಿಗದಿತ ಆಸನದಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.