Home Jobs KSP: ಪೊಲೀಸ್‌ ಹುದ್ದೆ ಆಕಾಂಕ್ಷಿಗಳೇ ಇತ್ತ ಗಮನಿಸಿ, 454 ಪೊಲೀಸ್‌ ಕಾನ್ಸ್‌ಟೇಬಲ್‌ ಪರೀಕ್ಷೆಗೆ ಮತ್ತೊಮ್ಮೆ ದಿನಾಂಕ...

KSP: ಪೊಲೀಸ್‌ ಹುದ್ದೆ ಆಕಾಂಕ್ಷಿಗಳೇ ಇತ್ತ ಗಮನಿಸಿ, 454 ಪೊಲೀಸ್‌ ಕಾನ್ಸ್‌ಟೇಬಲ್‌ ಪರೀಕ್ಷೆಗೆ ಮತ್ತೊಮ್ಮೆ ದಿನಾಂಕ ಬದಲಾವಣೆ!!!

Hindu neighbor gifts plot of land

Hindu neighbour gifts land to Muslim journalist

KSP: ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ 454 ಸಿವಿಲ್‌ (ಪುರುಷ ಮತ್ತು ಮಹಿಳಾ) (ತೃತೀಯ ಲಿಂಗ ಪುರುಷ ಮತ್ತು ಮಹಿಳಾ) ಹಾಗೂ ಸೇವಾ ನಿರತ ಮತ್ತು ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿಗೆ (KSP) ಕುರಿತು ಮತ್ತೊಮ್ಮ ಪರೀಕ್ಷೆ ದಿನಾಂಕ ಮುಂದೂಡಿದ್ದು, ಇದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಹೊಸ ವೇಳಾಪಟ್ಟಿಯನ್ನು ಡಿಐಜಿಪಿ ನೇಮಕಾತಿ, ಸಮನ್ವಯಾಧಿಕಾರಿ ಸಿಪಿಸಿ ನೇಮಕಾತಿ ಸಮಿತಿ, ಡೈರೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌, ನೇಮಕಾತಿ ಬೆಂಗಳೂರು ರವರು ನಿಗದಿಪಡಿಸಿದ್ದಾರೆ.

ಹಿಂದಿನ ವೇಳಾಪಟ್ಟಿ ದಿನಾಂಕ 10-12-2023 ರಂದು ಲಿಖಿತ ಪರೀಕ್ಷೆ ನಡೆಯಲಿದೆ. ನವೆಂಬರ್‌ 5 ಕ್ಕೆ ನಿಗದಿಪಡಿಸಿದ್ದ ಪರೀಕ್ಷೆಯನ್ನು ನವೆಂಬರ್‌ 19 ರಂದು ನಡೆಸಲು ತೀರ್ಮಾನ ಮಾಡಲಾಗಿತ್ತು. ಇದೀಗ ನವೆಂಬರ್ 19 ರ ಬದಲಿಗೆ ಡಿಸೆಂಬರ್ 10 ರಂದು ಪರೀಕ್ಷೆ ದಿನಾಂಕವನ್ನು ನಿಗದಿಪಡಿಸಲಾಗಿದೆ.

ಒಂದು ವಾರ ಮುಂಚಿತವಾಗಿ ಪ್ರವೇಶ ಪತ್ರ ಬಿಡುಗಡೆ ಮಾಡಲಿದೆ. ಹಾಗಾಗಿ ಅಪ್ಲಿಕೇಶನ್‌ ನಂಬರ್ ಹಾಗೂ ಜನ್ಮ ದಿನಾಂಕ ಮಾಹಿತಿ ನೀಡಿ ಲಾಗಿನ್‌ ಆಗುವ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಹಾಗೆನೇ ಇನ್ನೊಂದು ಖುಷಿಯ ಸುದ್ದಿ ಏನೆಂದರೆ 3064 ಸಶಸ್ತ್ರ ಮೀಸಲು ಪೊಲೀಸ್‌ ಕಾನ್ಸ್‌ಟೇಬಲ್‌ (ನಗರ ಸಶಸ್ತ್ರ ಮೀಸಲು/ ಜಿಲ್ಲಾ ಸಶಸ್ತ್ರ ಮೀಸಲು) ಹುದ್ದೆಗಳ ನೇಮಕಾತಿ ಪರೀಕ್ಷೆಯ ದಿನಾಂಕ ಕೂಡಾ ಪ್ರಕಟಿಸುವ ಕುರಿತು ಇನ್ನೊಂದು ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Onion Price Hike:ಒಮ್ಮೆಲೆ ಏರಿಕೆ ಕಂಡ ಈರುಳ್ಳಿ – ರೇಟ್ ಕೇಳಿದ್ರೆ ಕಣ್ಣಲ್ಲಿ ನೀರು ಪಕ್ಕಾ!!