Home Jobs ಕರ್ನಾಟಕ ಸಿಟಿ ಕಾರ್ಪೋರೇಷನ್‌ನಲ್ಲಿ ಹುದ್ದೆ, ಇಂದೇ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ!

ಕರ್ನಾಟಕ ಸಿಟಿ ಕಾರ್ಪೋರೇಷನ್‌ನಲ್ಲಿ ಹುದ್ದೆ, ಇಂದೇ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ!

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗೆ ಉದ್ಯೋಗವಿಲ್ಲದೆ ಅಲೆಯುವ ಯುವಕ-ಯುವತಿಯರ ಸಂಖ್ಯೆ ಹೆಚ್ಚಾಗಿದೆ. ಕೆಲವೊಂದು ಕಂಪನಿಗಳು ಹುದ್ದೆಗೆ ಆಹ್ವಾನಿಸಿದ್ದರೂ ಅನೇಕರಿಗೆ ಮಾಹಿತಿ ದೊರಕಿರುವುದಿಲ್ಲ. ಸದ್ಯ ಹಲವಾರು ಸಂಸ್ಥೆಗಳು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುತ್ತಿದೆ. ಹಾಗೆಯೇ ಇದೀಗ ಕರ್ನಾಟಕ ಸಿಟಿ ಕಾರ್ಪೊರೇಷನ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆಯು ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದು, ಅವುಗಳ ವಿವರ ಈ ಕೆಳಗೆ ನೀಡಲಾಗಿದೆ.

ಹುದ್ದೆಯ ಮಾಸಿಕ ವೇತನ ₹ 17,000ದಿಂದ 28,950 ಆಗಿದೆ. ಹಾಗೆಯೇ ಅರ್ಜಿದಾರರಿಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 55 ವರ್ಷ ಆಗಿದೆ. ಇನ್ನು ಯಾವೆಲ್ಲಾ ಹುದ್ದೆಗಳು ಖಾಲಿ ಇವೆ ಎಂಬುದರ ವಿವರ ಇಲ್ಲಿದೆ.

ಹುದ್ದೆಯ ವಿವರ :
ಚಿಕ್ಕಬಳ್ಳಾಪುರ ಸಿಟಿ ಕಾರ್ಪೊರೇಷನ್- 102
ಹಾಸನ ಸಿಟಿ ಕಾರ್ಪೊರೇಷನ್- 60
ಬಾಲಗಕೋಟೆ ಸಿಟಿ ಕಾರ್ಪೊರೇಷನ್- 438
ವಿಜಯಪುರ ಸಿಟಿ ಕಾರ್ಪೊರೇಷನ್- 151
ದಾವಣಗೆರೆ ಸಿಟಿ ಕಾರ್ಪೊರೇಷನ್- 114
ಬಳ್ಳಾರಿ ಸಿಟಿ ಕಾರ್ಪೊರೇಷನ್- 229
ಚಿತ್ರದುರ್ಗ ಸಿಟಿ ಕಾರ್ಪೊರೇಷನ್- 120

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 13-01-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-2-2023

ಅರ್ಜಿದಾರರು ಯಾವುದೇ ಸಿಟಿ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ನೇರ ಪಾವತಿ/ ಕಲ್ಯಾಣ/ ದಿನಗೂಲಿ ಆಧಾರದ ಮೇಲೆ ಪೌರಕಾರ್ಮಿಕರಾಗಿ ಕನಿಷ್ಠ 2 ವರ್ಷ ಕೆಲಸ ಮಾಡಿದ ಅನುಭವ ಇರಬೇಕು. ಅಂತಹ ಅಭ್ಯರ್ಥಿಗಳು ಮಾತ್ರವೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆ :
ಅಭ್ಯರ್ಥಿಗಳು ಆಫ್ಲೈನ್ ಅಥವಾ ಪೋಸ್ಟ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಯೊಂದಿಗೆ ಬಾಗಲಕೋಟೆ ಮಹಾನಗರ ಪಾಲಿಕೆ, ಚಿಕ್ಕಬಳ್ಳಾಪುರ ಮಹಾನಗರ ಪಾಲಿಕೆ, ಹಾಸನ ಮಹಾನಗರ ಪಾಲಿಕೆ, ವಿಜಯಪುರ ಮಹಾನಗರ ಪಾಲಿಕೆ, ದಾವಣಗೆರೆ ಮಹಾನಗರ ಪಾಲಿಕೆ, ಚಿತ್ರದುರ್ಗ ಮಹಾನಗರ ಪಾಲಿಕೆ ಹಾಗೂ ಬಳ್ಳಾರಿ ಮಹಾನಗರ ಪಾಲಿಕೆಗೆ ಸಲ್ಲಿಸಬೇಕು.