Home Jobs ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗವಕಾಶ | ಎಸ್ ಎಸ್ ಎಲ್ ಸಿ ಪಾಸಾದವರೂ ಅರ್ಜಿ ಸಲ್ಲಿಸಬಹುದು|...

ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗವಕಾಶ | ಎಸ್ ಎಸ್ ಎಲ್ ಸಿ ಪಾಸಾದವರೂ ಅರ್ಜಿ ಸಲ್ಲಿಸಬಹುದು| ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಎ.18 ಕೊನೆಯ ದಿನಾಂಕ

Hindu neighbor gifts plot of land

Hindu neighbour gifts land to Muslim journalist

ಆದಾಯ ತೆರಿಗೆ ಇಲಾಖೆಯಲ್ಲಿ ಸ್ಪೋರ್ಟ್ಸ್ ಕೋಟಾದ ಮೂಲಕ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ : ಆದಾಯ ತೆರಿಗೆ ಇನ್ಸ್‌ಪೆಕ್ಟರ್, ಟ್ಯಾಕ್ಸ್ ಅಸಿಸ್ಟೆಂಟ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ ಸಂಖ್ಯೆ : ಇನ್‌ಕಂ ಟ್ಯಾಕ್ಸ್‌ ಇನ್‌ಸ್ಪೆಕ್ಟರ್-01
ಟ್ಯಾಕ್ಸ್ ಅಸಿಸ್ಟೆಂಟ್ -05
ಮಲ್ಟಿ ಟಾಸ್ಕಿಂಗ್ ಸ್ಟಾಫ್-18

ಒಟ್ಟು 24 ಹುದ್ದೆಗಳು

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಎಪ್ರಿಲ್ 18 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18-04-2022

ವಿದ್ಯಾರ್ಹತೆ: ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು ಇನ್‌ಕಂ ಟ್ಯಾಕ್ಸ್‌ ಇನ್‌ಸ್ಪೆಕ್ಟರ್,ಟ್ಯಾಕ್ಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಅಭ್ಯರ್ಥಿಗಳು ಪದವಿ ಉತ್ತೀರ್ಣರಾಗಿರಬೇಕು

ವಯೋಮಿತಿ: ಮಲ್ಟಿ ಟಾಸ್ಕಿಂಗ್ ಸ್ಟಾಫ್- 18-25 ವರ್ಷಗಳು ಇನ್‌ಕಂ ಟ್ಯಾಕ್ಸ್‌ ಇನ್‌ಸ್ಪೆಕ್ಟರ್- 18-30 ವರ್ಷಗಳು
ಟ್ಯಾಕ್ಸ್ ಅಸಿಸ್ಟೆಂಟ್- 18-27 ವರ್ಷಗಳು

ವೇತನಶ್ರೇಣಿ: ಇನ್‌ಕಂ ಟ್ಯಾಕ್ಸ್‌ ಇನ್‌ಸ್ಪೆಕ್ಟರ್- ಮಾಸಿಕ ರೂ.34,800/- ವೇತನ ಇರುತ್ತದೆ.
ಟ್ಯಾಕ್ಸ್ ಅಸಿಸ್ಟೆಂಟ್ -ಮಾಸಿಕ ರೂ.20,200/- ಹಾಗೂ
ಮಲ್ಟಿ ಟಾಸ್ಕಿಂಗ್ ಸ್ಟಾಫ್-ಮಾಸಿಕ ರೂ.20,200

ಆಯ್ಕೆ ವಿಧಾನ : ಆದಾಯ ತೆರಿಗೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಶಾರ್ಟ್‌ಲಿಸ್ಟಿಂಗ್, ದಾಖಲಾತಿ ಪರಿಶೀಲನೆ ವೈಯಕ್ತಿಕ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಆದಾಯ ತೆರಿಗೆಯ ಹೆಚ್ಚುವರಿ ಆಯುಕ್ತರು,
ಮುಖ್ಯ ಕಚೇರಿ
ಮೊದಲ ಮಹಡಿ, ಕೊಠಡಿ ಸಂಖ್ಯೆ 14,
ಆಯಕಾರ್ ಭವನ್, ಪಿ-7,
ಚೌರಿಂಘೀ ಸ್ಕೋರ್ ಕೊಲ್ಕತ್ತಾ-700069