Home Jobs High Paying Jobs: ಕೈ ತುಂಬಾ ಸಂಬಳ ನೀಡುವ ಬೆಸ್ಟ್ ಕೋರ್ಸ್ ಗಳು ಯಾವುವು ಗೊತ್ತಾ?...

High Paying Jobs: ಕೈ ತುಂಬಾ ಸಂಬಳ ನೀಡುವ ಬೆಸ್ಟ್ ಕೋರ್ಸ್ ಗಳು ಯಾವುವು ಗೊತ್ತಾ? ಇಲ್ಲಿದೆ ಡೀಟೈಲ್ಸ್!

High Paying Jobs

Hindu neighbor gifts plot of land

Hindu neighbour gifts land to Muslim journalist

High Paying Jobs in India: ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಡಿಮೆ ಶುಲ್ಕದಲ್ಲಿ ಕೈ ತುಂಬಾ ಝಣ ಝಣ ಕಾಂಚಾಣ (High Paying Jobs in India)ಬರಲು ಅವಕಾಶ ನೀಡುವ ಕೋರ್ಸ್ ಯಾವುವು ಗೊತ್ತಾ?

ಶಿಕ್ಷಣ(Education) ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪಿಯುಸಿ (Second PUC)ಮುಗಿಯುತ್ತಿದ್ದಂತೆ ಮುಂದೇನು ಎಂಬ ಪ್ರಶ್ನೆ ವಿದ್ಯಾರ್ಥಿಗಳಿಗೆ (Students)ಪೋಷಕರಿಗೆ(Parents) ಕಾಡುವುದು ಸಹಜ. ನೀಟ್, ಜೆಇಇ, ಸಿಇಟಿ ಬಗ್ಗೆ ಮಾಹಿತಿ ಮತ್ತು ಆಸಕ್ತಿ ಹೊಂದಿರುವ ದ್ವಿತೀಯ ಪಿಯುಸಿ ಈ ಕುರಿತು ತಯಾರಿಯಲ್ಲಿ ತೊಡಗುವುದು ಸಹಜ. ಇದೀಗ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ(Second Puc Students )ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ. ಪಿಯುಸಿ ನಂತರ ಮುಂದೆ ಯಾವ ಕೋರ್ಸ್ ಮಾಡಬೇಕು ಎನ್ನುವ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗಾಗಿ ಕೆಲವು ಕೋರ್ಸ್ಗಳ ಮಾಹಿತಿ ಇಲ್ಲಿದೆ.

ಪಿಯುಸಿ ರಿಸಲ್ಟ್ ಬರುತ್ತಿದ್ದಂತೆ ಮುಂದೆ ಯಾವ ಕೋರ್ಸ್ ಆಯ್ಕೆ ಮಾಡುವುದು ಎಂಬ ಪ್ರಶ್ನೆ ವಿದ್ಯಾರ್ಥಿಗಳಿಗೆ ಪೋಷಕರಿಗೆ ಕಾಡುವುದು ಸಹಜ. ಬಹುತೇಕ ವಿದ್ಯಾರ್ಥಿಗಳು ಡಾಕ್ಟರ್, ಎಂಜಿನಿಯರ್ ಎಂದು ಬಿಡುತ್ತಾರೆ. ಇನ್ನು ಕೆಲವು ವಿದ್ಯಾರ್ಥಿಗಳು ಕೈ ತುಂಬಾ ಸಂಬಳ ಸಿಗುವ ಉದ್ಯೋಗ ನೀಡುವ ಕೋರ್ಸ್ ಯಾವುದು ಎಂಬ ಹುಡುಕಾಟದಲ್ಲಿ ನಿರತ ರಾಗಿರುತ್ತಾರೆ. ಈ ರೀತಿ ಕೋರ್ಸ್ ಹುಡುಕುವ ವಿದ್ಯಾರ್ಥಿಗಳಿಗಾಗಿ ಉತ್ತಮ ಆದಾಯ ನೀಡಬಲ್ಲ ಕೋರ್ಸ್ ಗಳ ಮಾಹಿತಿ ಇಲ್ಲಿದೆ ನೋಡಿ.

# ಸಾಫ್ಟ್‌ವೇರ್ ಇಂಜಿನಿಯರ್
ಪಿಯುಸಿಯಲ್ಲಿ ವಿಜ್ಞಾನ ವಿಷಯ (Science Subject)ಆಯ್ಕೆ ಮಾಡಿಕೊಂಡಿದ್ದರೆ ಕೋಡಿಂಗ್ ಕೋರ್ಸ್ ಗೆ(Coding Course) ಸೇರಬಹುದು. ಸಾಫ್ಟ್‌ವೇರ್ ಅನ್ನು ಕೋಡಿಂಗ್ ಮೂಲಕ ರಚಿಸಲಾಗುತ್ತದೆ. ಎನ್‌ಐಟಿ, ಐಐಟಿ ಸೇರಿದಂತೆ ಹಲವು ಖಾಸಗಿ ಸಂಸ್ಥೆಗಳು ಈ ಕೋರ್ಸ್ ಅನ್ನು ನಡೆಸುತ್ತವೆ. ಈ ಕೋರ್ಸ್ ಮಾಡಿದ ಬಳಿಕ, ತಿಂಗಳಿಗೆ 1 ರಿಂದ 10 ಲಕ್ಷ ರೂ.ಗಳ ಆರಂಭಿಕ ಗಳಿಕೆ ಪಡೆಯಬಹುದು.

# ಡಾಟಾ ಅನಾಲಿಸ್ಟ್
ಪಿಯುಸಿ ಮುಗಿದ ಬಳಿಕ ಡಾಟಾ ಅನಾಲಿಸ್ಟ್ ಕೋರ್ಸ್ ಮಾಡುವ ಬಗ್ಗೆ ಕೂಡ ಚಿಂತನೆ ಮಾಡಬಹುದು. ಡಾಟಾ ಅನಾಲಿಸ್ಟ್ ಕೋರ್ಸ್ ಮಾಡುವ ಮುಖಾಂತರ ಭಾರತದಲ್ಲಿ ಆರಂಭದಲ್ಲಿ ತಿಂಗಳಿಗೆ 1 ಲಕ್ಷದಿಂದ 5 ಲಕ್ಷ ರೂಪಾಯಿಗಳನ್ನು ಗಳಿಕೆ ಮಾಡಲು ಅವಕಾಶವಿದೆ.

# ಸೈಬರ್ ಸೆಕ್ಯುರಿಟಿ ವಿಶ್ಲೇಷಕ
ಹ್ಯಾಕರ್‌ಗಳು(Hackers) ಕಂಪನಿಗಳ ಡೇಟಾವನ್ನು (Data Hacking) ಹ್ಯಾಕ್ ಮಾಡಿ, ಜನರನ್ನು ಬ್ಲ್ಯಾಕ್‌ಮೇಲ್(Blackmail) ಮಾಡುವ ಪ್ರಕರಣ ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಬಹುತೇಕ ಎಲ್ಲಾ ಕಂಪನಿಗಳು ಡೇಟಾವನ್ನು ಸುರಕ್ಷಿತವಾಗಿರಿಸಲು ಸೈಬರ್ ಸೆಕ್ಯುರಿಟಿ ವಿಶ್ಲೇಷಕರನ್ನು ನೇಮಕ ಮಾಡುತ್ತದೆ. ಈ ಕೋರ್ಸ್ ಮಾಡುವುದರಿಂದ ಕೋಟಿಗಟ್ಟಲೆ ವೇತನ ಪಡೆಯಬಹುದು.

#ಇನ್ವೆಸ್ಟ್ ಮೆಂಟ್ ಬ್ಯಾಂಕರ್ :
ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಗಳು ಹೂಡಿಕೆಯ ಮೂಲಕ ಉತ್ತಮ ಲಾಭ ಗಳಿಕೆ ಮಾಡುವ ವಿಧಾನ ಹೇಗೆ ಎಂಬ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಾರೆ. ಇದರ ಜೊತೆಗೆ ಈ ರೀತಿಯ ಹೂಡಿಕೆಗಳ( Savings)ಬಗ್ಗೆ ಮಾಹಿತಿ ನೀಡುತ್ತಾರೆ. ಹೂಡಿಕೆಯ ಬಗ್ಗೆ ನಿಮಗೂ ಆಸಕ್ತಿ ಇದ್ದಲ್ಲಿ, ಈ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮುಂದುವರಿಸಬಹುದಾಗಿದ್ದು, ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಗಳು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಾರೆ.

# ಮೆಷಿನ್ ಲರ್ನಿಂಗ್ ಎಕ್ಸ್ಪರ್ಟ್ :
ಇಂದು ನಾವು ದೈಹಿಕವಾಗಿ ಮಾಡುವ ಅದೆಷ್ಟೋ ಕೆಲಸಗಳಿಗೆ ಯಂತ್ರಗಳಿಗೆ ಅವಲಂಬಿತರಾಗಿದ್ದೇವೆ. ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ಸ್ಟಾಲ್ ಮಾಡಲು ಅಗತ್ಯವಿರುವ ಸಾಫ್ಟ್‌ವೇರ್ ಅನ್ನು ಮೆಷಿನ್ ಲರ್ನಿಂಗ್ ಎಕ್ಸ್ಪರ್ಟ್ ಮಾಡುತ್ತಾರೆ. ಸಾಫ್ಟ್ ವೇರ್ ಡೆವೆಲಪ್( Software Developement) ಮಾಡುವ ಕಾರ್ಯವನ್ನು ಇವರು ಮಾಡುತ್ತಾರೆ. ದೇಶದ ಅನೇಕ ಸಂಸ್ಥೆಗಳು ಈ ರೀತಿಯ ಕೋರ್ಸ್‌ಗಳನ್ನು ನಡೆಸುತ್ತವೆ ಈ ಕೋರ್ಸ್ ಮಾಡುವ ಮೂಲಕ ಯುವಕರು 50,000 ರಿಂದ 1,00,000 ರೂಗಳ ಆರಂಭಿಕ ವೇತನ ಪಡೆಯಲು ಅವಕಾಶವಿದೆ.