Home Jobs Postal Circle Driver Recruitment: ಕರ್ನಾಟಕ ಅಂಚೆಯಲ್ಲಿ ಉದ್ಯೋಗವಕಾಶ! ಸೆ.15 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ!

Postal Circle Driver Recruitment: ಕರ್ನಾಟಕ ಅಂಚೆಯಲ್ಲಿ ಉದ್ಯೋಗವಕಾಶ! ಸೆ.15 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ!

Postal Circle Driver Recruitment

Hindu neighbor gifts plot of land

Hindu neighbour gifts land to Muslim journalist

Postal Circle Driver Recruitment : ಕರ್ನಾಟಕ ಅಂಚೆ ವೃತ್ತದ ವಿವಿಧ ಡಿವಿಷನ್‌ಗಳಲ್ಲಿ ಚಾಲಕ ಹುದ್ದೆಯು(Postal Circle Driver Recruitment) ಖಾಲಿಯಿದ್ದು,ಇದರ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತರು ಈ ಹುದ್ದೆಗಳಿಗೆ ಸೆಪ್ಟೆಂಬರ್ 15 ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆ ಹೆಸರು : ಚಾಲಕರು
ಹುದ್ದೆಗಳ ಸಂಖ್ಯೆ : 28
ಉದ್ಯೋಗ ಇಲಾಖೆ : ಅಂಚೆ ಇಲಾಖೆ
ನೇಮಕಾತಿ ಪ್ರಾಧಿಕಾರ : ಬೆಂಗಳೂರು ಮೇಲ್ ಮೋಟಾರು ಸೇವೆಯ ವ್ಯವಸ್ಥಾಪಕರ ಕಚೇರಿ

ಅಂಚೆ ಇಲಾಖೆಯು ಬೆಂಗಳೂರು ಮೇಲ್ ಮೋಟಾರು ಸೇವೆಯ ವ್ಯವಸ್ಥಾಪಕರ ಕಚೇರಿಗೆ ಇದೀಗ ಖಾಲಿ ಇರುವ ಚಾಲಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:
ಅರ್ಜಿ ನಮೂನೆಯನ್ನು ಇಂಡಿಯನ್‌ ಪೋಸ್ಟ್‌ ಅಧಿಕೃತ ವೆಬ್‌ಸೈಟ್‌ www.indianpost.gov.in ನಲ್ಲಿ ಪಡೆಯಬಹುದು. ಇಲ್ಲವೇ ಸದರಿ ಕಚೇರಿಯಲ್ಲಿ ಕೂಡ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಅವಶ್ಯಕ ದಾಖಲೆಗಳ ಜೊತೆಗೆ ಕೆಳಗಿನ ವಿಳಾಸಕ್ಕೆ ಸೆಪ್ಟೆಂಬರ್ 15, 2023 ಕ್ಕೆ ತಲುಪುವ ಹಾಗೆ ಕಳುಹಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ :The Manager, Mail Motor Service, Bengaluru- 560001.

ಚಾಲಕ ಹುದ್ದೆಗಳ ಪಟ್ಟಿ.
ಹುದ್ದೆಗಳ ಸಂಖ್ಯೆ ಚಿಕ್ಕೋಡಿ- 1
ಕಲಬುರಗಿ- 1
ಧಾರವಾಡ- 1
ಗದಗ- 1
ಕಾರವಾರ- 1
ಎಂಎಂಎಸ್ ಬೆಂಗಳೂರು-15
ಮಂಡ್ಯ-1
ಮೈಸೂರು-3
ಪುತ್ತೂರು- 1
ಶಿವಮೊಗ್ಗ- 1
ಉಡುಪಿ-1
ಕೋಲಾರ- 1
ಒಟ್ಟು- 28

ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು ಹೀಗಿವೆ:
ಎಸ್‌ಎಸ್‌ಎಲ್‌ಸಿ / 10th ಪಾಸಾಗಿರಬೇಕು.ಲಘು ವಾಹನ / ಭಾರೀ ವಾಹನ ಚಾಲನ ಪರವಾನಗಿ (ಡ್ರೈವಿಂಗ್ ಲೈಸನ್ಸ್‌) ಹೊಂದಿರಬೇಕು. ಮೋಟಾರು ಮೆಕ್ಯಾನಿಷಮ್ ಅರಿವು ಇರಬೇಕು.ಕನಿಷ್ಠ 3 ವರ್ಷಗಳ ಲಘು ವಾಹನ / ಭಾರೀ ವಾಹನ ಚಾಲನೆಯ ಅನುಭವ ಹೊಂದಿರಬೇಕು. ಹೋಮ್‌ ಗಾರ್ಡ್‌, ನಾಗರಿಕ ಸ್ವಯಂ ಸೇವಕರು, ಸಶಸ್ತ್ರ ಪಡೆಗಳ ಮಾಜಿ ಸಿಬ್ಬಂದಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.ವಯಸ್ಸಿನ ಅರ್ಹತೆ ಗಮನಿಸಿದರೆ, ಅರ್ಜಿ ಸಲ್ಲಿಸುವ ಕೊನೆ ದಿನಾಂಕಕ್ಕೆ ಗರಿಷ್ಠ 56 ವರ್ಷ ವಯಸ್ಸು ಮೀರಿರಬಾರದು.

ಮೊದಲಿಗೆ 2 ವರ್ಷಗಳಿಗೆ ಪ್ರೊಬೇಷನ್‌ ಅವಧಿಯಲ್ಲಿ ನಿಯೋಜನೆ ಮಾಡಿಕೊಳ್ಳಲಾಗುತ್ತದೆ. ಇದರ ಜೊತೆಗೆ 3 ವರ್ಷ ಹುದ್ದೆಗೆ ನಿಯೋಜನೆ ಮಾಡಿಕೊಳ್ಳಲಾಗುತ್ತದೆ. 7ನೇ ವೇತನ ಆಯೋಗದ ಅನುಸಾರ, ರೂ.19,900-63,200 ವರೆಗೆ ಮಾಸಿಕ ವೇತನ ನೀಡಲಾಗುತ್ತದೆ.

ಇದನ್ನೂ ಓದಿ: ಅತ್ತಿಗೆ ಮೇಲೆ ಕಣ್ಣು ಹಾಕಿದ ಸ್ನೇಹಿತ! ಅನಂತರ ನಡೆದದ್ದೇ ಅನಾಹುತ!