Home Jobs ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ| ಭಾರತದಲ್ಲಿ ಹೊಸ ಕಚೇರಿ ನಿರ್ಮಿಸಲಿರುವ ಗೂಗಲ್ | ಆಕರ್ಷಕ ವೇತನದ ಜೊತೆಗೆ...

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ| ಭಾರತದಲ್ಲಿ ಹೊಸ ಕಚೇರಿ ನಿರ್ಮಿಸಲಿರುವ ಗೂಗಲ್ | ಆಕರ್ಷಕ ವೇತನದ ಜೊತೆಗೆ ಅನೇಕ ಸೌಲಭ್ಯ|

Hindu neighbor gifts plot of land

Hindu neighbour gifts land to Muslim journalist

ಕೆಲಸದ ಆಕಾಂಕ್ಷಿಗಳಿಗೆ ಇಲ್ಲಿದೆ ಸಿಹಿಸುದ್ದಿ. ಗೂಗಲ್ ಸಂಸ್ಥೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಭರ್ಜರಿ ಸಿಹಿ ಸುದ್ದಿ. ಹೌದು ಗೂಗಲ್ ಶೀಘ್ರದಲ್ಲೇ ಭಾರತದಲ್ಲಿ ಹೊಸ ಕಚೇರಿಯನ್ನು ತೆರೆಯಲಿದೆ. ಪುಣೆಯಲ್ಲಿ ಈ ಕಚೇರಿ ಸ್ಥಾಪಿಸಲಾಗುತ್ತದೆ. ವರ್ಷದ ದ್ವಿತೀಯಾರ್ಧದಲ್ಲಿ ಪುಣೆಯಲ್ಲಿ ಗೂಗಲ್ ತನ್ನ ಹೊಸ ಕಚೇರಿಯನ್ನು ತೆರೆಯುತ್ತದೆ.

ಹೊಸ ನೇಮಕಾತಿಗಳ ಪ್ರಕ್ರಿಯೆಯು ಗೂಗಲ್ ನ ಗುರುಗ್ರಾಮ, ಹೈದರಬಾದ್ ಮತ್ತು ಬೆಂಗಳೂರು ಕಚೇರಿಯಲ್ಲಿ ನಡೆಯುತ್ತಿದೆ. ಸುಧಾರಿತ ಕ್ಲೌಡ್ ತಂತ್ರಜ್ಞಾನಕ್ಕಾಗಿ ಗೂಗಲ್ ಈ ಹೊಸ ನೇಮಕಾತಿಯನ್ನು ಮಾಡುತ್ತಿದೆ.

ಭಾರತವು ಗೂಗಲ್ ಗೆ ಉತ್ತಮ ಸ್ಥಳವಾಗಿದೆ. ಗೂಗಲ್ ಕ್ಲೌಡ್ ಗೆ ಅಗತ್ಯವಿರುವ ಟ್ಯಲೆಂಟ್ ಭಾರತದಲ್ಲಿದೆ ಎಂದು ಭಾರತದ ಗೂಗಲ್ ಕ್ಲೌಡ್ ಇಂಜಿನಿಯರಿಂಗ್ ವಿಪಿ ಅನಿಲ್ ಬನ್ಸಾಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳು ಭಾಗವಹಿಸಿ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ಈ ಕೆಲಸಕ್ಕೆ ಆಯ್ಕೆಯಾದರೆ ಆಕರ್ಷಕ ವೇತನದ ಜೊತೆಗೆ ಅನೇಕ ಸೌಲಭ್ಯಗಳನ್ನು ಅಭ್ಯರ್ಥಿಗಳು ಪಡೆಯಬಹುದು.