Home Education PUC ಆದ ಕೂಡಲೇ ಜಾಬ್ ಬೇಕೇ? ಹಾಗಾದರೆ ಈ ಕೋರ್ಸ್​ ಮಾಡಿ ಕೆಲಸ ಗಿಟ್ಟಿಸಿಕೊಳ್ಳಿ

PUC ಆದ ಕೂಡಲೇ ಜಾಬ್ ಬೇಕೇ? ಹಾಗಾದರೆ ಈ ಕೋರ್ಸ್​ ಮಾಡಿ ಕೆಲಸ ಗಿಟ್ಟಿಸಿಕೊಳ್ಳಿ

Hindu neighbor gifts plot of land

Hindu neighbour gifts land to Muslim journalist

ಎಷ್ಟೋ ಜನರು ಮನೆಯಲ್ಲಿನ ಆರ್ಥಿಕ ಸಮಸ್ಯೆಯಿಂದ ಅಥವಾ ಇನ್ನೇನೋ ಕಾರಣಗಳಿಂದಾಗಿ ಪಿಯುಸಿಗೆ ತಮ್ಮ ಶಿಕ್ಷಣವನ್ನು ಜಖಂ ಮಾಡಿ, ಮುಂದೆ ಉದ್ಯೋಗದ ಹುಡುಕಾಟಕ್ಕೆ ತೊಡಗುತ್ತಾರೆ. ಅದರಲ್ಲಿ ಹಲವರಿಗೆ ಕೆಲಸ ಸಿಗುವುದು ಸ್ವಲ್ಪ ಕಡಿಮೆಯೇ, ಯಾಕಂದ್ರೆ ಪಿಯುಸಿ ಆಗಿರೋದು ಯಾರು ಕೆಲಸ ಕೊಡುತ್ತಾರೆ ಅಲ್ವಾ! ಈ ಸಮಸ್ಯೆ ಎದುರಾದವರಿಗೆ ಉತ್ತಮ ಸಲಹೆ ಇಲ್ಲಿದೆ.

PUC ಆದ ಕೂಡಲೇ ನೀವು ಜಾಬ್​ ಮಾಡಬೇಕೆಂದು ಬಯಸುತ್ತಿದ್ದರೆ ಅಥವಾ ಪಿಯುಸಿ ಪೂರ್ಣಗೊಂಡ ನಂತರ ಕೆಲಸಕ್ಕೆಂದು ಅಲೆದು ಜಾಬ್ ಸಿಗದೇ ಬೇಸತ್ತಿರುವವರೇ ಇಲ್ಲಿ ತಿಳಿಸಿರುವ ಕೋರ್ಸ್​ಗಳನ್ನು ಮಾಡಿದರೆ ನಿಮಗೆ ಜಾಬ್​ ಸಿಗುವುದು ಖಂಡಿತ. ಇನ್ನೂ ಈ ಕೋರ್ಸ್ ಕೇವಲ ಅಲ್ಪಾವಧಿಯದ್ದಾಗಿದ್ದು, ನಿಮ್ಮ ಪಿಯುಸಿ ಪ್ರಮಾಣ ಪತ್ರದೊಂದಿಗೆ ಈ ಕೋರ್ಸ್ ನ ಸರ್ಟಿಫಿಕೇಟ್ ಕೂಡ ಇದ್ದರೆ ಅಧಿಕ ಸಂಬಳದ ಒಳ್ಳೆಯ ಉದ್ಯೋಗ ಸಿಗುತ್ತದೆ. ಇನ್ನೂ ಆ ಕೋರ್ಸ್ ಯಾವುದೆಲ್ಲಾ ಎಂಬ ಮಾಹಿತಿ ಇಲ್ಲಿದೆ.

ಜಾಬ್ ಓರಿಯೆಂಟೆಡ್ ಶಾರ್ಟ್ ಟೈಮ್ ಕೋರ್ಸ್‌ ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಅನ್ನೋದು 10ನೇ ಮತ್ತು 12ನೇ ತರಗತಿ ಪಾಸಾದವರಿಗೆ ಉತ್ತಮ ಆಯ್ಕೆಯಾಗಿದೆ. ಈ ಕೋರ್ಸ್ ಅನ್ನು 2 ರಿಂದ 3 ತಿಂಗಳಲ್ಲಿ ಪೂರ್ಣಗೊಳಿಸಬಹುದು. ಇದರ ಶುಲ್ಕ 10 ಸಾವಿರದಿಂದ 50 ಸಾವಿರದವರೆಗೆ ಇರುತ್ತದೆ.

ಇನ್ನೂ ಬಿಸಿನೆಸ್ ಅಕೌಂಟಿಂಗ್ ಮತ್ತು ಟ್ಯಾಕ್ಸೇಶನ್ ಪದವಿಪೂರ್ವ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉತ್ತಮ ಕೋರ್ಸ್ ಯಾವುದೆಂದರೆ, ಬಿಸಿನೆಸ್ ಅಕೌಂಟಿಂಗ್ ಮತ್ತು ಟ್ಯಾಕ್ಸೇಶನ್ ಆಗಿದೆ. ಈ ಕೋರ್ಸ್ ನ ಅವಧಿ 3 ತಿಂಗಳಾಗಿದ್ದು , ಇದರ ಶುಲ್ಕ ಸುಮಾರು 40 ರಿಂದ 50 ಸಾವಿರದವರೆಗೆ ಇದೆ. ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್‌ನಲ್ಲಿ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಬಯಸುವ ಜನರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಹಾಗೇ ಇದೀಗ ಹೆಚ್ಚಿನ ಬೇಡಿಕೆ ಇರೋದು ಜಾವಾ ಡೆವಲಪರ್ಸ್ ಗೆ. ನೀವು ಯಾವುದೇ ಐಟಿ ಕಂಪನಿಗೆ ಹೋದರೂ ಅಲ್ಲಿ ಜಾವಾ ಅಗತ್ಯವಾಗಿರುತ್ತದೆ. ನಿಮಗೆ ಕಂಪ್ಯೂಟರ್ ಬಗ್ಗೆ ಉತ್ತಮ ತಿಳುವಳಿಕೆ ಇದ್ದರೆ ಮತ್ತು ಸಿ ಪ್ರೋಗ್ರಾಮಿಂಗ್ ಕೋರ್ಸ್ ಮಾಡಿದ್ದರೆ ನೀವು ಕೂಡ ಜಾವಾ ಡೆವಲಪರ್ ಕೋರ್ಸ್ ಮಾಡಬಹುದು. ಕಂಪ್ಯೂಟರ್ ಬಗ್ಗೆ ಸ್ವಲ್ಪವಾದರೂ ತಿಳುವಳಿಕೆ ಇದ್ದರೆ ನಿಮಗೆ ಈ ಕೋರ್ಸ್ ಮಾಡಲು ಸುಲಭವಾಗುತ್ತದೆ. ಇನ್ನೂ ಈ ಅಲ್ಪಾವಧಿ ಕೋರ್ಸ್ 3 ರಿಂದ 6 ತಿಂಗಳವರೆಗಿನದ್ದಾಗಿದೆ. ಇದರ ಶುಲ್ಕ ಸುಮಾರು 5 ರಿಂದ 6 ಸಾವಿರ ಇರುತ್ತದೆ.