Home Jobs ಬ್ಯಾಂಕ್ ಆಫ್ ಬರೋಡಾದ ವಿವಿಧ ಶಾಖೆಗಳಲ್ಲಿ  ಉದ್ಯೋಗವಕಾಶ | ಖಾಲಿ ಇರುವ ಹುದ್ದೆಗಳಿಗೆ ಪದವೀಧರರಿಂದ ಅರ್ಜಿ...

ಬ್ಯಾಂಕ್ ಆಫ್ ಬರೋಡಾದ ವಿವಿಧ ಶಾಖೆಗಳಲ್ಲಿ  ಉದ್ಯೋಗವಕಾಶ | ಖಾಲಿ ಇರುವ ಹುದ್ದೆಗಳಿಗೆ ಪದವೀಧರರಿಂದ ಅರ್ಜಿ ಆಹ್ವಾನ

Hindu neighbor gifts plot of land

Hindu neighbour gifts land to Muslim journalist

ರಾಜ್ಯದ ಪ್ರಮುಖ ಬ್ಯಾಂಕ್ ಆಗಿದ್ದ ವಿಜಯಾ ಬ್ಯಾಂಕ್‌ಅನ್ನು ತನ್ನೊಡಲಿಗೆ ಸೇರಿಸಿಕೊಂಡಿರುವ ಬ್ಯಾಂಕ್ ಆಫ್ ಬರೋಡಾದ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.

ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳು 5 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಬ್ಯಾಂಕ್‌ನ ಅವಶ್ಯಕತೆಗೆ ಅನುಗುಣವಾಗಿ ಅವಧಿ ವಿಸ್ತರಿಸಬಹುದಾಗಿದೆ. ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವ, ಪಡೆಯುತ್ತಿರುವ/ ಪಡೆಯುತ್ತಿದ್ದ ವೇತನ, ಕೌಶಲ ಆಧರಿಸಿ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನ ನಿರ್ಧರಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಹುದ್ದೆಗಳ ವಿವರ

*ಸೀನಿಯರ್ ರಿಲೇಷನ್‌ಶಿಪ್ ಮ್ಯಾನೇಜರ್ – 326
*ಇ-ವೆಲ್ತ್ ರಿಲೇಷನ್‌ಶಿಪ್ ಮ್ಯಾನೇಜರ್ – 50

ಶೈಕ್ಷಣಿಕ ಅರ್ಹತೆ:

ಯಾವುದೇ ಸ್ನಾತಕೋತ್ತರ ಪದವಿ ಅಥವಾ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ ಮಾಡಿರಬೇಕು. ಎನ್‌ಐಎಸ್‌ಎಂ/ಐಆರ್‌ಡಿಎಯಿಂದ ರೆಗ್ಯುಲೇಟರಿ ಪ್ರಮಾಣಪತ್ರ ಪಡೆದಿರಬೇಕು. ಕನಿಷ್ಠ ಒಂದೂವರೆ ವರ್ಷದಿಂದ ಎರಡು ವರ್ಷಗಳ ವೃತ್ತಿ ಅನುಭವ ಅವಶ್ಯ.

ವಯೋಮಿತಿ:

1.11.2021ಕ್ಕೆ ಅನ್ವಯವಾಗುವಂತೆ
ಸೀನಿಯರ್ ರಿಲೇಷನ್‌ಶಿಪ್ ಮ್ಯಾನೇಜರ್‌ಗೆ ಕನಿಷ್ಠ 24, ಗರಿಷ್ಠ 35 ವರ್ಷ, ಇ-ವೆಲ್ತ್ ಮ್ಯಾನೇಜರ್‌ಗೆ ಕನಿಷ್ಠ 23, ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವ ಆಧರಿಸಿ ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನ ಅಥವಾ ಗುಂಪುಚರ್ಚೆ ಅಥವಾ ಇತರ ಆಯ್ಕೆ ಪ್ರಕ್ರಿಯೆಗೆ ಒಳಪಡಿಸಲಾಗುವುದು. ಅಂತಿಮ ಆಯ್ಕೆಪಟ್ಟಿಯನ್ನು ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗುವುದು.

ಎಲ್ಲೆಲ್ಲಿ ನೇಮಕಾತಿ:

ಬೆಂಗಳೂರು-32, ಅಹಮದಾಬಾದ್-25, ಗಾಜಿಯಾಬಾದ್-8, ಕಾನ್ಸುರ್-5, ದೆಹಲಿ-43, ವಾರಣಾಸಿ-3, ಅಲಹಾಬಾದ್-5, ಗುರುಗಾಂವ್- 4, ಕೋಲ್ಕತ್ತ-4, ನೋಯ್ಡಾ-4, ವಡೋದರಾ-18, ಹೈದರಾಬಾದ್-12, ಲಖನೌ-6, ಪುಣೆ-10, ಚೆನ್ನೈ -12, ಇಂದೋರ್-2, ಲುಧಿಯಾನಾ-2, ರಾಜ್‌ಕೋಟ್-7, ಕೊಯಮತ್ತೂರು-4, ಜೈಪುರ-5, ಮುಂಬೈ-141, ಸೂರತ್-11, ಫರೀದಾಬಾದ್-4, ಜೋಧಪುರ್-3, ನಾಗ್ಪುರ್-4, ಉದಯಪುರ್-2 ಸ್ಥಾನಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಮೀಸಲಾತಿ:

ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 111, ಎಸ್ಸಿಗೆ 52, ಎಸ್ಟಿಗೆ 46, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 115, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 52 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ 27 ಸ್ಥಾನ ಕಾಯ್ದಿರಿಸಲಾಗಿದೆ.

ಅರ್ಜಿ ಶುಲ್ಕ:

ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳಿಗೆ 100 ರೂ., ಉಳಿದ ಅಭ್ಯರ್ಥಿಗಳಿಗೆ 600 ರೂ. ಶುಲ್ಕ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 9.12.2021

ಅಧಿಸೂಚನೆಗೆ: https://bit.ly/3nOn5Ys

ಮಾಹಿತಿಗೆ: http://www.bankofbaroda.ion