Home Business SBI Apprentice Recruitment 2023: ಎಸ್‌ಬಿಐನಲ್ಲಿ ಒಟ್ಟು 6160 ಅಪ್ರೆಂಟಿಸ್‌ಷಿಪ್‌ ಹುದ್ದೆಗಳು! ಆನ್‌ಲೈನ್‌ ಮೂಲಕ ಅರ್ಜಿ...

SBI Apprentice Recruitment 2023: ಎಸ್‌ಬಿಐನಲ್ಲಿ ಒಟ್ಟು 6160 ಅಪ್ರೆಂಟಿಸ್‌ಷಿಪ್‌ ಹುದ್ದೆಗಳು! ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ, ಇಲ್ಲಿದೆ ಕಂಪ್ಲೀಟ್‌ ವಿವರ!

SBI Apprentice Recruitment 2023
Image source: Adda247

Hindu neighbor gifts plot of land

Hindu neighbour gifts land to Muslim journalist

SBI Apprentice Recruitment 2023: ಉದ್ಯೋಗಾಕಾಂಕ್ಷಿಗಳಿಗೆ (Job Alert) ಸಿಹಿ ಸುದ್ದಿ ಇಲ್ಲಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು (State bank of india) ಎಸ್‌ಬಿಐ ಅಪ್ರೆಂಟಿಸ್‌ಷಿಪ್‌ ರಿಕ್ರೂಟ್‌ಮೆಂಟ್‌ 2023ರ ಅಧಿಸೂಚನೆಯನ್ನು ಪ್ರಕಟಿಸಿದೆ (SBI Apprentice Recruitment 2023). ಎಸ್‌ಬಿಐನಲ್ಲಿ ಒಟ್ಟು 6160 ಅಪ್ರೆಂಟಿಸ್‌ಷಿಪ್‌ ಹುದ್ದೆಗಳಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗೆಗಿನ ಇಲ್ಲಿದೆ ಕಂಪ್ಲೀಟ್‌ ವಿವರ ಇಲ್ಲಿದೆ!!.

ಹುದ್ದೆಯ ವಿವರ:
ಅಪ್ರೆಂಟಿಸ್‌ಷಿಪ್‌ ಹುದ್ದೆ – 6160
ವಿದ್ಯಾರ್ಹತೆ : ಪದವಿ

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: ಸೆಪ್ಟೆಂಬರ್‌ 1, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್‌ 21, 2023
ಲಿಖಿತ ಪರೀಕ್ಷೆ ದಿನಾಂಕ: ಅಕ್ಟೋಬರ್‌/ ನವೆಂಬರ್‌ 2023

ಆಯ್ಕೆ ಪ್ರಕ್ರಿಯೆ :
• ಅಭ್ಯರ್ಥಿಗಳನ್ನು ಆನ್‌ಲೈನ್‌ ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.
• ಜನರಲ್‌ ಇಂಗ್ಲಿಷ್‌ ಜತೆಗೆ ಕನ್ನಡ ಇತ್ಯಾದಿ ಸ್ಥಳೀಯ ಭಾಷಾ ಪರೀಕ್ಷೆ ನಡೆಸಲಾಗುತ್ತದೆ.
• ಲಿಖಿತ ಪರೀಕ್ಷೆಯಲ್ಲಿ 100 ಪ್ರಶ್ನೆಗಳು ಮತ್ತು 100 ಅಂಕಗಳು ಇರುತ್ತವೆ. 60 ನಿಮಿಷದ ಪರೀಕ್ಷೆ.

ಅರ್ಜಿ ಶುಲ್ಕ :
• ಸಾಮಾನ್ಯ, ಒಬಿಸಿ, ಇಡಬ್ಲ್ಯುಎಸ್‌ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 300 ರೂ. ಇರಲಿದೆ‌.
• ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು sbi.co.in ವೆಬ್‌ಸೈಟ್‌ ಮೂಲಕ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನಿರ್ದಿಷ್ಟ ಒಂದು ರಾಜ್ಯದ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

https://www.sbi.co.in/documents/77530/36548767/310823-ENGAGEMENT+OF+APPRENTICE+2023+ADVERTISEMENT+CRPD_APPR_2023-24_17.pdf/fb7c7b06-3c72-4c55-cd2b-1c9bbc0307ce?t=1693485209035

ಇದನ್ನೂ ಓದಿ: Actress Oviya : ನಟಿ ಓವಿಯಾ ಸಲಿಂಗಕಾಮಿ!!! ನಟಿಯಿಂದ ಬಂತು ಶಾಕಿಂಗ್‌ ರಿಪ್ಲೈ!