Home Interesting ಮ್ಯಾಗಿಯಿಂದ ಹೋಯ್ತು ಮಹಿಳೆಯ ಪ್ರಾಣ!

ಮ್ಯಾಗಿಯಿಂದ ಹೋಯ್ತು ಮಹಿಳೆಯ ಪ್ರಾಣ!

Hindu neighbor gifts plot of land

Hindu neighbour gifts land to Muslim journalist

ಮುಂಬೈ: ಮ್ಯಾಗಿ ಸಾಮಾನ್ಯವಾಗಿ ಎಲ್ಲರ ಫೇವರೇಟ್ ಎನ್ನುವುದಕ್ಕಿಂತಲೂ ಕ್ವಿಕ್ ಆಗಿ ಆಗುವುದರಿಂದ ಹೆಚ್ಚಿನವರು ಇಷ್ಟ ಪಡುತ್ತಾರೆ. ಆದ್ರೆ, ಇಲ್ಲೊಂದು ಕಡೆ ಮ್ಯಾಗಿಯಿಂದ ಮಹಿಳೆಯ ಪ್ರಾಣವೇ ಹೋಗಿದೆ.

ಹೌದು. ಈ ಘಟನೆ ಮುಂಬೈನ ಮಲಾಡ್​ನಲ್ಲಿರುವ ಪಾಸ್ಕಲ್​ ವಾಡಿ ಏರಿಯಾದಲ್ಲಿ ನಡೆದಿದ್ದು, ಮೃತ ಯುವತಿಯನ್ನು ರೇಖಾ ನಿಶಾದ್​ (27) ಎಂದು ಗುರುತಿಸಲಾಗಿದೆ.

ಮೃತ ಮಹಿಳೆ ತನಗೆ ಗೊತ್ತಿಲ್ಲದೆ ಇಲಿ ಪಾಷಾಣ ಬೆರೆಸಿದ್ದ ಟೊಮ್ಯಾಟೋವನ್ನು ಹಾಕಿ ಮ್ಯಾಗಿ ಮಾಡಿ ತಿಂದ ಪರಿಣಾಮ ದುರಂತ ಸಾವು ಕಂಡಿದ್ದಾರೆ. ಮಹಿಳೆ, ಮನೆಯಲ್ಲಿರುವ ಇಲಿಗಳನ್ನು ಕೊಲ್ಲಲೆಂದು ಜುಲೈ 21 ರಂದು ಟೊಮ್ಯಾಟೊಗೆ ಪಾಷಾಣ ಬೆರೆಸಿದ್ದಳು. ಮರುದಿನ, ಟಿವಿ ನೋಡುತ್ತಾ ಆಕಸ್ಮಿಕವಾಗಿ ತನ್ನ ನೂಡಲ್ಸ್‌ಗೆ ವಿಷಕಾರಿ ಟೊಮ್ಯಾಟೊವನ್ನು ಸೇರಿಸಿ, ಬೇಯಿಸಿ ತಿಂದಿದ್ದಾರೆ. ಪರಿಣಾಮವಾಗಿ ಇಲಿಯ ಬದಲು ಮಹಿಳೆಯ ಜೀವ ಹೋಗಿದೆ.

ಮ್ಯಾಗಿ ತಿಂದ ಕೆಲವೇ ಗಂಟೆಗಳಲ್ಲಿ ಆಕೆ ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದು, ತಕ್ಷಣ ಆಕೆಯ ಗಂಡ ಮತ್ತು ಮೈದುನ ಹತ್ತಿರದ ಆಸ್ಪತ್ರೆಗೆ ದಾಖಲಿಸಿದಾದರೂ, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮೃತಪಟ್ಟಿದ್ದಾರೆ. ತನಗೆ ಗೊತ್ತಿಲ್ಲದೇ ವಿಷಕಾರಿ ಟೊಮ್ಯಾಟೋವನ್ನು ಮ್ಯಾಗಿಯಲ್ಲಿ ಸೇರಿಸಿದ್ದೇ ದುರಂತಕ್ಕೆ ಕಾರಣವಾಗಿದೆ ಎಂದು ಮಾಳವನಿ ಪೊಲೀಸ್​ ಠಾಣೆಗೆ ಸಬ್​ ಇನ್ಸ್​ಪೆಕ್ಟರ್​ ಮೂಸಾ ದೇವರ್ಸಿ ಹೇಳಿದ್ದಾರೆ.