Home Interesting A woman who underwent 200 surgeries to look beautiful: ಸುಂದರವಾಗಿ ಕಾಣಲು ಬರೋಬ್ಬರಿ...

A woman who underwent 200 surgeries to look beautiful: ಸುಂದರವಾಗಿ ಕಾಣಲು ಬರೋಬ್ಬರಿ 200 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ! ಇದಕ್ಕಾಗಿ 8 ಕೋಟಿ ವ್ಯಯಿಸಿದ್ಲು ಈ ‘ಮಿಲಿಯನ್ ಡಾಲರ್ ಬಾರ್ಬಿ’

Surgery to Look Beautiful
Image source- The Sun

Hindu neighbor gifts plot of land

Hindu neighbour gifts land to Muslim journalist

Surgery to Look Beautiful: ಹುಡುಗ-ಹುಡುಗಿಯರಿಗೆ ಆಕರ್ಷಣೆ(Attraction) ಆಗೋದು ಸಹಜ. ಇದು ನೈಸರ್ಗಿಕವಾಗಿ(Natural) ಸೆಳೆದರೆ ಒಳಿತು. ಆದರಿಂದು ಈ ಸೆಳೆತಕ್ಕಾಗಿ ಏನೆಲ್ಲಾ ಮಾಡುತ್ತಾರೆಂದು ಎಲ್ಲರಿಗೂ ಗೊತ್ತು. ಅದರಲ್ಲೂ ಹುಡುಗಿಯರಂತೂ ಮೇಕಪ್(Makeup) ಇಲ್ಲದೆ ಬೀದಿಗೇ ಇಳಿಯೊದಿಲ್ಲವೇನೋ. ಮೇಕಪ್ ಸಾಯಲಿ ಬಿಡಿ ಈಗಂತೂ ಸುಂದರವಾಗಿ ಕಾಣೋದಕ್ಕೆ ಏನೇನೋ ಮಾಡುತ್ತಾರೆ. ಎಂತೆಂತದೋ ಸರ್ಜರಿಗಳು ಬಂದಿವೆ. ಹಲವರು ಇದಕ್ಕೆ ಒಳಗಾಗಿದ್ದಾರೆ. ಅಂತೆಯೇ ಇಲ್ಲೊಬ್ಬಳು ಮಹಿಳೆ (Women) ತಾನು ಶಾಶ್ವತವಾಗಿ ಸೌಂದರ್ಯವತಿಯಾಗಿ ಕಾಣಬೇಕೆಂದು ಬರೋಬ್ಬರಿ 200ಕ್ಕೂ ಹೆಚ್ಚು ಬಾರಿ ಶಸ್ತ್ರಚಿಕಿತ್ಸೆ (Surgery to Look Beautiful) ಮಾಡಿಸಿಕೊಂಡಿದ್ದಾಳೆ.

ಹೌದು, ಅಮೆರಿಕದ(America) ವರ್ಜೀನಿ(Virginia) ಯಾದ ನಿವಾಸಿಯಾದ, 6 ಮಕ್ಕಳ ತಾಯಿ ಆಗಿರುವ, 55 ವರ್ಷದ ಲೇಸಿ(Lesi) ಎಂಬಾಕೆ ತಾನು ಪುರುಷರನ್ನ ಆಕರ್ಷಿಕಸಬೇಕೆಂದು ಬಯಸಿ ಬರೋಬ್ಬರಿ 200ಕ್ಕೂ ಹೆಚ್ಚು ಬಾರಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಈಗ ಆಕೆಯ ಸೌಂದರ್ಯ ನೋಡಿದವರೆಲ್ಲರೂ ಡೇಟ್‌ ಮಾಡಲು ಬಯಸುತ್ತಾರೆ. ಅಲ್ಲದೇ ತನಗೆ 30 ವರ್ಷ ವಯಸ್ಸಿನ ಮಗನಿದ್ದು, ಅವನೂ ಈಕೆಯ ಸೌಂದರ್ಯಕ್ಕೆ ಮಾರುಹೋಗಿದ್ದಾನೆ ಎಂದು ಆಕೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅಂದಹಾಗೆ ತನ್ನನ್ನು ‘ಮಿಲಿಯನ್ ಡಾಲರ್ ಬಾರ್ಬಿ'(Million Dollar Barbie) ಎಂದು ಕರೆದುಕೊಂಡಿರೋ ಈಕೆ 200 ಸಲ ಶಸ್ತ್ರಚಿಕಿತ್ಸೆ (Surgeries) ಮಾಡಿಸಿಕೊಳ್ಳಲು ಬರೋಬ್ಬರಿ 8 ಕೋಟಿ ರೂ. ಖರ್ಚು ಮಾಡಿದ್ದಾಳೆ. ಇದೀಗ ಹರೆಯದ ಹುಡುಗಿಯಂತೆ ಕಾಣುತ್ತಿರುವ ಆಕೆಯನ್ನ ನೋಡಿ ಅನೇಕರು ಹಿಂದೆ ಬಿದ್ದಿದ್ದಾರಂತೆ, ಈಕೆಯೊಂದಿಗೆ ಡೇಟ್‌ ಮಾಡಲು ಬಯಸುತ್ತಿದ್ದಾರಂತೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಲೇಸಿಯ ನಿಜವಾದ ಹೆಸರು ಪೌಲಾ ಥೆಬರ್ಟ್‌(Poula Thebart). ಈಕೆಗೆ ಇನ್ಮುಂದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದಂತೆ ಎಚ್ಚರಿಕೆ ವೈದ್ಯರು ನೀಡಿದ್ದಾರೆ. ಈ ರೀತಿಯ ಜೀವನ ಶೈಲಿಯಿಂದ ಮಹಿಳೆಯರು ದೂರವಿರುವಂತೆಯೂ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

 

ಇದನ್ನು ಓದಿ: Thieves stole 200 shoes with one foot: ಕೇವಲ ಬಲಗಾಲಿಗೆ ಧರಿಸೋ 10 ಲಕ್ಷ ಮೌಲ್ಯದ 200 ಶೂ ಕದ್ದ ಕಳ್ಳರು! ಕತ್ತಲಲ್ಲಿ ಯಾಮಾರಿಬಿಟ್ಟರು!