

Oyo: ಓಯೋ ರೂಮ್ಸ್ ಇದೀಗ ದೇಶಾದ್ಯಂತ ಟ್ರೆಂಡ್‌ನಲ್ಲದೆ. ಇಂದು ಇದು ಪ್ರೇಮಿಗಳು, ಯುವಕರು -ಯುವತಿಯರ ತಾಣವಾಗಿಬಿಟ್ಟಿದೆ. ಭಾರತದಲ್ಲಿ ಹುಟ್ಟಿದ ಈ ಸಂಸ್ಥೆ ಜಗತಿನಾದ್ಯಂತ ತನ್ನ ಹೆಸರನ್ನು ವಿಸ್ತಾರಗೊಳಿಸುತ್ತಿದೆ. 50 ದೇಶಗಳಲ್ಲಿ ಇದೀಗ ತನ್ನ ಬ್ರಾಂಚ್ ಗಳನ್ನು ಈ ಸಂಸ್ಥೆ ತೆರೆದಿದೆ. ಹಾಗಿದ್ರೆ ಈ OYO ಪದದ ನಿಜವಾದ ಅರ್ಥವೇನು? ಪ್ರೇಮಿಗಳೇ ನೀವು ಓಯೋ ರೂಮಿಗೆ ಹೋಗುವ ಮುನ್ನ ಇದನ್ನು ತಿಳಿಯಿರಿ.
OYO ಎಂದರೆ ಆನ್ ಯುವರ್ ಓನ್. ಇದರರ್ಥ ಪ್ರಯಾಣಿಕರು “ನಿಮ್ಮ ಸ್ವಂತ ಸ್ಥಳ” ಅಂತ.. ಗ್ರಾಹಕರು ತಮ್ಮ ಬಜೆಟ್‌ಗೆ ಅನುಗುಣವಾಗಿ ಕೊಠಡಿಯನ್ನು ಬುಕ್ ಮಾಡಬಹುದು. ಓಯೋ ಎಂದರೆ ಇಂದು ಅನೇಕರಲ್ಲಿ ಪ್ರೇಮಿಗಳು ಮಾತ್ರ ಹೋಗುವ ಜಾಗ ಎಂಬ ಭಾವನೆ ಇದೆ. ಆದರೆ ಇದು ಕಡಿಮೆ ಬಜೆಟ್ ನಲ್ಲಿ ಎಲ್ಲಾ ರೀತಿಯ ಗ್ರಾಹಕರಿಗೂ ಕೂಡ ಅವಕಾಶಗಳನ್ನು ನೀಡುತ್ತದೆ. ಈಗಲೂ ಸಹ, ನಾಲ್ಕು ಅಥವಾ ಐದು ಸ್ನೇಹಿತರು ಹುಟ್ಟುಹಬ್ಬ ಮತ್ತು ಖಾಸಗಿ ಪಾರ್ಟಿಗಳಿಗಾಗಿ ಓಯೋ ಕೊಠಡಿಗಳಿಗೆ ಹೋಗುತ್ತಾರೆ. ಕೆಲವು ಪ್ರೀಮಿಯಂ ಓಯೋ ಕೊಠಡಿಗಳು ಮೊಬೈಲ್ ಮೂಲಕ ಬಾಗಿಲು ತೆರೆಯುವ ಸ್ಮಾರ್ಟ್ ಲಾಕ್‌ಗಳು, ಸ್ವಯಂಚಾಲಿತ ಚೆಕ್-ಇನ್ ಕಿಯೋಸ್ಕ್‌ಗಳು ಮತ್ತು ಸ್ಮಾರ್ಟ್ ಲೈಟಿಂಗ್‌ನಂತಹ ಆಧುನಿಕ ವೈಶಿಷ್ಟ್ಯಗಳನ್ನು ಸಹ ಹೊಂದಿವೆ.
OYO ಕೊಠಡಿಗಳು ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದರೂ, ಕೆಲವೇ ವರ್ಷಗಳಲ್ಲಿ ಅವು ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ವೇಗವಾಗಿ ವಿಸ್ತರಿಸಿದವು. ಈ ಕಂಪನಿಯು ಈಗ 50 ಕ್ಕೂ ಹೆಚ್ಚು ದೇಶಗಳಲ್ಲಿ ಮತ್ತು 10,000 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹೋಟೆಲ್ ಸಂಸ್ಥೆಗಳಲ್ಲಿ ಒಂದಾಗಿದೆ.













