Home Interesting Viral News: ಈ ವ್ಯಕ್ತಿಗೆ ಇತ್ತು 3 ಶಿಶ್ನ !! 3 ಇದ್ದರೂ ಆಗಲಿಲ್ಲ ಏನೂ...

Viral News: ಈ ವ್ಯಕ್ತಿಗೆ ಇತ್ತು 3 ಶಿಶ್ನ !! 3 ಇದ್ದರೂ ಆಗಲಿಲ್ಲ ಏನೂ ಪ್ರಯೋಜನ, ರಹಸ್ಯ ಬಯಲಾಗಿದ್ದೇ ರೋಚಕ !!

Hindu neighbor gifts plot of land

Hindu neighbour gifts land to Muslim journalist

Viral News: ಮನುಷ್ಯನ ದೇಹ ರಚನೆ ಪ್ರಕೃತಿದತ್ತವಾಗಿರುವುದು. ಪ್ರಕೃತಿ ವಿರುದ್ಧವಾಗಿ ಕೆಲವೊಂದು ರಚನೆಗಳು ಇರುವುದೂ ಉಂಟು. ಆದರೆ ಇದು ತೀರಾ ಅಪರೂಪ. ಇದೀಗ ಅಂತದ್ದೇ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಒಬ್ಬ ವ್ಯಕ್ತಿಗೆ ಒಂದಲ್ಲ, ಎರಡಲ್ಲ ಮೂರು ಶಿಶ್ನಗಳು ಇರುವುದು ಪತ್ತೆಯಾಗಿದೆ. ಇದು ಅಚ್ಚರಿ ಎನಿಸಿದರೂ ಸತ್ಯ, ಸತ್ಯ,ಸತ್ಯ.

ಹೌದು, ಬ್ರಿಟಿಷ್(British) ವ್ಯಕ್ತಿಯೊಬ್ಬರಿಗೆ ಮೂರು ಶಿಶ್ನಗಳಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಆದರೆ ಅಚ್ಚರಿ ಅಂದ್ರೆ ಆತ ಈ ವಿಚಾರ ತಿಳಿಯದೇ ತನ್ನ ಇಡೀ ಜೀವನವನ್ನೇ ಕಳೆದಿದ್ದಾನೆ. ಅಂದರೆ ಆತನ ಸಾವಿನ ಬಳಿಕ ಈ ವಿಲಕ್ಷಣ ಘಟನೆಯ ರಹಸ್ಯ ಬಯಲಾಗಿದೆ.

ಯಸ್, 78 ವರ್ಷದ ಸುಮಾರು 6 ಅಡಿ ಎತ್ತರದ ಅಪರೂಪದಲ್ಲಿ ಅಪರೂಪದ ಬ್ರಿಟಿಷ್ ವ್ಯಕ್ತಿ ತಮ್ಮ ತೊಡೆಯ ಸಂದಿಯಲ್ಲಿ ಮತ್ತೆರಡು ಶಿಶ್ನಗಳನ್ನು ಹೊಂದಿದ್ದರು. ವಿಶೇಷ ಅಂದರೆ ಅವರಿಗೆ ತಮ್ಮ ಬಳಿ ಮೂರು ಶಿಶ್ನವಿದೆ ಎಂದು ತಿಳಿಯದೇ ಎಂಟು ದಶಕದ ವರೆಗೆ ಬದುಕಿದ್ದರು ಎಂಬುವುದೇ ಆಶ್ಚರ್ಯ!!

ಎಲ್ಲೆಲ್ಲಿ ಇದ್ದವು 3 ಶಿಶ್ನ?
ಎರಡು ಸಣ್ಣ ಸೂಪರ್‌ನ್ಯೂಮರರಿ ಶಿಶ್ನಗಳು ಪ್ರಾಥಮಿಕ ಶಿಶ್ನಕ್ಕಿಂತ ಕೆಳಮಟ್ಟದಲ್ಲಿ ಸಗಿಟ್ಟಲ್ ಓರಿಯಂಟೇಶನ್ ಪೋಸ್ಟೆರೊದಲ್ಲಿ ತೊಡೆಸಂದಿಯಲ್ಲಿ ಅಂಟಿಕೊಂಡಿದೆ. ಪ್ರತಿಯೊಂದು ಶಿಶ್ನ ಶಾಫ್ಟ್ ತನ್ನದೇ ಆದ ಕಾರ್ಪೊರಾ ಕ್ಯಾವರ್ನೋಸಾ ಮತ್ತು ಗ್ಲಾನ್ಸ್ ಶಿಶ್ನವನ್ನು ಕಾಣಿಸುತ್ತದೆ. ಈ ವ್ಯಕ್ತಿ ಸತ್ತಾಗ ಆತನ ಮೃತ ದೇಹವನ್ನು ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದ ವೈದ್ಯಕೀಯ ಶಾಲೆಗೆ ಸಂಶೋಧನೆಗಾಗಿ ದಾನ ಮಾಡಿದರು. ಈ ವೇಳೆ ದೇಹವನ್ನು ಪರಿಶೀಲಿಸಿದಾಗ ವ್ಯಕ್ತಿಗೆ ಮೂರು ಶಿಶ್ನವಿರುವುದು ಬೆಳಕಿಗೆ ಬಂದಿದೆ.

ಅಂದಹಾಗೆ ಪ್ರಾಥಮಿಕ ಶಿಶ್ನ ಮತ್ತು ಸೂಪರ್‌ನ್ಯೂಮರರಿ ಶಿಶ್ನಗಳಲ್ಲಿ ದೊಡ್ಡದಾದ ಮತ್ತು ಅತ್ಯಂತ ಮೇಲ್ನೋಟವು ಒಂದೇ ಮೂತ್ರನಾಳವನ್ನು ಹಂಚಿಕೊಂಡಿದ್ದು, ಮೊದಲ ಹಾಗೂ ಎರಡನೇಯ ಶಿಶ್ನದ ಮೂಲಕ ಮೂತ್ರವಿಸರ್ಜನೆ ಮಾಡಲಾಗುತ್ತದೆ. ಆದರೆ ಮೂರನೇ ಶಿಶ್ನದಲ್ಲಿ ಯಾವುದೇ ಮೂತ್ರ ವಿಸರ್ಜನೆಯಂತಹ ರಚನೆಯು ಇರುವುದಿಲ್ಲ ಎಂದು ವರದಿಯಾಗಿದೆ.