Home Interesting ಯಾವ ಹುಡುಗಿಯನ್ನಾದರೂ ಸೆಲೆಕ್ಟ್‌ ಮಾಡಿ, ಹೋಟೆಲೊಂದು ನೀಡಿತು ಬಿಗ್‌ ಆಫರ್‌ | ಆದರೆ ಅಸಲಿಯತ್ತು ಏನು...

ಯಾವ ಹುಡುಗಿಯನ್ನಾದರೂ ಸೆಲೆಕ್ಟ್‌ ಮಾಡಿ, ಹೋಟೆಲೊಂದು ನೀಡಿತು ಬಿಗ್‌ ಆಫರ್‌ | ಆದರೆ ಅಸಲಿಯತ್ತು ಏನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ಕೆಲವೊಂದು ಸುದ್ದಿ ಒಂದು ಕ್ಷಣ ಆಶ್ಚರ್ಯ ಗೊಳಿಸುತ್ತದೆ. ಆದರೆ ಒಳ ಸಾರಾಂಶ ತಿಳಿದಾಗ ಮಾತ್ರ ಸತ್ಯ ತಿಳಿದು ಬರುತ್ತದೆ ಅನ್ನುವುದು ಅಷ್ಟೇ ಸತ್ಯ. ಯಾವುದೇ ವಿಷಯ ಆಗಲಿ ಪ್ರತ್ಯಕ್ಷ ಕಂಡರೂ ಕೆಲವೊಮ್ಮೆ ಪ್ರಮಾಣಿಸಿ ನೋಡಬೇಕು. ಹೌದು ಇಲ್ಲೊಂದು ಹೋಟೆಲ್ ಮುಂದೆ ಒಳಗಡೆ ಬಂದು 1000 ರೂಪಾಯಿ ಕೊಟ್ಟು ಯಾವ ಹುಡುಗಿಯನ್ನಾದರೂ ಸಂಭೋಗಿಸಿ ಎಂದು ಹೋಟೆಲ್ ಮುಂದೆ ಅಳವಡಿಸಿದ್ದ ವಿವಾದಾತ್ಮಕ ಡಿಜಿಟಲ್ ಜಾಹಿರಾತು ಸುದ್ದಿ ಜನರನ್ನು ಕೆರಳಿಸಿದೆ.

ಚೆನ್ನೈ ನಾಗರಿಕರೊಬ್ಬರು ಹೋಟೆಲ್ ಮುಂದಿನ ಡಿಜಿಟಲ್ ಜಾಹಿರಾತು ಫಲಕವನ್ನು ನೋಡಿ ತಮ್ಮ ಮೊಬೈಲ್‌ನಲ್ಲಿ ಫೋಟೋ ಮತ್ತು ವಿಡಿಯೋ ರೆಕಾರ್ಡ್ ಮಾಡಿ, ಟ್ವಿಟರ್‌ನಲ್ಲಿ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು. ಲಿಟಲ್ ಮೌಂಟ್ ಮೆಟ್ರೋ ಬಳಿಯ ಕಂಬವೊಂದರಲ್ಲಿ ಡಿಜಿಟಲ್ ಜಾಹಿರಾತು ಫಲಕ ಅಳವಡಿಸಲಾಗಿತ್ತು. ಅದರಲ್ಲಿ ಪುರುಷರೇ ಒಳಗಡೆ ಬಂದು 1000 ರೂಪಾಯಿ ಕೊಟ್ಟು ಯಾವುದೇ ಹುಡುಗಿಯ ಜೊತೆ ಲೈಂಗಿಕ ಕ್ರಿಯೆ ನಡೆಸಬಹುದು ಎಂದು ಬರೆಯಲಾಗಿತ್ತು.

ಈ ವಿಚಾರವಾಗಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘದ ರಾಜ್ಯ ಘಟಕದ ಸದಸ್ಯರು ಡಿ.24ರಂದು ಪ್ರತಿಭಟನೆ ನಡೆಸಿ, ಹೋಟೆಲ್ ಮಾಲೀಕ ಅಥವಾ ವಿವಾದಾತ್ಮಕ ಡಿಜಿಟಲ್ ಜಾಹಿರಾತು ಫಲಕ ಅಳವಡಿಸಿದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಚೆನ್ನೈ ಪೊಲೀಸರನ್ನು ಒತ್ತಾಯಿಸಿದ್ದರು.

ಸದ್ಯ ಈ ಫಲಕವನ್ನು ಗ್ರೇಟರ್ ಚೆನ್ನೈ ಪೊಲೀಸರು ಕಳೆದ ಶನಿವಾರ ಡಿ. 24 ರಂದು ತೆರವುಗೊಳಿಸಿದ್ದು, ಹೋಟೆಲ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಡಿಜಿಟಲ್ ಜಾಹಿರಾತು ಫಲಕವನ್ನು ತೆಗೆದಿದ್ದು, ಈ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಪೊಲೀಸರ ಪ್ರಕಾರ, ಹೋಟೆಲ್‌ನ ವೈ-ಫೈ ನೆಟ್‌ವರ್ಕ್ ಹ್ಯಾಕ್ ಮಾಡಿ ಅಪರಿಚಿತ ವ್ಯಕ್ತಿ ಈ ರೀತಿ ಮಾಡಿದ್ದಾನೆಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ. ನಮ್ಮ ವೈ ಫೈ ಎಲ್ಲರಿಗೂ ಮುಕ್ತವಾಗಿದೆ. ಯಾವುದೇ ಪಾಸ್ ವರ್ಡ್‌ನಿಂದ ನೆಟ್‌ವರ್ಕ್ ಅನ್ನು ಸುರಕ್ಷಿತವಾಗಿ ಇರಿಸಿರಲಿಲ್ಲ ಎಂದಿದ್ದಾರೆ. ಡಿಸ್‌ಪ್ಲೇ ಸಂದೇಶಕ್ಕಾಗಿ ಕೋಡ್‌ಗಳನ್ನು ಬದಲಾಯಿಸುವ ಬಗ್ಗೆ ತಾಂತ್ರಿಕ ಜ್ಞಾನವನ್ನು ಹೊಂದಿರುವ ಯಾರೋ ಕಿಡಿಗೇಟಿ ಡಿಜಿಟಲ್ ಬೋರ್ಡ್ ಸಂದೇಶವನ್ನು ಬದಲಾಯಿಸಿದ್ದಾನೆ ಎಂದು ಪೊಲೀಸರು ಹೇಳಿಕೆಯನ್ನು ನೀಡಿದ್ದಾರೆ.

ಹೋಟೆಲ್ ಮಾಲೀಕನ ಹೋಟೆಲ್‌ನಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ತೆರೆದ ವೈ-ಫೈ ನೆಟ್‌ವರ್ಕ್‌ಗಳ ದುರುಪಯೋಗದ ಬಗ್ಗೆ ಜಾಗೃತರಾಗಿರಲು ಜನರಿಗೆ ಪೊಲೀಸರು ಸಲಹೆ ನೀಡಿದ್ದಾರೆ ಮತ್ತು ವೈ-ಫೈ ಅಥವಾ ವೈರ್ಡ್ ಸಂಪರ್ಕದ ಮೂಲಕ ಫಲಕಕ್ಕೆ ಪ್ರವೇಶವನ್ನು ಮರುಪರಿಶೀಲಿಸಲು ಮತ್ತು ಸುರಕ್ಷಿತವಾಗಿರಿಸಲು ಹೋಟೆಲ್ ಮಾಲೀಕರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ .

ಒಟ್ಟಿನಲ್ಲಿ ಸಮಾಜದಲ್ಲಿ ಕೆಲವರು ತನ್ನ ಬುದ್ದಿವಂತಿಕೆಯನ್ನು ಸಮಾಜ ಬಾಹಿರ ಚಟುವಟಿಕೆಗಳಲ್ಲಿ ಬಳಸುವುದು ಹೆಚ್ಚಾಗಿದೆ. ಆದ್ದರಿಂದ ನಾವು ನಮ್ಮ ಜಾಗೃತಿಯಲ್ಲಿ ಇರಬೇಕು.