Home Interesting ಸೆಲ್ಫಿ ಹುಚ್ಚಿನಿಂದ ಹೋಯ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಬ್ಬರ ಪ್ರಾಣ!

ಸೆಲ್ಫಿ ಹುಚ್ಚಿನಿಂದ ಹೋಯ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಬ್ಬರ ಪ್ರಾಣ!

Hindu neighbor gifts plot of land

Hindu neighbour gifts land to Muslim journalist

ಸೆಲ್ಫಿ ಅವಾಂತರಗಳು ಒಂದೋ ಎರಡೋ, ಅಬ್ಬಬ್ಬಾ ಈ ಸೆಲ್ಫಿಯಿಂದ ಪ್ರಾಣವನ್ನೇ ಕಳೆದುಕೊಂಡವರು ಅದೆಷ್ಟೋ ಮಂದಿ. ಅದೇನು ಮಾಯೇನೋ ಏನೂ, ಮೊಬೈಲ್ ಕೈ ಬಂದ ಕೂಡಲೇ ಎಲ್ಲವನ್ನು ಮರೆತು ಬಿಡುವವರು ಅದೆಷ್ಟೋ ಮಂದಿ. ಹಾಗೇನೇ ಕೆಲವೊಂದಷ್ಟು ಜನ ಮೈ ಮೇಲೆ ಪ್ರಜ್ಞೆಯೇ ಇಲ್ಲದಂತೆ ವರ್ತಿಸುತ್ತಾರೆ.ಇಲ್ಲೊಂದು ಕಡೆ ಸೆಲ್ಫಿ ಹುಚ್ಚಾಟಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಬ್ಬರು ಬಲಿಯಾದ ಘಟನೆ ನಡೆದಿದೆ.

ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿಗಳಾದ ವೈಭವ್​(17) ಮತ್ತು ಸುಜೀತ್ (17) ಮೃತ ದುರ್ದೈವಿಗಳು.

ಈ ಘಟನೆ ರಾಯಚೂರು ತಾಲೂಕಿನ ಕಲ್ಮಲ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಡೆದಿದೆ. ವೈಭವ್​, ಸುಜೀತ್​, ನಾಗೇಂದ್ರ ಮತ್ತು ತರುಣ್ ಸೇರಿ ನಾಲ್ವರು ಸ್ನೇಹಿತರು ಭಾನುವಾರ ರಜೆ ಹಿನ್ನೆಲೆ ಪಿಕ್​ನಿಕ್​ಗೆಂದು ತೆರಳಿದ್ದರು. ಈ ವೇಳೆ ರಜೆಯ ಮಜಾ ಎಂಜಾಯ್ ಮಾಡಲು ಕಾಲುವೆ ಬಳಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ನಾಲ್ವರೂ ಕಾಲುವೆಗೆ ಬಿದ್ದಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಹಾಗೂ ರಾಯಚೂರು ಗ್ರಾಮೀಣ ಪೊಲೀಸರು ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದು, ಕಾಲುವೆಗೆ ಬಿದ್ದ ನಾಲ್ವರ ಪೈಕಿ ಇಬ್ಬರು ಈಜಿ ದಡ ಸೇರಿದ್ದಾರೆ. ಆದರೆ, ಸುಜಿತ್ ಮತ್ತು ವೈಭವ್ ನೀರಲ್ಲಿ ಕೊಚ್ಚಿ ಹೋಗಿದ್ದರು. ಘಟನಾ ಸ್ಥಳದಿಂದ 200 ಮೀಟರ್ ದೂರದಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.