Home Interesting ಮಹಿಳೆಯ ಚಿನ್ನ ಕದ್ದ ಇಲಿ | ಪೊಲೀಸರ ಪತ್ತೆ ಕಾರ್ಯ ಶ್ಲಾಘನೀಯ

ಮಹಿಳೆಯ ಚಿನ್ನ ಕದ್ದ ಇಲಿ | ಪೊಲೀಸರ ಪತ್ತೆ ಕಾರ್ಯ ಶ್ಲಾಘನೀಯ

Hindu neighbor gifts plot of land

Hindu neighbour gifts land to Muslim journalist

ಕಳ್ಳ ಕಳ್ಳಿಯರೆಂದರೆ ಕದಿಯೋದು ಅವರ ಕೆಲಸ. ಇವರನ್ನೆಲ್ಲಾ ಪೊಲೀಸರು ಪತ್ತೆ ಹಚ್ಚುತ್ತಾರೆ. ಕಳ್ಳತನದ ಮಾರ್ಗಗಳು ಬೇರೆ ಬೇರೆ ಆಗಿದ್ದರೂ ಒಂದಲ್ಲಾ ಒಂದು ಕಡೆ ಕಳ್ಳ ಸಿಕ್ಕಿ ಹಾಕಿಕೊಳ್ಳುತ್ತಾರೆ. ಅಲ್ವಾ?

ಆದರೆ ವಿಷಯ ಏನಪ್ಪಾ ಅಂದರೆ, ಪ್ರಾಣಿಗಳು ಕಳ್ಳತನಕ್ಕಿಳಿದರೆ ಏನು ಮಾಡುವುದು? ಕಂಡು ಹಿಡಿಯುವುದು ಹೇಗೆ? ಅದರಲ್ಲೂ ಈ ಪ್ರಾಣಿ ನಮ್ಮ ಮಧ್ಯೆನೇ ವಾಸ ಮಾಡುತ್ತದೆ. ಅದು ಯಾವುದು ಅಂತ ಯೋಚನೆ ಮಾಡ್ತಾ ಇದ್ದೀರಾ ? ಅದು ಬೇರೆ ಯಾವುದು ಅಲ್ಲ ನೀವು ನಂಬಲು ಅನರ್ಹವಾದ ಪ್ರಾಣಿ ಇಲಿ.

ಮನೆಯಲ್ಲಿರುವ ವಸ್ತುಗಳನ್ನು ಕಚ್ಚಿ ಕಚ್ಚಿ ಹಾಳು ಮಾಡುವುದು ಮಾತ್ರ ಇದರ ಕೆಲಸ ಅಲ್ಲ. ಚಿನ್ನದೊಂದಿಗೆ ಪರಾರಿಯಾಗಬಹುದು ಅನ್ನೋದಕ್ಕೆ ಇಲ್ಲೊಂದು ಕಡೆ ನಡೆದ ಘಟನೆಯೇ ಸಾಕ್ಷಿ.

ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಮಹಿಳೆಯೊಬ್ಬರ 10 ಗ್ರಾಂ ಚಿನ್ನ ನಾಪತ್ತೆಯಾಗಿತ್ತು. ಚಿನ್ನ ಕಳೆದೋದ ಚಿಂತೆಯಲ್ಲಿದ್ದ ಅವರು ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದರು. ಪೊಲೀಸರು ತನಿಖೆ ಆರಂಭಿಸಿದಾಗ, ಈ ಪ್ರಕರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ. ಹೌದು ಈಗ ಇದು ಬಹಳ ಚರ್ಚೆಗೆ ಗ್ರಾಸವಾದ ವಿಷಯವಾಗಿದೆ.

ದಿಂಡೋಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಸುಂದರಿ ಪ್ಲಾನಿಬೆಲ್ ಸಾಲ ಮಾಡಿದ್ದರಿಂದ ಅದನ್ನು ತೀರಿಸಲು ಮನೆಯ ಚಿನ್ನಾಭರಣವನ್ನು ಬ್ಯಾಂಕ್ ನಲ್ಲಿ ಅಡಮಾನ ಇಡಲು ಯೋಚಿಸಿದ್ದರು. ಇದಕ್ಕಾಗಿ ಅವರು ತನ್ನ ಚೀಲದಲ್ಲಿ ಚಿನ್ನವನ್ನು ತಗೊಂಡು ಹೋಗಿದ್ದಾರೆ.
ಆ ಮಹಿಳೆಯ ಕೈಯಲ್ಲಿ ಪಾವ್ ಬಾಜಿ ತಿಂಡಿ ಕೂಡ ಇತ್ತು. ದಾರಿ ಮಧ್ಯೆ ಸಿಕ್ಕ ಕೆಲವು ಭಿಕ್ಷುಕರಿಗೆ ಮಹಿಳೆ ಪಾವ್ ಬಾಜಿಯನ್ನು ನೀಡಿದ್ದಾರೆ.

ಅಷ್ಟೇ. ಅನಂತರ ಬ್ಯಾಂಕ್‌ಗೆ ಬಂದಿದ್ದಾರೆ. ಅಲ್ಲಿ ನೋಡಿದಾಗ ಆಕೆಯ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಇರಲಿಲ್ಲ. ಸ್ವಲ್ಪ ಸಮಯದ ನಂತರ ಅವರು ಭಿಕ್ಷುಕನಿಗೆ ನೀಡಿದ ದೊಡ್ಡ ಪಾಪ್ ಬ್ಯಾಗ್‌ನಲ್ಲಿ 10 ಗ್ರಾಂ ಚಿನ್ನವಿದೆ ಎಂದು ನೆನಪು ಮಾಡಿ, ತರಾತುರಿಯಲ್ಲಿ ಭಿಕ್ಷುಕನಿದ್ದ ಸ್ಥಳಕ್ಕೆ ಹೋಗಿದ್ದಾರೆ. ಆದರೆ ಆತ ಅಲ್ಲಿ ಇರಲಿಲ್ಲ. ಕೂಡಲೇ ಮಹಿಳೆ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಅಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪೊಲೀಸರು ಸಿಸಿಟಿವಿ ಸಹಾಯದಿಂದ ಭಿಕ್ಷುಕರನ್ನು ಪತ್ತೆಹಚ್ಚಿದ್ದಾರೆ. ಆದರೆ ಅವರ ಬಳಿ ಪಾವ್ ಚೀಲ ಇರಲಿಲ್ಲ. ಅದು ಒಣಗಿ ಸರಿಯಾಗಿಲ್ಲದ ಕಾರಣ ಅವರು ಅದನ್ನು ಕಸಕ್ಕೆ ಎಸೆದಿದ್ದರು. ಇದಾದ ಬಳಿಕ ಕಸದ ರಾಶಿಯಲ್ಲಿ ತನಿಖೆ ಆರಂಭವಾಗಿದೆ. ಅಲ್ಲೇ ಇದ್ದ ಇಲಿಗಳು ಪಾವ್ ತಿಂದಿದೆ.

ಪೊಲೀಸ್ ತಂಡವು ಇಲಿಯನ್ನು ಬೆನ್ನಟ್ಟಿತು. ಬಳಿಕ ಅವರು ಗಟಾರದೊಳಗೆ ಒಂದು ಚೀಲವನ್ನು ಕಂಡುಕೊಂಡರು. ಅದರಲ್ಲಿ ಮಹಿಳೆಯ ಎಲ್ಲಾ ಆಭರಣಗಳಿರುವುದು ಕಂಡು ಬಂದಿದೆ. ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಅವರ ಚಿನ್ನವನ್ನು ಅವರಿಗೆ ಹಿಂತಿರುಗಿಸಲಾಗಿದೆ. ಇದಾದ ನಂತರ ಮಹಿಳೆಯೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.