Home Interesting Rain Forecast: ರೈತರಿಗೆ ಭಾರೀ ಆತಂಕದ ಸುದ್ದಿ!

Rain Forecast: ರೈತರಿಗೆ ಭಾರೀ ಆತಂಕದ ಸುದ್ದಿ!

Rain Forecast

Hindu neighbor gifts plot of land

Hindu neighbour gifts land to Muslim journalist

Rain Forecast : ದೇಶದ ಕೆಲವೆಡೆ ಮಳೆಗಾಗಿ ಜನರು ಎದುರು ನೋಡುತ್ತಿದ್ದರೆ, ಮತ್ತೆ ಕೆಲವೆಡೆ ಧಾರಾಕಾರ ಮಳೆಗೆ(Heavy Rain) ಬೆಳೆಗಳು ಧರೆಗುರುಳಿ ನಷ್ಟ ಸಂಭವಿಸುತ್ತಿದೆ. ಈ ವರ್ಷ ದೇಶದಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದ್ದು, ಈ ವರ್ಷ ದೇಶದಲ್ಲಿ ಸರಾಸರಿ ಶೇಕಡ 94ರಷ್ಟು ಮಳೆಯಾಗಲಿದೆ(Rain Forecast)ಎಂದು ಅಂದಾಜಿಸಲಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಉತ್ತಮ ಮಳೆಯಾಗಿದ್ದರೂ ಕೂಡ ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎನ್ನಲಾಗಿದೆ. ಮಧ್ಯ ಮತ್ತು ಉತ್ತರ ಭಾರತದಲ್ಲಿ ಕಡಿಮೆ ಮಳೆಯಾಗುವ ಎಚ್ಚರಿಕೆ ಸೂಚಿಸಲಾಗಿದೆ. ಜುಲೈನಿಂದ ಆಗಸ್ಟ್ ಅವಧಿಯಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್‌’ನಲ್ಲಿ ಕಡಿಮೆ ಮಳೆಯಾಗುವ ಸಂಭವವಿದೆ ಎನ್ನಲಾಗುತ್ತಿದೆ.

ಒಂದೆಡೆ ಕಡಿಮೆ ಮಳೆಯಾಗುವ ಸಾಧ್ಯತೆಯಿದ್ದು, ಮತ್ತೊಂದೆಡೆ ಅಕಾಲಿಕ ಮಳೆಯಿಂದ ರೈತರು ಹೈರಾಣಾಗಿ ಹೋಗಿದ್ದಾರೆ. ರಾಜಸ್ಥಾನದಲ್ಲಿ ಪ್ರತಿಕೂಲ ಹವಾಮಾನ ಮತ್ತು ಆಲಿಕಲ್ಲು (Hail)ಮಳೆಯಿಂದಾಗಿ 38 ಸಾವಿರ ಹೆಕ್ಟೇರ್ ನಷ್ಟ ಸಂಭವಿಸಿದೆ. ಕಳೆದ 2 ದಿನಗಳಿಂದ ಸುರಿದ ಮಳೆ ಹಾಗೂ ಆಲಿಕಲ್ಲು ಮಳೆಯಿಂದಾಗಿ ಸಾತಾನ ತಾಲೂಕಿನಲ್ಲಿ 1000 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ಹಾನಿಯಾಗಿದೆ. ನಾಸಿಕ್ ಜಿಲ್ಲೆಯ ತಕೇಟ್ ದರ್ನಾ ಪ್ರದೇಶದಲ್ಲಿ ಅಕಾಲಿಕ ಮಳೆಯಾಗಿದ್ದು, ಹಣ್ಣಿನ ಮರಗಳಿಗೆ ಅಪಾರ ನಷ್ಟ ಸಂಭವಿಸಿದೆ.

ಆಲಿಕಲ್ಲು ಹಾಗೂ ಅಕಾಲಿಕ ಮಳೆಯಿಂದ ಹುಣಸೆ, ಮಾವಿಗೆ ಅಪಾರ ಹಾನಿಯಾಗಿದ್ದು, ರೈತನಿಗೆ ಪೂರಕ ಆದಾಯ ಒದಗಿಸುತ್ತಿದ್ದ ಹುಣಸೆ ಮರಗಳು ಈ ಬಾರಿಯ ಅಕಾಲಿಕ ಮಳೆಗೆ ಅಕ್ಷರಶಃ ಮಣ್ಣು ಪಾಲಾಗಿದ್ದು, ಇದರ ಜೊತೆಗೆ ಮಾವಿನ ಹೂವೂ ಕೂಡ ನೆಲ ಪಾಲಾಗಿದೆ. ಹವಾಮಾನ ವೈಪರೀತ್ಯದಿಂದ(Weather Changes)ರಾಜ್ಯದಲ್ಲಿ ಸುಮಾರು 10 ಸಾವಿರ ಎಕರೆ ದ್ರಾಕ್ಷಿತೋಟಗಳು ನೆಲಕಚ್ಚಿದ್ದು, ದ್ರಾಕ್ಷಿ ಸೀಸನ್ ಅಂತಿಮ ಹಂತದಲ್ಲಿದ್ದು, ಬೆಲೆ (Price)ಮತ್ತು ಬೇಡಿಕೆಯ(Demand) ಕೊರತೆಯಿಂದಾಗಿ ದ್ರಾಕ್ಷಿ ಇನ್ನೂ ಕಟಾವಿಗೆ ಎದುರು ನೋಡುತ್ತಿದ್ದ ಮಂದಿಗೂ ಕೂಡ ಕಹಿ ಸುದ್ದಿ ಲಭ್ಯವಾಗಿದೆ. ದ್ರಾಕ್ಷಿತೋಟಗಳ ನಷ್ಟದಿಂದಾಗಿ, ಕರ್ರಂಟ್(Currant) ಉತ್ಪಾದನಾ ಉದ್ಯಮದ ಮೇಲೂ ಕೂಡ ಪ್ರಭಾವ ಬೀರಿದೆ.

ಅಕಾಲಿಕ ಮಳೆಯಿಂದಾಗಿ ಗದ್ದೆಯಲ್ಲಿ ಇಟ್ಟಿದ್ದ ಈರುಳ್ಳಿ ಸಂಪೂರ್ಣ ಒದ್ದೆಯಾಗಿದ್ದು, ಇದರ ಜೊತೆ ಗೋಧಿಯೂ ನಷ್ಟವಾಗಿದ್ದು, ಈರುಳ್ಳಿ (Onion)ಉತ್ಪಾದನಾ ವೆಚ್ಚ ಭರಿಸಲು ಕಷ್ಟವಾಗಿರುವ ಹಿನ್ನೆಲೆ ರೈತರು ಕಂಗಾಲಾಗಿದ್ದಾರೆ. ಮಹಾರಾಷ್ಟ್ರದ(Maharshatra)ಪುಣೆ ಜಿಲ್ಲೆಯ ಅಂಬೇಗಾಂವ್ ತಾಲೂಕಿನಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು(Hail Storms) ಮಳೆಯಾಗಿದ್ದು, ಹೂಗಳು ಬಿದ್ದಿರುವುದರಿಂದ ರಾಗಿ ಧಾನ್ಯ ಕೂಡ ನಷ್ಟವಾಗಿದೆ. ರಾಗಿ ಬೆಳೆ ನಷ್ಟವಾದ್ದರಿಂದ ರೈತ ಮತ್ತಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.

ಧಾರಾಶಿವ ಜಿಲ್ಲೆಯಲ್ಲಿ ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಹಣ್ಣಿನ ಬೆಳೆಗಳಾದ ದ್ರಾಕ್ಷಿ, ಕಲ್ಲಂಗಡಿ, ಮಾವು, ಬಾಳೆ ನಷ್ಟದ ಹಾದಿ ಹಿಡಿದಿದೆ. ತರಕಾರಿಗಳು ಮತ್ತು ಇತರ ಬೆಳೆಗಳು ಕೂಡ ನಷ್ಟವಾಗಿದೆ. ಕಳಂಬ್, ತುಳಜಾಪುರ ಭಾಗದಲ್ಲಿ ಅಪಾರ ಪ್ರಮಾಣದ ಕೃಷಿ ಉತ್ಪನ್ನ ನಾಶವಾಗಿದೆ.ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ಬಿರುಗಾಳಿಯೊಂದಿಗೆ ಅಕಾಲಿಕ ಮಳೆ ಸುರಿದ ಪರಿಣಾಮ ಗೋಧಿ, ಮುಸುಕಿನ ಜೋಳ, ಈರುಳ್ಳಿ, ಟೊಮೇಟೊ ಬೆಳೆಗಳಿಗೆ ಹಾನಿಯಾಗಿದ್ದು, ಪಪ್ಪಾಯಿ ಮರಗಳು ಬುಡಮೇಲಾಗಿವೆ. ಇದರ ಜೊತೆಗೆ ಮಾಲೆಗಾಂವ್ ನಲ್ಲಿಯೂ ಅಕಾಲಿಕ ಮಳೆ ಸುರಿದಿದ್ದು, ಕಟಾವಿಗೆ ಬಂದಿದ್ದ ಈರುಳ್ಳಿ ಬೆಳೆಗೆ ಹಾನಿಯಾಗಿದ್ದು, ಹೀಗಾಗಿ, ರೈತರು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದಾರೆ.

 

ಇದನ್ನು ಓದಿ : Sukanya Samridhi : ಸರ್ಕಾರದ ಘೋಷಣೆಯ ನಂತರ ಸುಕನ್ಯಾ ಯೋಜನೆಯ ಲಾಭ ಎಷ್ಟು ಹೆಚ್ಚಾಗಿದೆ, ವಿವರಗಳನ್ನು ಇಲ್ಲಿ ತಿಳಿಯಿರಿ!