Home Interesting ಬರೋಬ್ಬರಿ 70 ಕೋಟಿಗೆ ನಂಬರ್ ಪ್ಲೇಟ್ ಖರೀದಿ ಮಾಡಿದ ವ್ಯಕ್ತಿ !!| ಅಷ್ಟಕ್ಕೂ ಆ ನಂಬರ್...

ಬರೋಬ್ಬರಿ 70 ಕೋಟಿಗೆ ನಂಬರ್ ಪ್ಲೇಟ್ ಖರೀದಿ ಮಾಡಿದ ವ್ಯಕ್ತಿ !!| ಅಷ್ಟಕ್ಕೂ ಆ ನಂಬರ್ ಪ್ಲೇಟ್ ನಲ್ಲಿರುವ ಸಂಖ್ಯೆ ಯಾವುದು ಗೊತ್ತಾ??

Hindu neighbor gifts plot of land

Hindu neighbour gifts land to Muslim journalist

ಪ್ರತಿಯೊಂದು ವಾಹನಗಳಲ್ಲೂ ನಂಬರ್ ಪ್ಲೇಟ್ ಕಡ್ಡಾಯ. ಕೆಲವರು ತಮ್ಮ ವಾಹನದ ನಂಬರ್ ಫ್ಯಾನ್ಸಿಯಾಗಿರಬೇಕು ಎಂದು ಇಷ್ಟಪಡುತ್ತಾರೆ. ಶ್ರೀಮಂತರು ಫ್ಯಾನ್ಸಿ ಸಂಖ್ಯೆಗಳಿರುವ ನಂಬರ್ ಪ್ಲೇಟ್‌ಗಳನ್ನು ಖರೀದಿಸಿ ಇನ್ನೊಬ್ಬರ ಗಮನ ಸೆಳೆಯುವಂತೆ ಮಾಡುತ್ತಾರೆ. ಹಾಗೆಯೇ ಇತ್ತೀಚೆಗೆ ದುಬಾರಿ ನಂಬರ್ ಪ್ಲೇಟ್ ಒಂದು ಮಾರಾಟವಾಗಿ ಸುದ್ದಿಯಾಗಿದೆ.

ಇತ್ತೀಚೆಗೆ ದುಬೈನ ಮೋಸ್ಟ್ ನೋಬೆಲ್ ನಂರ‍್ಸ್ ಚ್ಯಾರಿಟಿ ವತಿಯಿಂದ ವಿಶೇಷ ಫೋನ್ ಸಂಖ್ಯೆ ಹಾಗೂ ವಿಶೇಷ ಕಾರ್ ನಂಬರ್ ಪ್ಲೇಟ್‌ಗಳ ಹರಾಜು ನಡೆಯಿತು. ಈ ಹರಾಜಿನಲ್ಲಿ ವ್ಯಕ್ತಿಯೊಬ್ಬರು ಬರೋಬ್ಬರಿ 70 ಕೋಟಿ ರೂ.ಗೆ ವಿಶೇಷ ಸಂಖ್ಯೆಯ ನಂಬರ್ ಪ್ಲೇಟ್ ಖರೀದಿ ಮಾಡಿದ್ದಾರೆ.

ಎಎ8 ಸಂಖ್ಯೆಯ ನಂಬರ್ ಪ್ಲೇಟ್ ಸುಮಾರು 70 ಕೋಟಿ ರೂ.ಗೆ ಹರಾಜಾಗಿದೆ. ಇದು ವಿಶ್ವದಲ್ಲೇ ಮೂರನೇ ಅತೀ ದುಬಾರಿ ನಂಬರ್ ಪ್ಲೇಟ್ ಎನಿಸಿಕೊಂಡಿದೆ. ಈ ಹಿಂದೆ ಎಎ9 ಸಂಖ್ಯೆಯ ನಂಬರ್ ಪ್ಲೇಟ್ ಕಳೆದ ವರ್ಷ ಸುಮಾರು 79 ಕೋಟಿ ರೂ.ಗೆ ಹರಾಜಾಗಿತ್ತು.

ಇತ್ತೀಚೆಗೆ ನಡೆದ ಮೋಸ್ಟ್ ನೋಬೆಲ್ ನಂರ‍್ಸ್ ಚ್ಯಾರಿಟಿಯ ಹರಜಿನಲ್ಲಿ ಎಫ್55 ಹಾಗೂ ವಿ66 ನಂಬರ್ ಪ್ಲೇಟ್ 8 ಕೋಟಿ ರೂ.ಗೂ ಅಧಿಕ ಬೆಲೆಗೆ ಮಾರಾಟವಾಗಿದೆ. ವೈ66 ನಂಬರ್ ಪ್ಲೇಟ್ 7.91 ಕೋಟಿ ರೂ.ಗೆ ಮಾರಾಟವಾಗಿದೆ.