Home Interesting iPhone 14 Pro ಮೊಬೈಲ್ ಖರೀದಿಗೆ ಮುಗಿಬಿದ್ದ ಜನ, ಫೋನ್ ಆನ್ ಮಾಡುತ್ತಲೇ ಕಾದಿತ್ತು ಅಚ್ಚರಿ!!!

iPhone 14 Pro ಮೊಬೈಲ್ ಖರೀದಿಗೆ ಮುಗಿಬಿದ್ದ ಜನ, ಫೋನ್ ಆನ್ ಮಾಡುತ್ತಲೇ ಕಾದಿತ್ತು ಅಚ್ಚರಿ!!!

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗೆ ಹೆಚ್ಚಾಗಿ ಅಗತ್ಯ ವಸ್ತುಗಳನ್ನೆಲ್ಲಾ ಆನ್ಲೈನ್ ನಲ್ಲೇ ಖರೀದಿ ಮಾಡುತ್ತಾರೆ. ಕೂತಲ್ಲಿಯೇ ಬುಕ್ ಮಾಡಿದ್ರೆ ಸಾಕು ಒಂದು ವಾರದ ಒಳಗೆ ಮನೆಬಾಗಿಲಿಗೆ ವಸ್ತುಗಳು ಬರುತ್ತದೆ. ಟೆಕ್ನಾಲಜಿ ಮುಂದುವರಿದಷ್ಟು ಅದರ ದುರುಪಯೋಗವೂ ಹೆಚ್ಚಾಗುತ್ತಿದೆ. ಹಣ ಗಳಿಸಲು ಹಲವರು ವಿವಿಧ ದಾರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗಂತೂ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆನ್ಲೈನ್ ಮೂಲಕ ಸುಲಭವಾಗಿ ಲಕ್ಷಗಟ್ಟಲೆ ಹಣ ದೋಚುವವರಿದ್ದಾರೆ. ವಂಚನೆಗೆ ಒಳಗಾದವರು ಕೊನೆಗೆ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ಬಂದೊದಗುತ್ತದೆ. ಇದೀಗ ಅಂತಹದೇ ವಂಚನೆಗೆ ಯುವಕನೊಬ್ಬ ಒಳಗಾಗಿದ್ದಾನೆ.

ಅಕ್ಷಯ್ ತುಂಗಾ ಎಂಬಾತ ಆನ್‌ಲೈನ್‌ನಲ್ಲಿ ಐಫೋನ್ 14 ಮೊಬೈಲ್ ಬುಕ್ ಮಾಡಿ, ಮೋಸ ಹೋಗಿರುವ ಘಟನೆ ನಡೆದಿದೆ.
ಅಕ್ಷಯ್ ಪ್ರಸಿದ್ಧ ಇ-ಕಾಮರ್ಸ್ ತಾಣವಾದ ಅಮೆಜಾನ್‌ನಿಂದ ಐಫೋನ್ 14 ಪ್ರೊ ಮ್ಯಾಕ್ಸ್ ಮೊಬೈಲ್ ಅನ್ನು ಬುಕ್ ಮಾಡಿದ್ದರು. ಐಫೋನ್ ಅಂದ್ರೆ ಹೆಚ್ಚೇ ಖುಷಿ ಇರುತ್ತದೆ. ಹಾಗೇ ಖುಷಿಯಿಂದ ಫೋನ್ ಬಾಕ್ಸ್ ಓಪನ್ ಮಾಡಿ, ನೋಡಿದ್ರೆ ಐಫೋನ್ ಇತ್ತು. ಐಫೋನ್ ಏನೋ ಇತ್ತು ಆದ್ರೆ ಅದು ನಕಲಿ ಐಫೋನ್ ಆಗಿತ್ತು. ಯುವಕನಿಗೆ ಫೋನ್ ಆನ್ ಮಾಡುತ್ತಲೇ ಅಚ್ಚರಿ ಉಂಟಾಗಿದೆ.

ಯುವಕ ಮೊಬೈಲ್ ಸ್ವಿಚ್ ಆನ್ ಮಾಡಿದಾಗ ಸೆಟ್ಟಿಂಗ್ಸ್ ಆಪ್ಟನ್ ಕೇಳಲಿಲ್ಲವಂತೆ. ಹೊಸ ಫೋನ್ ಗಳಲ್ಲಿ ವಾಟ್ಸಾಪ್ ಗಳೆಲ್ಲಾ ಮೊದಲೇ ಇನ್‌ಸ್ಟಾಲ್ ಆಗಿರೋದಿಲ್ಲ. ಆದ್ರೆ ಇದರಲ್ಲಿ ಫೇಸ್‌ಬುಕ್, ಟ್ವಿಟರ್, ವಾಟ್ಸಾಪ್ ಆಯಪ್ ಗಳು ಮೊದಲೇ ಇನ್‌ಸ್ಟಾಲ್ ಆಗಿದ್ದವು ಎಂದು ಅಕ್ಷಯ್ ತಿಳಿಸಿದ್ದಾರೆ. ಅಲ್ಲದೆ, ಅಕ್ಷರಗಳ ಮತ್ತು ಕ್ಯಾಮರಾದಲ್ಲಿ ಐಫೋನ್‌ನ ಗುಣಮಟ್ಟ ಇರಲಿಲ್ಲ. ಇದೆಲ್ಲಾ ಗಮನಿಸಿದಾಗ ಆತನಿಗೆ ಅನುಮಾನ ಬಂದು, ಪರೀಕ್ಷಿಸಿದಾಗ ಅದು ನಕಲಿ ಫೋನ್ ಎಂಬುದು ತಿಳಿದುಬಂದಿದೆ.

ತನಗೆ ಸಿಕ್ಕಿರುವ ಫೋನ್ ನಕಲಿ ಐಫೋನ್ ಎಂಬುದು ಖಚಿತವಾಗುತ್ತಿದ್ದಂತೆ ಅಕ್ಷಯ್ ಆಯಪಲ್ ಸ್ಟೋರ್‌ಗೆ ಭೇಟಿ ನೀಡಿ ವಿಚಾರಿಸಿದ್ದಾರೆ. ಮೊಬೈಲ್ ಬಾಕ್ಸ್‌ನಲ್ಲಿದ್ದ ಕೋಡ್ ನಂಬರ್‌ಗಳನ್ನು ಪರಿಶೀಲಿಸಿದಾಗ ಅಮೇರಿಕಾದಲ್ಲಿ ತಯಾರಾದ ಮೊಬೈಲ್ ಎಂದು ಸೂಚಿಸಿದೆ ಎಂದು ಅಕ್ಷಯ್ ಹೇಳಿದ್ದಾರೆ. ಸದ್ಯ ನಕಲಿ ಪೋನ್ ಬಂದಿರುವ ಬಗ್ಗೆ ಅಕ್ಷಯ್ ದೂರು ನೀಡಿದ್ದು, ಪೊಲೀಸರು ದೂರು ದಾಖಲಿಸಿದ್ದಾರೆ.