Home Interesting Online gaming app : ಆನ್ ಲೈನ್ ಆಪ್ ನಲ್ಲಿ ದುಡ್ಡು ಕಳಕೊಳ್ಳುವವರ ಮಧ್ಯೆ ಕೇವಲ...

Online gaming app : ಆನ್ ಲೈನ್ ಆಪ್ ನಲ್ಲಿ ದುಡ್ಡು ಕಳಕೊಳ್ಳುವವರ ಮಧ್ಯೆ ಕೇವಲ 49 ರೂ. ಇನ್ವೆಸ್ಟ್ ಮಾಡಿ 1.5 ಕೋಟಿ ಗಳಿಸಿದ ವ್ಯಕ್ತಿ

Online gaming app

Hindu neighbor gifts plot of land

Hindu neighbour gifts land to Muslim journalist

Online gaming app : ಐಪಿಎಲ್ ಆರಂಭವಾಗಿದ್ದು, ಕ್ರಿಕೆಟ್ ಪ್ರೀಯರು ಎಂಜಾಯ್ ಮಾಡುತ್ತಿದ್ದಾರೆ. ಜತೆಗೆ ಈ ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ಆ್ಯಪ್‌ಗಳು ಹೆಚ್ಚು ಸಕ್ರೀಯವಾಗಿದ್ದು, ಜನರು ಆಕರ್ಷಿಸುತ್ತಿದೆ, ಜನ ದುಡ್ಡು ಕಳೆದುಕೊಳ್ಳುತ್ತಿದ್ದಾರೆ. ಒಟ್ಟಾರೆ ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಹೆಚ್ಚುವರಿಯಾಗಿ ಜನ ಹಣವನ್ನ ಕಳೆದುಕೊಳ್ಳುತ್ತಿದ್ದಾರೆ.

ಆದರೆ ಇಲ್ಲಿ ಇದೀಗ ಯುವಕನೊಬ್ಬನ ಅದೃಷ್ಟ ಬದಲಾಗಿದ್ದು, ಕೋಟಿ ರೂಪಾಯಿ ಮೊತ್ತವನ್ನೇ ಗೆದ್ದುಕೊಂಡಿದ್ದಾನೆ. ಯುವಕನೊಬ್ಬ ಆನ್‌ಲೈನ್ ಗೇಮಿಂಗ್‌ನಲ್ಲಿ ಕೇವಲ 49 ರೂಪಾಯಿ ಹೂಡಿಕೆ ಮಾಡಿ, ಬರೋಬ್ಬರಿ 1.5 ಕೋಟಿ ರೂ. ಗೆದ್ದಿದ್ದಾನೆ. ಗೇಮಿಂಗ್ ಆಪ್‌ನಲ್ಲಿ ವರ್ಚುವಲ್ ಕ್ರಿಕೆಟ್ ತಂಡವನ್ನು ರಚಿಸುವ ಮೂಲಕ ಕೋಟಿ ರೂಪಾಯಿ ಗೆಲ್ಲಲು ಆತನಿಗೆ ಸಾಧ್ಯವಾಗಿದೆ.

ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಶಹಾಬುದ್ದೀನ್ ಮನ್ಸೂರಿ ಎಂಬ ಚಾಲಕ 1.5 ಕೋಟಿ ರೂಪಾಯಿ ಅನ್‌ಲೈನ್ (Online gaming app) ಗೇಮಿಂಗ್ ಮೂಲಕ ಗೆದ್ದುಕೊಂಡ ಈ ಯುವಕ. ಈತ ಚಾಲಕನಾಗಿ ದುಡಿಯುತ್ತಿದ್ದು, ಕಳೆದ ಭಾನುವಾರ ಕೊಲ್ಕತಾ ಮತ್ತು ಪಂಜಾಬ್ ನಡುವಿನ ತಂಡ ರಚಿಸಿ ಆನ್‌ಲೈನ್‌ನಲ್ಲಿ ಕ್ರಿಕೆಟ್ ಆಡಿದ್ದಾನೆ. ಕಳೆದ ಎರಡು ವರ್ಷಗಳಿಂದ ಆನ್‌ಲೈನ್ ಕ್ರಿಕೆಟ್ ಆಟದಲ್ಲಿ ತಂಡಗಳನ್ನು ರಚಿಸುತ್ತಾ ಅದೃಷ್ಟ ಪರೀಕ್ಷಿಸುತ್ತಿದ್ದ. ಈಗ ಏಕಾಏಕಿ ಆತನ ಅದೃಷ್ಟ ಖುಲಾಯಿಸಿದೆ.1.5 ಕೋಟಿ ರೂಪಾಯಿ ಗೆದ್ದಿದ್ದಾನೆ ಆ ಯುವಕ.

ಮಧ್ಯಪುದೇಶದ ಸಂಧ್ಯಾ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶಹಾಬುದ್ದೀನ್, ಇಷ್ಟು ಮೊತ್ತದ ಹಣ ಗೆದ್ದ ಶಹಾಬುದ್ದೀನ್ ತನ್ನ ಆಪ್ ವ್ಯಾಲೆಟ್‌ನಿಂದ 20 ಲಕ್ಷ ರೂ. ವಿತ್ ಡ್ರಾ ಮಾಡಿಕೊಂಡಿದ್ದಾನೆ. ವಿಜೇತ ಮೊತ್ತದ 1.5 ಕೋಟಿ ರೂ.ನಲ್ಲಿ ಒಟ್ಟು 6 ಲಕ್ಷ ರೂ. ತೆರಿಗೆ ಕಡಿತವಾಗಿದ್ದು, ಆತನು ತಾನು ಗೆದ್ದ ಹಣದಲ್ಲಿ ಸ್ವಂತ ಮನೆ ಕಟ್ಟುವ ಯೋಜನೆ ಹಾಕಿಕೊಂಡಿದ್ದೇನೆ ಎಂದಿದ್ದಾನೆ. ಉಳಿದ ಮೊತ್ತದಲ್ಲಿ, ಸ್ವಂತ ಉದ್ಯಮ ಆರಂಭಿಸುವ ಗುರಿ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ.