Home Entertainment ಒಂದೇ ದಿನದಲ್ಲಿ ಆತನ ಅದೃಷ್ಟ ಖುಲಾಯಿಸಿತು!! | ಆತನಿಗೆ ಲಾಟರಿಯಲ್ಲಿ ಸಿಕ್ಕಿದ ಬಹುಮಾನದ ಮೊತ್ತವೆಷ್ಟು ಗೊತ್ತಾ???|ಭರ್ಜರಿ...

ಒಂದೇ ದಿನದಲ್ಲಿ ಆತನ ಅದೃಷ್ಟ ಖುಲಾಯಿಸಿತು!! | ಆತನಿಗೆ ಲಾಟರಿಯಲ್ಲಿ ಸಿಕ್ಕಿದ ಬಹುಮಾನದ ಮೊತ್ತವೆಷ್ಟು ಗೊತ್ತಾ???|ಭರ್ಜರಿ ಲಾಟರಿ ಹೊಡೆದಾತನ ರಿಯಾಕ್ಷನ್ ಹೇಗಿತ್ತು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ಪ್ರತಿಯೊಬ್ಬರ ಜೀವನದಲ್ಲೂ ಹಣದ ಅವಶ್ಯಕತೆ ತುಂಬಾ ಮುಖ್ಯ. ಬೆಳಗ್ಗಿನಿಂದ ಸಂಜೆವರೆಗೂ ಬೆವರು ಸುರಿಸಿ ಅದೆಷ್ಟು ದುಡಿದರೂ ದುಡ್ಡು ಸಾಕಾಗುವುದಿಲ್ಲದ ಪರಿಸ್ಥಿತಿಯಲ್ಲಿ,ಆರಾಮವಾಗಿ ಹಣ ಬಂದರೆ ಅದೆಷ್ಟು ಸುಖವಿತ್ತು ಎಂದು ಯೋಚಿಸೋರೆ ಹೆಚ್ಚು.ಆದ್ರೂ ಇದಕ್ಕೆಲ್ಲ ಅದೃಷ್ಟ ಕೈ ಹಿಡಿಬೇಕಲ್ವಾ?

ಆದರೆ ಇಲ್ಲೊಬ್ಬನಿಗೆ ಅದೃಷ್ಟ ಹುಡುಕಿ-ಹುಡುಕಿ ಬಂದಿದೆ. ಸಾಮಾನ್ಯವಾಗಿ ಲಾಟರಿ ಡ್ರಾನಲ್ಲಿ ಗೆಲ್ಲುವುದು ಕೆಲವೊಬ್ಬರ ಜೀವನವನ್ನೇ ಬದಲಿಸಿಬಿಡುತ್ತದೆ.ಒಮ್ಮೆಲೇ ಕೋಟ್ಯಾಧೀಶರಾಗುವ ಸುದ್ದಿ ತಿಳಿದ ಕೂಡಲೇ ಎಂತಾ ಮಂದಿಯ ಮೊಗದಲ್ಲಿ ನಗು ಬೀರುತ್ತೆ.ಈ ಸಂತೋಷದ ಭಾವ ನೋಡುವುದೇ ಒಂದು ಮಜಾ.ಹೀಗೆ ಅದೃಷ್ಟ ಕೈ ಹಿಡಿದವನ ರಿಯಾಕ್ಷನ್ ಹೇಗಿತ್ತು!!

ಈ ಘಟನೆಯಲ್ಲಿ, ಟೆರ‍್ರಿ ಕೆನಡಿ ಹೆಸರಿನ ವ್ಯಕ್ತಿ ತನಗೆ ಲಾಟರಿಯಲ್ಲಿ ಒಂದು ದಶಲಕ್ಷ ಪೌಂಡ್ ಅಂದರೆ,10 ಕೋಟಿ ರೂ.ಗಳು ಬಹುಮಾನವಾಗಿ ಸಿಕ್ಕಿದೆ ಎಂದು ಅರಿಯುತ್ತಲೇ ಏನಾಗುತ್ತಿದೆ ಎಂದು ಒಂದು ಕ್ಷಣ ನಂಬಲೇ ಆಗಲಿಲ್ಲ.ಸಂದರ್ಭದಲ್ಲಿ ಟೆರ‍್ರಿಯ ಮುಖಭಾವ ಹೇಗಿತ್ತು ಎಂದು ತೋರುವ ಫೋಟೋವೊಂದು ವೈರಲ್ ಆಗಿದೆ.

ಲಾಟರಿಯಲ್ಲಿ ಗೆದ್ದ ವಿಷಯ ಅರಿತ ಟೆರ‍್ರಿಗೆ ಮೊದಲಿಗೆ ನಂಬಿಕೆಯೇ ಬರಲಿಲ್ಲ. ಲಾಟರಿ ನಡೆಸುವ ಮಂದಿಗೆ ಕರೆ ಮಾಡಿದ ಟೆರ‍್ರಿ ಖುದ್ದು ಈ ವಿಷಯವನ್ನು ಖಾತ್ರಿ ಪಡಿಸಿಕೊಂಡಿದ್ದಾರೆ. ಲಾಟರಿ ಗೆಲುವಿನ ಅಂಕಿಗಳು ಹಾಗೂ ತನ್ನ ಲಾಟರಿ ಟಿಕೇಟ್‌ನಲ್ಲಿದ್ದ ಅಂಕಿಗಳು ಹೋಲುವುದು ಹೀಗೆ ಖಾತ್ರಿಯಾದ ಕೂಡಲೇ ತನ್ನ ಆಸನದ ಮೇಲೆ ಹಾಗೇ ವಾಲಿದ ಟೆರ‍್ರಿ ಸಂತಸದ ನಗೆಯೊಂದನ್ನು ಹೊಮ್ಮಿಸಿ, ಸ್ನೇಹಿತರೊಂದಿಗೆ ಭಾರೀ ಸಂಭ್ರಮಾಚರಣೆಯಲ್ಲಿ ತೇಲಾಡಿದ್ದಾರೆ.ವೃತ್ತಿಪರ ಫುಟ್ಬಾಲರ್‌ ಆದ ಟೆರ‍್ರಿ, 2011ರಲ್ಲಿ ಪದೇ ಪದೇ ಆಗುತ್ತಿದ್ದ ಗಾಯಗಳಿಂದಾಗಿ ಆಟಕ್ಕೆ ಗುಡ್‌ಬೈ ಹೇಳಿದ್ದರು. ಇದಾದ ಬಳಿಕ ಬೇರೆ ಕೆಲಸಗಳನ್ನು ಮಾಡಿಕೊಂಡು ಜೀವನ ಕಟ್ಟಿಕೊಳ್ಳಲು ನೋಡುತ್ತಿದ್ದರು ಟೆರ‍್ರಿ.ಅದಕ್ಕೆ ಸರಿಯಾಗಿ ಲಾಟರಿ ಹೊಡೆದದ್ದು ಅಂತೂ ಈತನನ್ನು ಒಮ್ಮೆಗೆ ಆಶ್ಚರ್ಯವಾಗಿಸಿದ್ದು ತಪ್ಪಲ್ಲ ಬಿಡಿ!.