Home Interesting ಭಾರತದ ಮಾರುಕಟ್ಟೆಯಲ್ಲಿ ಮಾಯವಾಗಲಿದೆ ಆಪಲ್ ಫೋನ್!!

ಭಾರತದ ಮಾರುಕಟ್ಟೆಯಲ್ಲಿ ಮಾಯವಾಗಲಿದೆ ಆಪಲ್ ಫೋನ್!!

Hindu neighbor gifts plot of land

Hindu neighbour gifts land to Muslim journalist

ಯುರೋಪ್ ಒಕ್ಕೂಟದ ನಂತರ, ಭಾರತ ಕೂಡ ಯುಎಸ್ಬಿ (USB) ಟೈಪ್ – ಸಿ ಕೇಬಲ್ ಅನ್ನು ಭಾರತದಲ್ಲಿ ದೊರೆಯುವ ಎಲ್ಲಾ ಸ್ಮಾರ್ಟ್ ಡಿವೈಸ್​ಗಳಿಗೆ ಕಾಮನ್ ಚಾರ್ಜಿಂಗ್ ಪೋರ್ಟ್ ಮಾಡಬೇಕೆಂದು ಬಯಸಿದೆ. ಹೀಗಾಗಿ ದೇಶದಲ್ಲಿ ಟೈಪ್ ಸಿ ಪೋರ್ಟ್ ಕಡ್ಡಾಯವಾಗಲಿದೆ. ಇದರಿಂದಾಗಿ ಅದೆಷ್ಟೋ ಕಂಪನಿಗಳು ಮುಚ್ಚುವ ಪರಿಸ್ಥಿತಿಗೆ ಬಂದಿದೆ.

ಹೌದು. ಇಂತಹ ಉಪಾಯ ಪ್ರತಿಯೊಂದು ಸಾಧನಕ್ಕೂ ವಿಭಿನ್ನ ರೀತಿಯ ಚಾರ್ಜರ್ ಅನ್ನು ಬಳಸುವುದನ್ನು ತಡೆಯಬಹುದು. ಆದರೆ, ಈ ನಿರ್ಧಾರ ಅನುಷ್ಠಾನಕ್ಕೆ ಬಂದರೆ ಆಪಲ್ ಕಂಪನಿಗೆ ದೊಡ್ಡ ತೊಂದರೆ ಎದುರಾಗುತ್ತದೆ. ಏಕೆಂದರೆ ಐಪೋನ್​ನಲ್ಲಿ ಟೈಪ್ – ಸಿ ಚಾರ್ಜಿಂಗ್ ಪೋರ್ಟ್ ಇಲ್ಲ. ಇದರಿಂದ ಭಾರತದ ಮಾರುಕಟ್ಟೆಯಲ್ಲಿ ಆಪಲ್ ಫೋನ್ ಉಳಿಯುವುದು ಕಷ್ಟವಾಗುತ್ತದೆ.​

ಈ ವಿಷಯದ ಬಗ್ಗೆ ಟಾಸ್ಕ್​ಫೋರ್ಸ್​ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಚರ್ಚೆ ಕೂಡ ಆಗಿದ್ದು, ‘ಸ್ಮಾರ್ಟ್​ಫೋನ್​, ಟ್ಯಾಬ್ಲೆಟ್​​ ಮತ್ತು ಲ್ಯಾಪ್​ಟಾಪ್​ಗಳಂತಹ ಎಲೆಕ್ಟ್ರಾನಿಕ್ ಸಾಧನಗಳಿಗೆ ಯುಎಸ್​ಬಿ (USB) ಟೈಪ್ – ಸಿ ಪೋರ್ಟ್ ಅಳವಡಿಸಿಕೊಳ್ಳುವ ಕುರಿತು ಒಮ್ಮತ ಹೊರಹೊಮ್ಮಿದೆ’ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.