Home Interesting Temple: ಈ ದೇವಸ್ಥಾನದಲ್ಲಿ ಸಕ್ಕರೆ ಕಾಯಿಲೆ 5 ನಿಮಿಷದಲ್ಲಿ ವಾಸಿಯಾಗುತ್ತೆ! ಕಣ್ಣ ಮುಂದೆ ನಡೆಯುತ್ತೆ ಪವಾಡ!

Temple: ಈ ದೇವಸ್ಥಾನದಲ್ಲಿ ಸಕ್ಕರೆ ಕಾಯಿಲೆ 5 ನಿಮಿಷದಲ್ಲಿ ವಾಸಿಯಾಗುತ್ತೆ! ಕಣ್ಣ ಮುಂದೆ ನಡೆಯುತ್ತೆ ಪವಾಡ!

Hindu neighbor gifts plot of land

Hindu neighbour gifts land to Muslim journalist

Temple: ತಮಿಳುನಾಡಿನ ತಂಜಾವೂರು ನಗರದಿಂದ 26 ಕಿ. ಮೀ. ದೂರದಲ್ಲಿರುವ ಅಮ್ಮಪೆಟ್ಟಿ ಅಥವಾ ಅಮ್ಮಪೇಟೆ ಎಂಬ ಗ್ರಾಮದಲ್ಲಿ ನೆಲೆಸಿರುವ ವೀಣಿ ಕರುಂಬೇಶ್ವರ ದೇವಸ್ಥಾನದಲ್ಲಿ ಆಶ್ಚರ್ಯಕರ ಘಟನೆ ಪ್ರತಿನಿತ್ಯವೂ ನಡೆಯುತ್ತದೆ. ಇಲ್ಲಿಗೆ ಬಂದಂತಹ ಸಾವಿರಾರು ಭಕ್ತರು ತಮಗಿರುವ ಸಕ್ಕರೆ ಕಾಯಿಲೆಯಿಂದ ಮುಕ್ತಿ ಪಡೆದು ಗುಣಮುಖರಾಗಿ ಹೋಗಿದ್ದಾರೆ. ಹಾಗಾದರೆ ಈ ದೇವಸ್ಥಾನದಲ್ಲಿ ಸಕ್ಕರೆ ಕಾಯಿಲೆ ಹೇಗೆ ವಾಸಿಯಾಗುತ್ತದೆ? ಔಷಧಿಗಳಿಂದ ಗುಣಪಡಿಸಲು ಸಾಧ್ಯವಾಗದ ಕಾಯಿಲೆಯನ್ನು ಈ ದೇವಸ್ಥಾನದ ಇರುವೆಗಳು ಹೇಗೆ ಗುಣಪಡಿಸುತ್ತವೆ…?

ವೀಣಿ ಕರುಂಬೇಶ್ವರ ದೇವಸ್ಥಾನದಲ್ಲಿ ಸುಮಾರು 5000 ವರ್ಷಕ್ಕೂ ಹಳೆಯದಾದ ಶಿವಲಿಂಗವಿದೆ. ಇದನ್ನು ಭಗವಾನ್ ಶ್ರೀ ಕೃಷ್ಣನೇ ಪ್ರತಿಷ್ಠಾಪನೆ ಮಾಡಿದ ಎಂಬ ನಂಬಿಕೆ ಇದೆ. ಹಾಗಾಗಿ ಈ ದೇವಸ್ಥಾನದಲ್ಲಿ ಅಷ್ಟು ಶಕ್ತಿ ಇದೆ ಎಂದು ಜನ ನಂಬುತ್ತಾರೆ. ಭಾರತ ಮಾತ್ರವಲ್ಲ ವಿದೇಶಗಳಿಂದಲೂ ಇಲ್ಲಿಗೆ ಭಕ್ತರು ಬಂದು ಸಕ್ಕರೆ ಕಾಯಿಲೆಯಿಂದ ಮುಕ್ತಿ ಪಡೆದಿದ್ದಾರೆ. ಇನ್ನು ಇಲ್ಲಿ ನಡೆಯುವ ಪವಾಡದ ಬಗ್ಗೆ ಹಲವಾರು ರೀತಿಯ ಸಂಶೋಧನೆಗಳು ನಡೆದಿದ್ದು ಸ್ವತಃ ವಿಜ್ಞಾನಿಗಳೇ ಇಲ್ಲಿನ ಪವಾಡ ನೋಡಿ ನಿಬ್ಬೆರಗಾಗಿದ್ದಾರೆ. ಪರೀಕ್ಷೆ ನಡೆಸಿ ಭಕ್ತರು ಗುಣಮುಖರಾಗಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಈ ವಿಷಯ ಸತ್ಯ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಸಕ್ಕರೆ ಕಾಯಿಲೆ ಹೇಗೆ ವಾಸಿಯಾಗುತ್ತೆ?

ಇಲ್ಲಿ ಬರುವಂತಹ ಭಕ್ತರು ತಮ್ಮ ಸಕ್ಕರೆ ಕಾಯಿಲೆಯನ್ನು ವಾಸಿ ಮಾಡಿಕೊಳ್ಳಲು ಕೇವಲ ಅರ್ಧ ಕೆ.ಜಿ. ರವೆ ಮತ್ತು ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಮಿಶ್ರಣ ಮಾಡಿ ತೆಗೆದುಕೊಂಡು ಹೋಗಬೇಕು. ಬಳಿಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪೂಜೆ ಮಾಡಿದ ರವೆ ಮತ್ತು ಸಕ್ಕರೆಯ ಮಿಶ್ರಣವನ್ನು ದೇವಸ್ಥಾನದ ಹೊರಭಾಗದಲ್ಲಿ ಹಾಕಬೇಕು. ಅಲ್ಲಿ ಇರುವೆಗಳು ಬಂದು ರವೆಯನ್ನು ಬೇರೆ ಮಾಡಿ ಸಕ್ಕರೆಯನ್ನು ಮಾತ್ರ ತಿಂದು ಹೋಗುತ್ತವೆ. ಈ ಪವಾಡವನ್ನು ನೋಡಲು ಲಕ್ಷಾಂತರ ಸಂಖ್ಯೆಯಲ್ಲಿ ಜನ ಬರುತ್ತಾರೆ. ಇದು ಕೇಳುವುದಕ್ಕೆ ಸ್ವಲ್ಪ ವಿಚಿತ್ರವೆನಿಸಿದರೂ ಕೂಡ ಇದನ್ನು ನೀವು ನಂಬಲೇ ಬೇಕು. ಇಲ್ಲಿ ಬಂದಂತಹ ಇರುವೆಗಳು ಸಕ್ಕರೆ ತೆಗೆದುಕೊಂಡು ಹೋಗುವಾಗ ದೇಹದಲ್ಲಿರುವ ಸಕ್ಕರೆ ಅಂಶ ಕಡಿಮೆ ಆಗುತ್ತದೆ ಇದನ್ನು ಖುದ್ದಾಗಿ ವೈದ್ಯರೇ ಬಂದು ಪರೀಕ್ಷಿಸಿ ನೋಡಿದ್ದು, ಇರುವೆ ಸಕ್ಕರೆ ತಿನ್ನುತ್ತಿದ್ದಂತೆ ಸಕ್ಕರೆ ಹಾಕಿದವರ ದೇಹದಲ್ಲಿ ಸಕ್ಕರೆ ಅಂಶ ಕಡಿಮೆ ಆಗಿರುವುದನ್ನು ನೋಡಿ ನಿಬ್ಬೆರಗಾಗಿದ್ದಾರೆ. ಅದಲ್ಲದೆ ಈ ರೀತಿ ಈ ಪವಾಡ ನಡೆಯುವುದು ಸತ್ಯ ಎಂದು ಒಪ್ಪಿಕೊಂಡಿದ್ದಾರೆ. ಇಲ್ಲಿರುವ ಇರುವೆಗಳು ದೇವರ ಇರುವೆಗಳು ಎಂದೇ ಪ್ರಖ್ಯಾತಗೊಂಡಿವೆ.