Home Interesting ‘ವಕ್ರನೋಟ’ ದಿಂದ ತೋಟ ರಕ್ಷಿಸಲು ಐಡಿಯಾ- ನೀಲಿ ನಟಿ ಸನ್ನಿ ಲಿಯೋನ್ ಪೋಸ್ಟರ್’ನ್ನು ಹೊಲದಲ್ಲಿ ಅಂಟಿಸಿದ...

‘ವಕ್ರನೋಟ’ ದಿಂದ ತೋಟ ರಕ್ಷಿಸಲು ಐಡಿಯಾ- ನೀಲಿ ನಟಿ ಸನ್ನಿ ಲಿಯೋನ್ ಪೋಸ್ಟರ್’ನ್ನು ಹೊಲದಲ್ಲಿ ಅಂಟಿಸಿದ ಕಿಲಾಡಿ ರೈತರು

Hindu neighbor gifts plot of land

Hindu neighbour gifts land to Muslim journalist

ಯಾದಗಿರಿ: ತಮ್ಮ ಬೆಳೆಗಳ ಮೇಲೆ ‘ವಕ್ರದೃಷ್ಟಿ’ ಬೀಳದಿರುವಂತೆ ನೋಡಿಕೊಳ್ಳಲು ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಕೆಲ ರೈತರು ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ನೀಲಿ ನಟಿ ಸನ್ನಿ ಲಿಯೋನ್ ಪೋಸ್ಟರ್ ಅನ್ನು ಹೊಲಗಳಲ್ಲಿ ಅಂಟಿಸಿದ್ದಾರೆ. ಅದರಿಂದ ಬೆಳೆಗಳಿಗೆ ಬರುವ ಕೆಟ್ಟ ದೃಷ್ಟಿ ಹೇಗೆ ನಿವಾರಣೆ ಆಗುತ್ತೆ ಅನ್ನೋದೇ ಉಳಿದಿರುವ ಕುತೂಹಲ.

ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಹುಣಸಗಿ ಮತ್ತು ಆಂಧ್ರಪ್ರದೇಶದ ಕಿಂಡಿ ಪಲ್ಲೆ ಗ್ರಾಮದ ಹೊಲಗಳಲ್ಲಿ ಸನ್ನಿ ಲಿಯೋನ್ ಪೋಸ್ಟರ್‌ಗಳನ್ನು ಕಾಣಬಹುದಾಗಿದೆ. ಇದರ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ಬಗ್ಗೆ ಸುದ್ದಿ ಸಂಸ್ಥೆ ‘ಟೈಮ್ಸ್ ಇಂಡಿಯಾ’ಕ್ಕೆ ಪ್ರತಿಕ್ರಿಯಿಸಿರುವ ಆಂಧ್ರಪ್ರದೇಶದ ರೈತ ಚೆಂಚು ರೆಡ್ಡಿ, ಈ ಬಾರಿ ಉತ್ತಮ ಫಸಲು ಸಿಕ್ಕಿದೆ. ಫಸಲಿನ ಮೇಲೆ ಗ್ರಾಮಸ್ಥರು ಮತ್ತು ದಾರಿಹೋಕರ ದೃಷ್ಟಿ ಬೆಳೆಗಳ ಮೇಲೆ ಬೀಳದೆ ಇರಲಿ. ‘ಅವರ ನೆಟ್ಟ ಕೆಟ್ಟ ದೃಷ್ಟಿ ಸನ್ನಿಗೆ ಬೀಳಲಿ. ಬೆಳೆಗಳಿಗೆ ವಕ್ರ ನೋಟ ತಾಗದೆ ಇರಲಿ’ ಅನ್ನುವ ಉದ್ದೇಶದಿಂದ ಈ ರೀತಿ ದೃಷ್ಟಿ ಬೊಂಬೆಯ ಬದಲು ನೀಲಿ ಬೊಂಬೆಯ ಪೋಸ್ಟರ್ ಹಾಕಲಾಗಿದೆಯಂತೆ. ಕಿಲಾಡಿ ರೈತರ ಪ್ರಯತ್ನ ಫಲಿಸಲಿ. ವಕ್ರನೋಟದ ಜನರ ನೋಟದಿಂದ ತೋಟ ಸೇಫ್ ಆದರೆ ಸಾಕು ಅನ್ನೋದಷ್ಟೇ ಈ ರೈತರ ಕ್ರಿಯೆಟಿವ್ ಐಡಿಯಾ!