Home Interesting Husband – wife: ಸುಂದರ ಪತ್ನಿಯ ಮುಖದಲ್ಲಿ ಮೂಡಿದ ಗೆರೆಗಳು: ಅಷ್ಟಕ್ಕೇ ವಿಚಲಿತನಾದ ಗಂಡ ಕೊಟ್ಟ...

Husband – wife: ಸುಂದರ ಪತ್ನಿಯ ಮುಖದಲ್ಲಿ ಮೂಡಿದ ಗೆರೆಗಳು: ಅಷ್ಟಕ್ಕೇ ವಿಚಲಿತನಾದ ಗಂಡ ಕೊಟ್ಟ ಡೈವೋರ್ಸ್ !

Husband - wife
Image source: Amazon.in

Hindu neighbor gifts plot of land

Hindu neighbour gifts land to Muslim journalist

Husband- wife : ಗಂಡ ಹೆಂಡತಿ( Husband- wife) ಜಗಳ ಉಂಡು ಮಲಗುವ ತನಕ ಅನ್ನೋ ಮಾತು ಕೇಳಿದ್ದೇವೆ. ಎಷ್ಟೋ ಬಾರಿ ಈ ಮಾತು ನಿಜ ಆಗಿರಬಹುದು. ಆದರೆ ಅದೆಲ್ಲಾ ನಮ್ಮ ಅಜ್ಜ ಅಜ್ಜಿಯ ಕಾಲದಲ್ಲಾಯಿತು ಬಿಡಿ. ಹೌದು, ಇಲ್ಲೊಬ್ಬ ನೋಡಲು ಬಹಳ ಚೆನ್ನಾಗಿದ್ದಾಳೆ ಎಂದು ಮದುವೆ ಮಾಡಿಕೊಂಡಿದ್ದ. ಆದರೆ ಮಡದಿಯ ಮುಖದಲ್ಲಿ ವೈದ್ಯಕೀಯ ಕಾರಣಗಳಿಂದ ಗುರುತುಗಳು ಮೂಡಿದ ಕಾರಣ ಆಕೆಗೆ ವಿಚ್ಛೇದನ ನೀಡಿದ್ದಾನೆ ಈ ಭೂಪ.

ಸಿಎ ಶುಭಂ ಅಗರ್ವಾಲ್ ಹೆಸರಿನ ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ ತಮ್ಮ ಗೆಳತಿಗೆ ಆದ ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ. ಸಿರಿವಂತ ಗಂಡನ ಕೈ ಹಿಡಿದ ತನ್ನ ಗೆಳತಿ ಆರಂಭದ ದಿನಗಳಲ್ಲಿ ಭಾರೀ ಖುಷಿಯಿಂದ ಇದ್ದು, ಎಲ್ಲವೂ ಚೆನ್ನಾಗಿ ಸಾಗುತ್ತಿದೆ ಎಂದು ತನ್ನಲ್ಲಿ ಹೇಳಿಕೊಂಡಿದ್ದಾಗಿ ಶುಭಂ ತಿಳಿಸಿದ್ದಾರೆ.

ಆದರೆ ಕಳೆದ ಮೂರು ತಿಂಗಳಿನಿಂದ ಆಕೆಯ ಮುಖದ ಮೇಲೆ ಗುರುತುಗಳು ಮೂಡಿದ್ದು ಅವು ಶಾಶ್ವತವಾಗಿ ಉಳಿಯುತ್ತವೆ ಎಂದು ವೈದ್ಯರು ತಿಳಿಸಿದ ಬಳಿಕ ಇಬ್ಬರಲ್ಲೂ ವೈಮನಸ್ಯ ಮೂಡಿದೆ.

ನಂತರ ಪತಿ – ಪತ್ನಿಯರ ನಡುವೆ ಸದಾ ಜಗಳಗಳು ನಡೆಯಲಾರಂಭಿಸಿ ಇಬ್ಬರ ನಡುವೆ ನೇರ ಮಾತುಕತೆ ನಿಂತು ಹೋಗಿತ್ತು. ಕೊನೆಗೆ ತನ್ನ ಪತಿ ಅನ್ಯ ಸ್ತ್ರೀಯರೊಂದಿಗೆ ಮಲಗುತ್ತಿದ್ದಾನೆ ಎಂದು ಕಂಡುಕೊಂಡ ಮಹಿಳೆ ಕೊನೆಗೆ ವಿಚ್ಛೇದನ (Divorce) ಪಡೆಯಲು ನಿರ್ಧರಿಸಿದ್ದಾರೆ.

ಈ ಕುರಿತು ಶುಭಂ ಅಗರ್ವಾಲ್ ಟ್ವೀಟ್ ನಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದು ಆ ಪ್ರಕಾರ, ಪ್ರೀತಿಸಲು ಯಾವುದೇ ಕಾರಣವಿಲ್ಲದವನನ್ನು ಮದುವೆಯಾಗುವುದು ಉತ್ತಮ. ಮುಖ/ದೇಹ/ಹಣ/ಹೆಸರು ಅಕ್ಷರಶಃ ಈ ಜೀವನದಲ್ಲಿ ಮಾನವರು ಹೊಂದಿರುವ ಅತ್ಯಂತ ತಾತ್ಕಾಲಿಕ ವಿಷಯವಾಗಿದೆ – ಈ ಕಾರಣವು ಹೋದರೆ, ಎಲ್ಲವೂ ಸ್ಥಗಿತಗೊಳ್ಳುತ್ತದೆ. ಆದ್ದರಿಂದ ಜಾಣತನದಿಂದ ಸಂಗಾತಿಯನ್ನು ಆರಿಸಿಕೊಳ್ಳಬೇಕು.

ಇದಕ್ಕೆ ಯಶ್ ಎಂಬವರು ಟ್ವೀಟ್ ಮೂಲಕ ಮರು ಉತ್ತರ ನೀಡಿದ್ದು, ಹುಡುಗಿ ಅವನನ್ನು ಮದುವೆಯಾದದ್ದು ಅವನ ಶ್ರೀಮಂತ ಮತ್ತು ಅಂದವನ್ನು ನೋಡಿ. ಹಾಗಾದರೆ ಅವಳು ಇನ್ನು ಮುಂದೆ ಸುಂದರವಾಗಿಲ್ಲದಿದ್ದರೆ ಹುಡುಗಿಗೆ ವಿಚ್ಛೇದನ ನೀಡುವುದು ಏಕೆ ಸರಿಯಲ್ಲ, ಹುಡುಗಿ ಹಣದ ಕಾರಣದಿಂದ ಯಾರನ್ನಾದರೂ ಮದುವೆಯಾದರೆ, ಹುಡುಗ ಕೂಡ ಅವಳ ಸೌಂದರ್ಯದ ಕಾರಣದಿಂದ ಅವಳನ್ನು ಮದುವೆಯಾಗುತ್ತಾನೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಮಾಸಿ ಹೋಗುವ ಅಂದದ ಮೇಲೆ ಜನರು ಮೋಹ ಇಟ್ಟುಕೊಳ್ಳುವುದಕ್ಕೆ ಇದೊಂದು ದೊಡ್ಡ ನಿದರ್ಶನ ಆಗಿದೆ.

ಇದನ್ನೂ ಓದಿ: The Kerala Story: ಕೇರಳ ಸ್ಟೋರಿ ಪ್ರದರ್ಶಿಸಿದರೆ ಥಿಯೇಟರ್ ಸ್ಫೋಟ – ISIS ಬೆದರಿಕೆ