Home Interesting Rail : ರೈಲು 1 ಲೀಟರ್ ಡೀಸೆಲ್ ನಲ್ಲಿ ಎಷ್ಟು ಕಿ.ಮೀ. ಓಡುತ್ತೆ? ಇಂಟೆರೆಸ್ಟಿಂಗ್ ಮಾಹಿತಿ...

Rail : ರೈಲು 1 ಲೀಟರ್ ಡೀಸೆಲ್ ನಲ್ಲಿ ಎಷ್ಟು ಕಿ.ಮೀ. ಓಡುತ್ತೆ? ಇಂಟೆರೆಸ್ಟಿಂಗ್ ಮಾಹಿತಿ ನಿಮಗಾಗಿ ಇಲ್ಲಿದೆ!

Rail

Hindu neighbor gifts plot of land

Hindu neighbour gifts land to Muslim journalist

Rail: ರೈಲು( Rail)ಪ್ರಯಾಣ ಎಂದರೆ ಹೆಚ್ಚಿನವರ ಪಾಲಿಗೆ ಅಚ್ಚು ಮೆಚ್ಚು. ನೆಚ್ಚಿನ ತಾಣಗಳ ಸೌಂದರ್ಯ ಸವಿಯುತ್ತಾ ಸಾಗುವ ಪಯಣದ ಹಾದಿಯ ಖುಷಿಯೇ ಬೇರೆ. ನಮ್ಮ ರೈಲ್ವೇ ಸೇವೆಗಳ ಬಗ್ಗೆ ನಮಗಿಂತ ಹೆಚ್ಚಾಗಿ ಬೇರೆ ಯಾರಿಗೆ ತಾನೇ ಗೊತ್ತಿರಲು ಸಾಧ್ಯ !! ಈಗಾಗಲೇ ಭಾರತೀಯ ರೈಲ್ವೆ (Indian Railways) ತನ್ನ ಪ್ರಯಾಣಿಕರ(Passengers) ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, (WiFi Facility) ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜನಸಾಮಾನ್ಯರ ನೆಚ್ಚಿನ ಸಂಚಾರ ವ್ಯವಸ್ಥೆಯಲ್ಲಿ ರೈಲ್ವೇ ಸೇವೆಯು ಕೂಡ ಒಂದಾಗಿದೆ.

ರೈಲು ಒಂದು ಲೀಟರ್ ಡೀಸೆಲ್‌ನಲ್ಲಿ (Diesel) ಎಷ್ಟು ದೂರ ಓಡುತ್ತದೆ ? ರೈಲಿನ ಮೈಲೇಜ್( Mileage)ಎಷ್ಟಿರುತ್ತದೆ ಎಂಬ ಕುತೂಹಲ ಸಹಜವಾಗಿ ಮೂಡುತ್ತದೆ. ರೈಲಿನ ಮೈಲೇಜ್‌ ಅದರ ನಿಲುಗಡೆ ಕ್ಲೈಂಬಿಂಗ್ ಎತ್ತರ, ಹೆಚ್ಚು ಇಲ್ಲವೇ ಕಡಿಮೆ ಲೋಡ್ ಅನ್ನು ಎಳೆಯುವುದು ಸೇರಿದಂತೆ ಎಂಜಿನ್‌ನ ಶಕ್ತಿಯನ್ನು ಅವಲಂಬನೆಯಾಗುತ್ತದೆ. ಡೀಸೆಲ್ ಇಂಜಿನ್ ರೈಲುಗಳ ಮೈಲೇಜ್ ಅನ್ನು ಗಂಟೆಗಳ ಆಧಾರದಲ್ಲಿ ಲೆಕ್ಕ ಮಾಡಲಾಗುತ್ತದೆ. ರೈಲಿನ ಮೈಲೇಜ್, ಆ ರೈಲಿನಲ್ಲಿರುವ ಕೋಚ್‌ಗಳ( Coach) ಸಂಖ್ಯೆಯನ್ನು ಅವಲಂಬಿತವಾಗಿರುತ್ತದೆ. ಕಡಿಮೆ ಬೋಗಿಗಳಿದ್ದಾಗ ಇಂಜಿನ್ ಮೇಲೆ ಕಡಿಮೆ ಒತ್ತಡವಿರುವ ಹಿಮ್ಮೇಳ ಅದರ ಶಕ್ತಿ ಹೆಚ್ಚುತ್ತದೆ. ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಹೆಚ್ಚು ನಿಲುಗಡೆ ಇರುವುದಿಲ್ಲ.ಆದರೆ, ಇತರ ಸಾಮಾನ್ಯ ರೈಲುಗಳಲ್ಲಿ ಎಲ್ಲಾ ನಿಲ್ದಾಣಗಳಲ್ಲಿ ಕೂಡ ನಿಲುಗಡೆಯಾಗುವ ಹಿನ್ನೆಲೆ ಸಹಜವಾಗಿಯೇ ಇಂಧನ ಹೆಚ್ಚು ಬೇಕಾಗುತ್ತದೆ.

ರೈಲಿನಲ್ಲಿ 12 ಕೋಚ್‌ಗಳಿದ್ದರೆ, ಆ ಪ್ಯಾಸೆಂಜರ್ ರೈಲು (Passenger Train)ಒಂದು ಕಿಲೋಮೀಟರ್ ಪ್ರಯಾಣಿಸಲು 6 ಲೀಟರ್ ಡೀಸೆಲ್ ಬೇಕಾಗುತ್ತದೆ. ಇದಲ್ಲದೆ, ರೈಲಿನ ಮೈಲೇಜ್ ಅನ್ನು ಗಂಟೆಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಅಂದರೆ, ಒಂದು ಗಂಟೆಯಲ್ಲಿ ರೈಲು ಎಷ್ಟು ಪ್ರಯಾಣ ಮಾಡಲು ಅವಕಾಶ ಕಲ್ಪಿಸುತ್ತದೆ ಎಂದು ಲೆಕ್ಕ( Calculate)ಮಾಡಲಾಗುತ್ತದೆ.

ಇದನ್ನೂ ಓದಿ :  Arecanut coffee rate 16/03/2023: ಇಂದಿನ ಅಡಿಕೆ, ಏಲಕ್ಕಿ, ಕಾಫಿ ಧಾರಣೆ ಎಷ್ಟು?