Home Interesting Millionaire Wage labourer: 17 ರೂ. ಇದ್ದ ಬ್ಯಾಂಕ್ ಖಾತೆಯಲ್ಲಿ 100 ಕೋಟಿ ರೂ. ;...

Millionaire Wage labourer: 17 ರೂ. ಇದ್ದ ಬ್ಯಾಂಕ್ ಖಾತೆಯಲ್ಲಿ 100 ಕೋಟಿ ರೂ. ; ರಾತ್ರೋರಾತ್ರಿ ಕೋಟ್ಯಧಿಪತಿಯಾದ ಕೂಲಿ ಕಾರ್ಮಿಕನ ಅಸಲಿ ಕಥೆ ಏನು?

Millionaire Wage labourer
image source: vijayavani

Hindu neighbor gifts plot of land

Hindu neighbour gifts land to Muslim journalist

Millionaire Wage labourer: ಕೇವಲ 17 ರೂ. ಇದ್ದ ಕೂಲಿ ಕಾರ್ಮಿಕನ ಬ್ಯಾಂಕ್ ಖಾತೆಯಲ್ಲಿ ಇದೀಗ ಕೋಟಿ ಕೋಟಿ ಹಣ. ಹೌದು, ಕೂಲಿ ಕಾರ್ಮಿಕನೊಬ್ಬ ರಾತ್ರೋರಾತ್ರಿ ಕೋಟ್ಯಧಿಪತಿಯಾದ (Millionaire Wage labourer) ಘಟನೆ ಕೊಲ್ಕತಾದಲ್ಲಿ (Kolkata) ನಡೆದಿದೆ. ಅಷ್ಟಕ್ಕೂ ಏನೀ ಘಟನೆ? ಇದರ ಅಸಲಿ ಕಥೆ ಏನು? ಬನ್ನಿ ತಿಳಿಯೋಣ.

ಮೊಹಮ್ಮದ್ ನಾಸಿರುಲ್ಲಾ ಮಂಡಲ್ ಎಂಬಾತನೇ ರಾತ್ರಿ ಕಳೆದು ಬೆಳಕು ಹರಿಯುವ ಹೊತ್ತಿಗೆ ಕೋಟ್ಯಧಿಪತಿಯಾದ ಕಾರ್ಮಿಕ. ಈತ
ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಬಸುದೇಬ್‌ಪುರ ಗ್ರಾಮದ ದಿನಗೂಲಿ ಕಾರ್ಮಿಕ. ಈತನ ಬ್ಯಾಂಕ್ ಖಾತೆಗೆ ಬರೋಬ್ಬರಿ 100 ಕೋಟಿ ಜಮೆ ಆಗಿದೆ. ತನ್ನ ಖಾತೆಯಲ್ಲಿ ಕೋಟಿಗಟ್ಟಲೆ ಹಣ ಇದೆ ಎಂದು ತಿಳಿಯದ ಮಂಡಲ್’ಗೆ ಪೊಲೀಸ್ ಇಲಾಖೆಯಿಂದ ಕರೆ ಬಂದಿದ್ದು, ಖಾತೆಯಲ್ಲಿ ಹಣ ಇದೆ ತನಿಖೆಗೆ ಹಾಜರಾಗುವಂತೆ ಹೇಳಿದ್ದಾರೆ.

Millionaire Wage labourer
image source: vijayavani

ಆಶ್ಚರ್ಯಗೊಂಡ ಕಾರ್ಮಿಕ ಭಯದಿಂದಲೇ ಠಾಣೆಗೆ ವಿಚಾರಣೆಗೆ ತೆರಳಿದ್ದಾನೆ. ಅಲ್ಲಿ ಮೊಹಮ್ಮದ್ ತನ್ನ ಖಾತೆಯಲ್ಲಿ ಕೇವಲ 17 ರೂಪಾಯಿ ಮಾತ್ರ ಇತ್ತು. ಇಷ್ಟು ಕೋಟಿ ಹಣ ಯಾರು ಜಮೆ ಮಾಡಿದ್ದಾರೆ ಎಂದು ಗೊತ್ತಿಲ್ಲ ಎಂದು ಹೇಳಿದ್ದಾನೆ. ವಿಚಾರಣೆ ಬಳಿಕ ತನ್ನ ಖಾತೆಯಲ್ಲಿ ಅಷ್ಟು ಹಣ ಇದೆಯೇ ಎಂದು ಖಚಿತ ಪಡಿಸಲು ಕಾರ್ಮಿಕ ಪಿಎನ್‌ಬಿ ಶಾಖೆಗೆ ತೆರಳಿ ವಿಚಾರಿಸಿದ್ದು, ಈ ವೇಳೆ ಖಾತೆಯಲ್ಲಿ 100 ಕೋಟಿ ರೂ ಇದೆ ಎಂಬುದು ಸ್ಪಷ್ಟವಾಗಿದೆ.

ಇದೀಗ ಮೊಹಮ್ಮದ್ ಖಾತೆಯನ್ನು ಬ್ಯಾಂಕ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪೊಲೀಸ್ ಪ್ರಕರಣ ದಾಖಲಾಗಿರುವುದರಿಂದ
ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಕೋಟಿಯ ಮೂಲ, ಘಟನೆಯ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ.

 

ಇದನ್ನು ಓದಿ: New 75 Rupees Coin: ಹೊಸ ಸಂಸತ್ ಭವನದ ಪ್ರಯುಕ್ತ ಬರಲಿದೆ 75 ರೂಪಾಯಿಯ ವಿಶೇಷ ನಾಣ್ಯ, ಇನ್ನು ಚಿಲ್ಲರೆ ಅಂದ್ರೂ ಅದಕ್ಕೆ ಬೆಲೆ ಜಾಸ್ತಿನೇ !!