Home Interesting Home Tips: ಮನೆ ಕಟ್ಟುವಾಗ ಈ ಟಿಪ್ಸ್ ಬಳಸಿ, 4 ರಿಂದ 5 ಲಕ್ಷ ಉಳಿಸಿ...

Home Tips: ಮನೆ ಕಟ್ಟುವಾಗ ಈ ಟಿಪ್ಸ್ ಬಳಸಿ, 4 ರಿಂದ 5 ಲಕ್ಷ ಉಳಿಸಿ !!

Home Tips

Hindu neighbor gifts plot of land

Hindu neighbour gifts land to Muslim journalist

Home Tips: ಪ್ರತಿಯೊಂದು ಕುಟುಂಬದ ಕನಸೆಂದರೆ ತಮ್ಮದೇ ಆದ ಒಂದು ಸ್ವಂತ ಮನೆ ಇರಬೇಕೆಂಬುದು. ಹಣವಂತರು ಬೇಗನೇ ಅಂದುಕೊಂಡದ್ದನ್ನು ಮಾಡಿದರೆ, ಮಧ್ಯಮ ವರ್ಗದವರು, ಸಾಮಾನ್ಯ ಜನರು ಸಾಕಷ್ಟು ವರ್ಷಗಳಿಂದ ದುಡಿದು, ಕೂಡಿಟ್ಟು ಮನೆಯನ್ನು ಕಟ್ಟಲು ಪ್ರಾರಂಭಿಸುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಒಂದೊಂದು ರೂಪಾಯಿಯೂ ತುಂಬಾ ಇಂಪಾರ್ಟೆಂಟ್ ಆಗಿರುತ್ತದೆ. ಆದರೆ ಕೆಲವರ ಮಾತುಗಳನ್ನು ಕೇಳಿ ಅಥವಾ ಸ್ವಂತ ಬುದ್ಧಿಯನ್ನು ಉಪಯೋಗಿಸದೆ ಅನೇಕರು ತಮ್ಮ ಬಜೆಟ್ ಅನ್ನು ಮೀರಿ ಹಣವನ್ನು ಖರ್ಚು ಮಾಡುತ್ತಾರೆ. ಆದರೆ ನೀವು ಈ ಟ್ರಿಕ್ಸ್(Home tips) ಗಳನ್ನು ಉಪಯೋಗಿಸಿದರೆ ಮನೆಯನ್ನು ಕಟ್ಟುವಾಗ ಸುಮಾರು ನಾಲ್ಕರಿಂದ ಐದು ಲಕ್ಷಗಳನ್ನು ಉಳಿಸಬಹುದು.

ಇದನ್ನೂ ಓದಿ: Bathroom – Washroom: ನೀವು ಔಟಿಂಗ್ ಹೋದಲ್ಲಿ ಬಾತ್‌ ರೂಂ, ವಾಶ್ ರೂಂ, ರೆಸ್ಟ್ ರೂಂ, ಟಾಯ್ಲೆಟ್ ಬೋರ್ಡ್ ನೋಡಿ ಕನ್ಫ್ಯೂಸ್ ಆಗದಿರಿ!

ಹೌದು, ಮನೆ ಕಟ್ಟುವುದು, ಸ್ವಂತ ಮನೆ ಹೊಂದುವುದು ಎಂಬುದು ಪ್ರತಿಯೊಂದು ಸಂಸಾರದ ಕನಸು. ಇದಕ್ಕಾಗಿ ದುಡಿದ ಹಣ ಕೂಡಿಟ್ಟು, ಸಾಲದಕ್ಕೆ ಸಾಲ ಮಾಡಿ ಹೇಗೋ ಹಣ ಹೊಂದಿಸಿಕೊಂಡು ಮನೆ ಕಟ್ಟಲು ಶುರು ಮಾಡುತ್ತಾರೆ. ಈ ಸಂದರ್ಭದಲ್ಲಿ ನಿರೀಕ್ಷೆ ಮೀರಿ ಹಣ ಖರ್ಚಾಗುವುದು ಸಹಜ. ಆದರೆ ಈ ಉಪಾಯಗಳನ್ನು ಬಳಸಿ ನೀವು ಹಣವು ವ್ಯರ್ಥವಾಗದಂತೆ ನೋಡಿಕೊಳ್ಳಿ.

ಇದನ್ನೂ ಓದಿ: CM Siddaramaiah: ನನಗಿನ್ನು ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋಗಲು ಇಷ್ಟವಿಲ್ಲ- ಸಿಎಂ ಸಿದ್ದರಾಮಯ್ಯ!!

• ಮನೆ ಕಟ್ಟುವ ಭೂಮಿಯ(Site) ಆಯ್ಕೆ ಸರಿಯಾಗಿರಬೇಕು. ಆರಂಭದಲ್ಲಿಯೇ ಸರಿ ಸಮಾನವಾಗಿ ಲೆವೆಲ್ ಆಗಿರುವಂತಹ ಭೂಮಿಯನ್ನು ಆಯ್ಕೆ ಮಾಡಿ. ಇಲ್ಲವಾದಲ್ಲಿ ಅದನ್ನು ಲೆವೆಲ್ ಮಾಡುವುದಕ್ಕೆ ನಿಮ್ಮ ಹಣ ಅರ್ಧಕ್ಕರ್ಧ ಕರ್ಚಾಗಿಬಿಡುತ್ತದೆ.

• ಒಳಗಿನ ವಾಲ್ಗಳಿಗೆ ಯಾವುದೇ ರೀತಿಯ ನೆಸ್ ಹಾಕುವ ಅಗತ್ಯವಿರುವುದಿಲ್ಲ. ಹೊರಗಿನ ವಾಲ್ ಗೆ 9 ಹಾಗೂ 6 ಇಂಚಿನ ದಪ್ಪಗಿರುವಂತಹ ನೆಸ್ ಹಾಕಿದ್ರೆ ಸಾಕು. ತಪ್ಪದೇ ಲಿಂಟಲ್ ಹಾಕಿ

• ಸಿಮೆಂಟ್(Cement) ಖರೀದಿಸುವಾಗ ನಿಮ್ಮ ಬುದ್ಧಿ ಉಪಯೋಗಿಸಿ. ಈಗಾಗಲೇ ಈ ಕ್ಷೇತ್ರದಲ್ಲಿ ಪರಿಣಿತರಾಗಿರುವಂತಹ ಇಂಜಿನಿಯರ್ಗಳ ಸಲಹೆ ಮೇರೆಗೆ ಉತ್ತಮ ಕ್ವಾಲಿಟಿಯ ಸ್ಪರ್ಧಾತ್ಮಕ ಬೆಲೆಯ ಸಿಮೆಂಟ್ ಅನ್ನು ಖರೀದಿಸಿ. ಪ್ಲಾಸ್ಟರ್ ರಿಂಗ್ ಮಾಡೋದಕ್ಕೆ 43 ಗ್ರೇಡ್ ಹಾಗೂ ಕನ್ಸ್ಟ್ರಕ್ಷನ್ ಮಾಡೋದಕ್ಕೆ 53 ಗ್ರೇಡ್ ಪಿಪಿಸಿ ಸಿಮೆಂಟ್ ಅನ್ನು ಬಳಸಿಕೊಳ್ಳಿ. ಬದಲಿಗೆ ಯಾವುದೋ ಜಾಹೀರಾತು ನೋಡಿ ದುಬಾರಿ ಬೆಲೆಯ ಸಿಮೆಂಟ್ ಅನ್ನು ಖರೀದಿಸಿದರೆ ಮಾತ್ರ ಮನೆ ಚೆನ್ನಾಗಿ ಬರುತ್ತೆ ಅನ್ನೋದನ್ನ ಬಿಟ್ಟುಬಿಡಿ. ಅನುಭವಸ್ಥರ ಮಾತು, ಅಭಿಪ್ರಾಯ ತಿಳಿದು ಇಲ್ಲೂ ಹಣ ಉಳಿಹಬಹುದು.

• ನೀವು ಪಿಲ್ಲರ್, ಭೀಮ್ ಹಾಕಿ ಮನೆ ನಿರ್ಮಾಣ ಮಾಡಿದರೆ ನಂತರ ಗೋಡೆಗಳನ್ನು ಒಳ್ಳೆ ಕ್ವಾಲಿಟಿಯ ಸಿಮೆಂಟ್ ಇಟ್ಟಿಗೆಯಿಂದ ಕಟ್ಟಬಹುದು. ಇದರಿಂದ ಮನೆಯೂ ಗಟ್ಟಿಬರುತ್ತದೆ, ಸಿಮೆಂಟ್ ಬಳಕೆಯೂ ಕಡಿಮೆ ಆಗುತ್ತದೆ. ಹೀಗಾದರೆ ದುಡ್ಡೂ ಉಳಿಯುತ್ತದೆ.

• ಟೈಲ್ಸ್, ಗ್ರಾನೈಟ್ ಹಾಕುವಾಗ ಇಂಜಿನಿಯರ್ ಬಳಿ ಮಾತನಾಡಿ ಉತ್ತಮ ಬಳಕೆಯ ಕಡಿಮೆ ರೇಟಿನವುಗಳನ್ನು ತನ್ನಿ. ಅಂಗಡಿಯವರು ಲಾಭಕ್ಕಾಗಿ ಏನೂ ಬೇಕಾದರೂ ಹೇಳುತ್ತಾರೆ.