Home Interesting ನಾಲ್ಕು ದಿನದಿಂದ ಈ ಅಜ್ಜಿಯ ವಾಸ ಹಾವಿನ ಜೊತೆ! ಏಕೆ ಗೊತ್ತೆ ?

ನಾಲ್ಕು ದಿನದಿಂದ ಈ ಅಜ್ಜಿಯ ವಾಸ ಹಾವಿನ ಜೊತೆ! ಏಕೆ ಗೊತ್ತೆ ?

Hindu neighbor gifts plot of land

Hindu neighbour gifts land to Muslim journalist

ನಾಲ್ಕು ದಿನದಿಂದ ಅಜ್ಜಿಯೊಬ್ಬರು ಹಾವಿನ ಜೊತೆಗೆ ವಾಸಿಸುತ್ತಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 

ಸಾರವ್ವಾ ಮೋನೇಶ್ ಕಂಬಾರ ಎಂಬುವವರ ಮನೆಗೆ ನಾಲ್ಕು ದಿನಗಳ‌ ಹಿಂದೆ ನಾಗರಹಾವು ಬಂದಿದೆ. ಅದನ್ನು ಹೊರಗೆ ಕಳುಹಿಸಲು ಎಷ್ಟೇ ಪ್ರಯತ್ನ ಪಟ್ಟರೂ, ಅದು ಹೋಗಲಿಲ್ಲ. ಇದರಿಂದ ಅಜ್ಜಿ ಆತಂಕಗೊಳ್ಳದೆ ತನ್ನ ಪತಿ ಹಾವಿನ ರೂಪದಲ್ಲಿ ಬಂದಿರುವುದಾಗಿ ನಂಬಿ, ಅದರ ಜೊತೆಗೆ ನಾಲ್ಕು ದಿನ ಕಳೆದಿದ್ದಾರೆ.

ಮೃತಪಟ್ಟಿರುವ ತನ್ನ ಗಂಡ ಹಾವಿನ ರೂಪದಲ್ಲಿ‌ ಬಂದಿದ್ದಾನೆ ಎಂದು ನಂಬಿರುವ ಅಜ್ಜಿಯೊಬ್ಬರು, ಕಳೆದ ನಾಲ್ಕು ದಿನಗಳಿಂದ ಮೃತಪಟ್ಟಿರುವ ಅವರ ಪತಿ ಹಾವಿನ ರೂಪದಲ್ಲಿ ಬಂದಿದ್ದಾರೆಂಬುದು ಅಜ್ಜಿ ಹಾವಿನ‌ಜೊತೆಗಿದ್ದಾರೆ !

ಮೃತಪಟ್ಟಿರುವ ತನ್ನ ಪತಿ ಈ ಹಾವಿನ ರೂಪದಲ್ಲಿ ಬಂದು, ನನ್ನ ಹತ್ತಿರ ಇದ್ದಾರೆ. ಅದಕ್ಕೆ ಯಾರು ತೊಂದರೆ ಮಾಡಬಾರದು, ಹಿಡಿಯಬಾರದು ಎಂದು ಅದನ್ನ 4 ದಿನಗಳಿಂದ ಅವರ ಚಾಪೆ ಮೇಲೆ ಇರಿಸಿ, ಅದನ್ನು ಜೋಪಾನ ಮಾಡುತ್ತಿದ್ದಾರೆ. ಹೀಗಾಗಿ ಅಜ್ಜಿಯ ನಂಬಿಕೆ ಹಾಗೂ ನಾಗರ ಹಾವನ್ನು ನೋಡಲು ಸುತ್ತಮುತ್ತಲಿನ ಜನ ಮುಗಿ ಬಿದ್ದಿದ್ದಾರೆ.