Home Interesting ಈ ವ್ಯಕ್ತಿ ಶೌಚಾಲಯಕ್ಕೆ ಹೋಗಲು ಭಯ ಪಡುತ್ತಾನೆ ಏಕೆ ಗೊತ್ತೆ

ಈ ವ್ಯಕ್ತಿ ಶೌಚಾಲಯಕ್ಕೆ ಹೋಗಲು ಭಯ ಪಡುತ್ತಾನೆ ಏಕೆ ಗೊತ್ತೆ

Hindu neighbor gifts plot of land

Hindu neighbour gifts land to Muslim journalist

ಶೌಚಾಲಯದಲ್ಲಿ ಹೆಚ್ಚಾಗಿ ಓಡಾಡುವ ಹಲ್ಲಿಗಳನ್ನು ಮತ್ತು ದೊಡ್ಡ ದೊಡ್ಡ ಜಿರಳೆಗಳು ಕಾಣುವುದು ಸಾಮಾನ್ಯ ಅಷ್ಟಕ್ಕೇ ಜನ ಭಯ ಪಟ್ಟಿಕೊಳ್ಳುತ್ತಾರೆ . ಆದರೆ ಇಲ್ಲೊಬ್ಬ ಶೌಚಾಲಯಲ್ಲಿ ಪದೇ ಪದೇ ಈ ಭಯಾನಕ ಪ್ರಾಣಿಯನ್ನು ಕಂಡು ಹೆದರಿದ್ದಾನೆ.

ಇಲ್ಲೊಬ್ಬ ಫ್ಲೋರಿಡಾ ವ್ಯಕ್ತಿ ಒಂದು ವರ್ಷದಲ್ಲಿ ಈ ವ್ಯಕ್ತಿ ತನ್ನ ಶೌಚಾಲಯದಲ್ಲಿರುವಂತಹ ಕೊಮೋಡ್ ನಲ್ಲಿ ಒಂದಲ್ಲ, ಎರಡಲ್ಲ ಮೂರು ಬಾರಿ ಇಗುವಾನಾ ಎಂದರೆ ಉಡ ಇರುವುದು ನೋಡಿ ಒಂದು ಕ್ಷಣ ಬೆಚ್ಚಿ ಬಿದ್ದು ಆ ಕೊಮೋಡ್ ನ ಮುಚ್ಚಳವನ್ನು ಮುಚ್ಚಿ ಶೌಚಾಲಯದಿಂದ ಹೊರ ಬಂದಿದ್ದಾರೆ.

ಫ್ಲೋರಿಡಾದ ಪೂರ್ವ ಕರಾವಳಿಯ ಒಂದು ನಗರದಲ್ಲಿ ವಾಸವಾಗಿರುವ ಬ್ರೂಸ್ ಬ್ಲೇಯರ್ ಅವರ ಮನೆಯ ಶೌಚಾಲಯದಲ್ಲಿ ಒಂದು ವರ್ಷದಲ್ಲಿ ಮೂರು ಬಾರಿ ಇಗುವಾನಾ ಎಂದರೆ ದೊಡ್ಡ ಉಡ ಬಂದು ಕುಳಿತಿತ್ತು. ನಂತರದಲ್ಲಿ ಅದನ್ನು ಹಿಡಿದುಕೊಂಡು ಹೋಗಲು ಸಂಬಂಧಪಟ್ಟವರಿಗೆ ಕರೆ ಮಾಡಿ ಕರೆಯಿಸಲಾಯಿತು.

ನಾನು ಪ್ರತಿಬಾರಿಯೂ ಶೌಚಾಲಯಕ್ಕೆ ಕಾಲಿಟ್ಟಾಗ, ಪ್ರತಿ ಬಾರಿಯೂ ನಾನು ಆತಂಕದಿಂದ ಆ ಕೊಮೋಡ್ ನ ಮುಚ್ಚಳವನ್ನು ತೆರೆಯುತ್ತೇನೆ” ಎಂದು ಬ್ರೂಸ್ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು. “ಇದು ಕಳೆದ ವಾರದಲ್ಲಿ ಎರಡು ಇಂತಹ ದೊಡ್ಡ ಉಡಗಳನ್ನು ನೋಡಿದೆ, ಆದ್ದರಿಂದ ಈ ಶೌಚಾಲಯ ಎಂದರೆ ಭಯ ಹುಟ್ಟಿದೆ” ಎಂದು ಇವರು ಹೇಳಿದರು.