Home Interesting ಗೆಳೆಯರ ಜತೆ ಡ್ಯಾನ್ಸ್ ಮಾಡುತ್ತಲೇ ಕಾಲ ಕಳೆದ ವರ | ಕಾದು ಸುಸ್ತಾದ ಹುಡುಗಿ ಬೇರೊಬ್ಬನ...

ಗೆಳೆಯರ ಜತೆ ಡ್ಯಾನ್ಸ್ ಮಾಡುತ್ತಲೇ ಕಾಲ ಕಳೆದ ವರ | ಕಾದು ಸುಸ್ತಾದ ಹುಡುಗಿ ಬೇರೊಬ್ಬನ ವಧು !

Hindu neighbor gifts plot of land

Hindu neighbour gifts land to Muslim journalist

ಜೈಪುರ: ಇನ್ನೇನು ಮಂಟಪ ಇರುವ ಮದುವೆ ಸ್ಟೇಜ್ ನ ನಾಲ್ಕು ಮೆಟ್ಟಲು ಹತ್ತಿ 7 ಹೆಜ್ಜೆ ಜತೆಯಾಗಿ ಕಿರುಬೆರಳು ಲಾಕ್ ಮಾಡಿಕೊಂಡು ಸುತ್ತಿದರೆ, ಹುಡುಗಿ ಆತನವಳು. ಹಾಗೇ ಮದುವೆಯಾಗಿ ವಧುವನ್ನು ಮನೆಗೆ ಕರೆದುಕೊಂಡು ಇನ್ನೇನು ಹೋಗಬೇಕಿತ್ತು. ಅಷ್ಟರಲ್ಲೇ ಈ ವ್ಯಕ್ತಿಯ ಬಾಳಲ್ಲಿ ಲಕ್ ಉಲ್ಟಾ ತಿರುಗಿದೆ.

ಅದೊಂದು ರಾತ್ರಿ ಕಳೆದಿದ್ದರೆ ಈ ವ್ಯಕ್ತಿ ಮದುವೆಯಾಗಿ, ಎಲ್ಲರಂತೆ ತನ್ನ ಮಡದಿಯೊಂದಿಗೆ ಮೊದಲ ರಾತ್ರಿಯ ಹೊಸ್ತಿಲಲ್ಲಿ ಬಂದು ಕನಸು ಕಾಣುತ್ತಾ ನಿಂತಿರುತ್ತಿದ್ದ. ಆದರೆ ಈತ ಮಾಡಿದ ಒಂದು ಮೈ ಮರೆವಿನ ತಪ್ಪಿನಿಂದಾಗಿ ಈಕೆಯನ್ನು ವರಿಸಬೇಕಿದ್ದ ವಧು ಬೇರೆಯವರ ಕೈ ಹಿಡಿದು ಮುಂದೆ ನಡೆದೇ ಬಿಟ್ಟಿದ್ದಾಳೆ.

ಈ ಘಟನೆ ನಡೆದಿರುವುದು ರಾಜಸ್ಥಾನದ ಚುರು ಜಿಲ್ಲೆಯಲ್ಲಿ. ಮೇ 15 ರಂದು ಮದುವೆಯ ಕಾರ್ಯಗಳು ನಡೆಯುತ್ತಿದ್ದವು. ಇತ್ತ ನೆಂಟರಿಷ್ಟರು ಮಂಟಪದಲ್ಲಿ ನೆರೆದಿದ್ದರು. ಮದುವೆ ಎಂದರೆ ವರನ ಸ್ನೇಹಿತರು ಬರದೆ ಇರ್ತಾರಾ ? ಅವರು ಬರದೆ ಮದುವೆ ಹೇಗೆ ನಡೆಯುತ್ತೆ ಹೇಳಿ?! ಹಾಗೆ ಬಂದ ವರನ ಗೆಳೆಯರಂತೂ ಫುಲ್ ಜೋಶ್ ನಲ್ಲಿ ಇದ್ದರು. ವರನ ಸ್ನೇಹಿತರು ವರನ ಮನೆಗೆ ಬಂದಿದ್ದಾರೆ. ತನ್ನ ಸ್ನೇಹಿತರು ಬಂದಿದ್ದಾರೆ ಎಂಬ ಖುಷಿಗೆ ವರ ಮದುವೆಯನ್ನೇ ಮರೆತುಬಿಡುವಷ್ಟು ಮಗ್ನನಾಗಿ ಡಿಜೆ ಹಾಡಿಗೆ ಸಖತ್ ಸ್ಟೆಪ್ ಹಾಕಿ ಥಕ ಥೈ ಮಾಡಿದ್ದಾನೆ. ರಾತ್ರಿಯಿಡೀ ಕುಣಿದದ್ದು ಆಗಿದೆ.

ಬೆಳಿಗ್ಗೆ ಕೂಡಾ ವರನ ಗೆಳೆಯರ ಜತೆ ವರ ಡ್ಯಾನ್ಸ್ ಮಾಡುವುದರಲ್ಲಿ ಮಗ್ನ. ಈತನ ಡ್ಯಾನ್ಸ್ ಮಾಡಿರುವುದೇ ವಧುವಿನ ಕಡೆಯವರಿಗೆ ಕೋಪ ಬರಲು ಕಾರಣವಾಗಿದೆ. ಈತ ಡ್ಯಾನ್ಸ್ ಮಾಡಿ ಸುಮ್ಮನೆ ಮಂಟಪಕ್ಕೆ ಬಂದಿದ್ದರೆ ಏನೂ ಆಗುತ್ತಿರಲಿಲ್ಲ ರಾತ್ರಿಯಿಡೀ ಡ್ಯಾನ್ಸ್ ಮಾಡುತ್ತಾ ಕಾಲ ಕಳೆದಿದ್ದರಿಂದ ಮತ್ತು ಮದುವೆಯ ಸಮಯ ಆದರೂ ವರ ಮಂಟಪಕ್ಕೆ ಬಾರದ ಕಾರಣದಿಂದ ಇತ್ತ ವಧು ಕಾದು ಕಾದು ಬೇರೆಯವನನ್ನು ಇದೇ ಮಂಟಪದಲ್ಲಿ ವರಿಸಿದ್ದಾಳೆ.

ಜೀವನದಲ್ಲಿ ಅತಿ ಮುಖ್ಯ ಘಟ್ಟವಾದ ಮದುವೆ ದಿನದಂದೇ ಈ ರೀತಿ ಮಾಡಿರುವ ಈತ, ಅದೆಷ್ಟು ಬೇಜಾವಾಬ್ದಾರಿ ಇರಬಹುದು? ಮತ್ತೆ, ನಾಳೆ ಮದುವೆಯಾಗಿ ಇನ್ನೆಷ್ಟು ಬೇಜವಾಬ್ದಾರಿಯಾಗಿ ವರ್ತಿಸಬಹುದು ಎಂದು ಕೋಪಗೊಂಡ ವಧುವಿನ ಕಡೆಯವರು, ಅಲ್ಲೇ ಮಂಟಪದಲ್ಲೇ ಮದುವೆ ಕ್ಯಾನ್ಸಲ್ ಮಾಡಿದ್ದಾರೆ. ಅಲ್ಲೇ ಮತ್ತೊಬ್ಬ ರೆಡಿಮೇಡ್ ಗಂಡುವನ್ನು ಹುಡುಕಿ ವಿವಾಹ ಮಾಡಿಕೊಟ್ಟಿದ್ದಾರೆ. ಇದರಿಂದ ತೀವ್ರ ನಿರಾಸೆಯಾದ ವರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಗೆಳೆಯರ ಜತೆ ಅನಗತ್ಯ ಡ್ಯಾನ್ಸ್ ಮಾಡಲು ಹೋದ ವರಮಹಾಶಯ ಸ್ಟೆಪ್ ತಪ್ಪಿ ಇದೀಗ ಪಶ್ಚಾತಾಪ ಪಡುವಂತಾಗಿದೆ.