Home Interesting Couple Kiss: ನಾವಿಬ್ರು ಕಮಿಟೆಡ್ ಅಂತಾ ಜಾತ್ರೆಯಲ್ಲೇ ಚುಂಬಿಸಿದ ಜೋಡಿ! ವಿಡಿಯೋ ವೈರಲ್

Couple Kiss: ನಾವಿಬ್ರು ಕಮಿಟೆಡ್ ಅಂತಾ ಜಾತ್ರೆಯಲ್ಲೇ ಚುಂಬಿಸಿದ ಜೋಡಿ! ವಿಡಿಯೋ ವೈರಲ್

Couple Kiss

Hindu neighbor gifts plot of land

Hindu neighbour gifts land to Muslim journalist

Couple Kiss: ಪ್ರೀತಿಸುವವರಿಗೆ ಪ್ರೀತಿ ವಿಷಯದಲ್ಲಿ ಯಾರಾದರೂ ಅಡ್ಡಿ ಆದರೆ ಕೆರಳಿ ಬಿಡುತ್ತಾರೆ ಅನ್ನೋದು ಕೇಳಿರಬಹುದು. ಆದ್ರೆ ಇಲ್ಲಿ ಒಂದು ಜೋಡಿಗೆ, ನಿಮ್ಮಿಬ್ಬರ ನಡುವೆ ಲವ್ ಇದೆಯಾ? ಎಂದು ಮಾತು ಮಾತಿಗೆ ಸ್ಥಳೀಯರು, ಗ್ರಾಮಸ್ಥರು ವ್ಯಂಗ್ಯ ಮಾಡುವುದನ್ನು ಸವಾಲಾಗಿ ಸ್ವೀಕರಿಸಿದ ಜೋಡಿ ಜಾತ್ರೆಯಲ್ಲಿ ಎಲ್ಲರ ಮುಂದೆ ಚುಂಬಿಸಿದ (Couple Kiss)  ಘಟನೆ ನಡೆದಿದೆ. ಇದೀಗ ಈ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.

ಹೌದು, ನೀವು ಈಗಾಗಲೇ ಪಾರ್ಕ್, ಟೆರೇಸ್, ಮೆಟ್ರೋ, ಬಸ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಜೋಡಿಗಳು ಚುಂಬಿಸುತ್ತಿರುವ ಘಟನೆಗಳು ನೋಡಿರಬಹುದು, ಅಂತೆಯೇ  ಇದೀಗ ಇಲ್ಲೊಂದು ಜೋಡಿ ಜಾತ್ರೆಯಲ್ಲಿ ಎಲ್ಲರ ಮುಂದೆ ತಬ್ಬಿಕೊಂಡು ಚುಂಬಿಸಿದ ದೃಶ್ಯಗಳು ಹಲವರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲೂ ವೈರಲ್ ಆಗಿದೆ.

ಉತ್ತರ ಪ್ರದೇಶದ ಮೀರತ್‌ನ ಈ ಯುವ ಜೋಡಿಗೆ ಕಳೆದ ಹಲವು ದಿನಗಳಿಂದ ಸ್ಥಳೀಯರು ಸೇರಿದಂತೆ ಪರಿಯಚಸ್ಥರ ಸಂಬಂಧವನ್ನು ಪ್ರಶ್ನೆ ಮಾಡುತ್ತಲೇ ಬಂದಿದೆ. ನಿಮ್ಮಬ್ಬರ ನಡುವೆ ಏನಿದೆ? ಎಲ್ಲಿ ಹೋದರು ಜೊತೆಯಾಗಿ ಕಾಣಿಸಿಕೊಳ್ಳುತ್ತೀದ್ದೀರಿ. ಈಗ ಮೀರತ್‌ನ ನೌಚಂಡಿ ಮೇಳದಲ್ಲೂ ಇದ್ದೀರಿಎಂದು ಗೇಲಿ ಮಾಡಿದ್ದಾರೆ.

ಇಂತಹ ಚುಚ್ಚು ಮಾತು, ಪ್ರಶ್ನೆಗಳಿಂದ ರೋಸಿ ಹೋದ ಜೋಡಿ ಇದನ್ನು ಸವಾಲಾಗಿ ಸ್ವೀಕರಿಸಿದೆ. ಬಳಿಕ ನೌಚಂಡಿ ಮೇಳ ಜಾತ್ರೆಯಲ್ಲಿ ಎಲ್ಲರ ಮುಂದೆ ಸುದೀರ್ಘವಾಗಿ ಚುಂಬಿಸಿದೆ. ಈ ಮೂಲಕ ತಮ್ಮ ಸಂಬಂಧವನ್ನು ನಾವು ಕಮಿಟೆಡ್ ಎಂದು ಎಲ್ಲರ ಮುಂದೆ ಸಾಬೀತುಪಡಿಸಿದ್ದಾರೆ. ಈ ಜೋಡಿಗಳು ಚುಂಬಿಸುತ್ತಿದ್ದಂತೆ ಜನರು ಚಪ್ಪಾಳೆ, ಶಿಳ್ಳೆ ಹೊಡೆದಿದ್ದಾರೆ. ಕೆಲವರು ಈ ಜೋಡಿಯ ಸುತ್ತ ಕುಣಿದು ಕುಪ್ಪಳಿಸಿದ್ದಾರೆ.

ಈ ವಿಡಿಯೋ ವೈರಲ್ ಬಳಿಕ ಜೋಡಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸಾರ್ವಜನಿಕ ಪ್ರದೇಶ, ಅದರಲ್ಲೂ ಜಾತ್ರೆಯಲ್ಲಿ ಈ ರೀತಿ ವರ್ತಿಸಿರುವುದು ಆಕ್ರೋಶಕ್ಕೆ ಗುರಿಯಾಗಿದೆ.

Govt Employees – RSS: ‘ಸರ್ಕಾರಿ ನೌಕರರು RSSಗೆ ಸೇರುವಂತಿಲ್ಲ’ ಎಂಬ ನಿಯಮವನ್ನ ರದ್ದು ಮಾಡಿದ ಮೋದಿ ಸರ್ಕಾರ! RSS ಭರ್ಜರಿ ಸ್ವಾಗತ