Home Interesting Big Bull | ಮಿಂಚಿನ ಓಟಕ್ಕೆ ಹೆಸರಾಗಿದ್ದ ಹೋರಿ ಬರೋಬ್ಬರಿ 19 ಲಕ್ಷಕ್ಕೆ ಸೇಲ್ !

Big Bull | ಮಿಂಚಿನ ಓಟಕ್ಕೆ ಹೆಸರಾಗಿದ್ದ ಹೋರಿ ಬರೋಬ್ಬರಿ 19 ಲಕ್ಷಕ್ಕೆ ಸೇಲ್ !

Hindu neighbor gifts plot of land

Hindu neighbour gifts land to Muslim journalist

10 ರಿಂದ 15 ಲಕ್ಷ ಹಣವಿದ್ದರೆ ಐಷಾರಾಮಿ ಕಾರನ್ನೇ ಖರೀದಿ ಮಾಡ್ಬೋದು, ಅದು ಅಷ್ಟು ದೊಡ್ದ ಮೊತ್ತ. ಆದರೆ ಮಿಂಚಿನ ಓಟಕ್ಕೆ ಹೆಸರಾಗಿದ್ದ ಹೋರಿಯೊಂದು ಬರೋಬ್ಬರಿ 19 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

ಹೌದು, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ವಾಸನ ಗ್ರಾಮದ ಕೃಷಿಕ ರೈತ ಕರಿಬಸಪ್ಪ ಎಂಬುವವರು ಅವರ ಹೋರಿಯನ್ನು19 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಕರಿಬಸಪ್ಪನ ಮನೆಯವರಿಗೆ ಹೋರಿ ಹಬ್ಬದ ಓಟದ ಸ್ಪರ್ಧೆ ಅಂದ್ರೆ ತುಂಬಾ ಅಚ್ಚು ಮೆಚ್ಚು. ಕರಿಬಸಪ್ಪನವರ ತಲೆಮಾರು ಓಟಕ್ಕೆ ಅಂತಲೇ ಹೆಸರುವಾಸಿ ಆಗಿತ್ತು. ಅವರೂ ಸಹ ಮೂರ್ನಾಲ್ಕು ಹೋರಿಗಳನ್ನು ತಂದಿದ್ದರು. ಆದರೆ ಅವು ಹೆಚ್ಚು ಹೆಸರು ಮಾಡಲಲ್ಲ. ಅದಕ್ಕಾಗಿ ಕಳೆದ 3 ವರ್ಷಗಳ ಹಿಂದೆ ತಮಿಳುನಾಡಿನಿಂದ 1.25 ಲಕ್ಷಕ್ಕೆ ಅಮೃತಮಹಲ್ ಹಳ್ಳಿಕಾರ ಜಾತಿಯ ಹೋರಿ ತಂದಿದ್ದರು.

‘ವಾಸನ ಬ್ರಹ್ಮ’ ಅಂತ ಹೆಸರು ಸಹ ನಾಮಕರಣ ಮಾಡಿದ್ದರು. ಮೊದಲಿನಿಂದಲೂ ಧೂಳೆಬ್ಬಿಸಿ ಓಟ ಓಡಿದ್ದ ಹೋರಿ, ಓಟದ ಸ್ಪರ್ಧೆಯ ಅಖಾಡದಲ್ಲಿ ಭರ್ಜರಿ ಜಯ ಗಳಿಸಿ ಹೆಸರು ಮಾಡಿತ್ತು. ಹತ್ತು ಹಲವು ಬಹುಮಾನಗಳನ್ನು ಸಹ ಪಡೆದಿತ್ತು. ವಾಸನ ಬ್ರಹ್ಮ ನನ್ನು ಜನ ಓಟದ ಬ್ರಹ್ಮ ಅನ್ನಲು ಶುರು ಮಾಡಿದ್ದರು. ಈಗ ಬ್ರಹ್ಮ ಹೆಸರಿನ ಈ ಹೋರಿಗೆ ಸಖತ್ ಬೇಡಿಕೆ ಬಂದಿದೆ. ಶರವೇಗದ ಓಟಕ್ಕೆ ಹೆಸರಾಗಿದ್ದರಿಂದ ಹೋರಿ ಬರೋಬ್ಬರಿ 19 ಲಕ್ಷಕ್ಕೆ ಮಾರಾಟವಾಗಿದೆ. ಐಷಾರಾಮಿ ದೊಡ್ಡ ಕಾರುಗಳ ಬೆಲೆಯನ್ನೂ ಮೀರಿಸುವಂತೆ ಹೋರಿಗೆ ಬಂಗಾರದ ಬೆಲೆ ಸಿಕ್ಕಿದೆ. ವಾಸನ ಬ್ರಹ್ಮ ನ ಯಜಮಾನ ಮಾತ್ರ ಬದಲಾಗಿದ್ದಾನೆ. ಹೋರಿಯ ಓಟದ ಕ್ಷಮತೆ ಇನ್ನೂ ಹುಡುಗು ಆಗಿದ್ದು, ಹೊಸ ಸಾರಥ್ಯದಲ್ಲಿ ವಿಭಿನ್ನ ಫಲಿತಾಂಶ ನೀಡುವ ನಿರೀಕ್ಷೆಯಲ್ಲಿದೆ.