Home Interesting ATM ಬಳಸೋ ಮುಂಚೆ ತಿಳಿದುಕೊಳ್ಳಿ ಈ ಸುರಕ್ಷತಾ ಮನದಂಡಗಳು| ತಪ್ಪಿದ್ದಲ್ಲಿ ಖಾಲಿ ಆಗಬಹುದು ಖಾತೆ!

ATM ಬಳಸೋ ಮುಂಚೆ ತಿಳಿದುಕೊಳ್ಳಿ ಈ ಸುರಕ್ಷತಾ ಮನದಂಡಗಳು| ತಪ್ಪಿದ್ದಲ್ಲಿ ಖಾಲಿ ಆಗಬಹುದು ಖಾತೆ!

Hindu neighbor gifts plot of land

Hindu neighbour gifts land to Muslim journalist

ಇಂದಿನ ದಿನಗಳಲ್ಲಿ ಬ್ಯಾಂಕ್ ವ್ಯವಹಾರಗಳಿಲ್ಲದೆ ಜೀವನ ಸಾಗುವುದಿಲ್ಲ. ಹಣಕಾಸಿಗೆ ಸಂಬಂಧಿಸಿದ ಯಾವುದೇ ಕೆಲಸಕ್ಕೂ ಬ್ಯಾಂಕ್ ಅತ್ಯಗತ್ಯ. ಅದಲ್ಲದೆ ಈಗಿನ ಕಾಲದಲ್ಲಿ ಎಟಿಎಂ ಬಳಸದವರು ಯಾರೂ ಇಲ್ಲ.ಇದರ ಸಹಾಯದಿಂದ ಹಣವನ್ನು ಹಿಂಪಡೆಯುವುದು ತುಂಬಾ ಸುಲಭ. ಕೆಲವೇ ನಿಮಿಷಗಳಲ್ಲಿ ಜನರು ಹಣವನ್ನು ಹಿಂಪಡೆಯಬಹುದು. ಹೀಗಾಗಿ, ಎಲ್ಲರೂ ಎಟಿಎಂ ಮೊರೆ ಹೋಗುತ್ತಾರೆ.

ಆದ್ರೆ, ಈ ಎಟಿಎಂ ಬಳಕೆಯಿಂದ ತುಂಬಾ ಅನುಕೂಲವೂ ಇದೆ. ಹಾಗೆ, ಇದನ್ನು ಸರಿಯಾಗಿ ಬಳಸದಿದ್ದರೆ ಗ್ರಾಹಕರು ತಮ್ಮ ಹಣ ಕಳೆದುಕೊಳ್ಳುವ ಅಪಾಯವಿರುತ್ತದೆ.ಹೌದು. ಎಟಿಎಂ ಬಳಸುವಾಗ ಯಾವ ರೀತಿ ಸುರಕ್ಷತಾ ಮಾನದಂಡಗಳನ್ನು ಅನುಸರಿಸಬೇಕು ಎಂಬುದು ಪ್ರತಿಯೊಬ್ಬರಿಗೂ ತಿಳಿದಿರಬೇಕು. ನಿಮಗೆ ಇದರ ಕುರಿತು ಮಾಹಿತಿ ಇಲ್ಲವಾದಲ್ಲಿ ನಾವು ತಿಳಿಸುತ್ತೇವೆ ನೋಡಿ..

ಕಾರ್ಡ್ ಸ್ಲಾಟ್ ಪರಿಶೀಲಿಸುವುದು ಅವಶ್ಯಕ:
ಹಣ ತೆಗೆದುಕೊಳ್ಳುವಾಗ ನೀವು ಕಾರ್ಡ್ ಹಾಕುವ ಎಟಿಎಂನ ಸ್ಲಾಟ್ ಪರಿಶೀಲಿಸುವುದು ಬಹಳ ಮುಖ್ಯ. ಕೆಲವೊಮ್ಮೆ ಸ್ಕ್ಯಾಮರ್‌ಗಳು ಈ ಸ್ಲಾಟ್ ಬದಲಾಯಿಸುತ್ತಾರೆ. ನಿಮ್ಮ ಕಾರ್ಡ್ ಸ್ಕ್ಯಾನ್ ಮಾಡುವ ಮತ್ತು ಅದನ್ನು ಕ್ಲೋನ್ ಮಾಡಬಹುದಾದ ಮತ್ತೊಂದು ಸಾಧನದೊಂದಿಗೆ ಬದಲಾಯಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಖಾತೆಯಿಂದ ಹಣವನ್ನು ಎಗರಿಸಿ ವಂಚನೆ ಮಾಡುವ ಸಾಧ್ಯತೆಯಿರುತ್ತದೆ. ಆದ್ದರಿಂದ ನೀವು ಎಟಿಎಂ ವಹಿವಾಟು ನಡೆಸುವ ಮೊದಲು ಈ ಸ್ಲಾಟ್ ಪರಿಶೀಲಿಸಿ.

ಯಾರೊಂದಿಗೂ ಪಿನ್ ಹಂಚಿಕೊಳ್ಳಬೇಡಿ:
ಅನೇಕ ಬಾರಿ ನಿಮಗೆ ನಗದು ಹಿಂಪಡೆಯಲು ಸಮಸ್ಯೆಯಾದಾಗ, ನೀವು ಎಟಿಎಂನಿಂದ ಹಣ ಪಡೆಯಲು ಬೇರೆಯವರ ಸಹಾಯ ಕೇಳುತ್ತೀರಿ. ಹೀಗೆ ಮಾಡುವುದರಿಂದ ಯಾವುದೇ ಹಾನಿ ಇಲ್ಲ. ಆದರೆ ಈ ಸಮಯದಲ್ಲಿ ನೀವು ಪಿನ್ ಹಂಚಿಕೊಳ್ಳಬಾರದು. ಒಂದು ವೇಳೆ ಆ ವ್ಯಕ್ತಿ ವಂಚಕನಾಗಿದ್ದರೆ ನಿಮ್ಮ ಕಾರ್ಡ್‌ನ ವಿವರಗಳ ಮೂಲಕ ಆತ ನಿಮ್ಮ ಖಾತೆಯಲ್ಲಿರುವ ಹಣವನ್ನು ಲಪಾಟಾಯಿಸಬಹುದು. ಹೀಗಾಗಿ ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಬಹುಮುಖ್ಯ.

ಕ್ಯಾಮೆರಾ ಪರಿಶೀಲಿಸಬೇಕು
ಎಟಿಎಂನಲ್ಲಿ ಪ್ರತ್ಯೇಕ ಕ್ಯಾಮೆರಾ ಅಳವಡಿಸಿ ನಿಮ್ಮ ಪಿನ್‍ಕೋಡ್ ಖದೀಯುವ ಖತರ್ನಾಕ್ ಖದೀಮರು ಇದ್ದಾರೆ. ಪಿನ್‍ಕೋಡ್ ಮೂಲಕ ವಂಚನೆ ನಡೆಸುವ ಹಲವು ಪ್ರಕರಣಗಳು ನಡೆದಿವೆ. ಹೀಗಾಗಿ ಇದರ ಬಗ್ಗೆ ನೀವು ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ. ನೀವು ಇಂತಹ ಕ್ಯಾಮೆರಾದ ಬಗ್ಗೆ ಸಂದೇಶವಿದ್ದರೆ ಸಂಬಂಧಿತ ಬ್ಯಾಂಕ್‌ಗೆ ತಕ್ಷಣವೇ ವರದಿ ಮಾಡಬೇಕು. ಇಂತಹ ಕ್ಯಾಮೆರಾಗಳ ಮೂಲಕ ನಿಮ್ಮ ಕಾರ್ಡ್ ಸೇರಿದಂತೆ ನಿಮ್ಮ ಪಿನ್ ವಿವರಗಳು ಸ್ಕ್ಯಾಮರ್‌ಗಳ ಪಾಲಾಗಬಹುದು.

ಹೀಗಾಗಿ ಎಟಿಎಂನಲ್ಲಿ ಹಣ ತೆಗೆದುಕೊಳ್ಳುವ ಮುನ್ನ ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ. ಇಲ್ಲವಾದಲ್ಲಿ ನಿಮ್ಮ ಖಾತೆ ಖಾಲಿಯಾಗೋದು ಖಚಿತ.