Home Interesting Camphor Benefits: ಮನೆಯಲ್ಲಿ ಶುಕ್ರದೆಸೆ ವೃದ್ಧಿಸಲು ಕರ್ಪೂರವನ್ನು ಈ ರೀತಿ ಬಳಸಿ!

Camphor Benefits: ಮನೆಯಲ್ಲಿ ಶುಕ್ರದೆಸೆ ವೃದ್ಧಿಸಲು ಕರ್ಪೂರವನ್ನು ಈ ರೀತಿ ಬಳಸಿ!

Camphor Benefits
Image source: krishi jargan

Hindu neighbor gifts plot of land

Hindu neighbour gifts land to Muslim journalist

Camphor Benefits: ಭಾರತೀಯ ಸಂಪ್ರದಾಯ ಪ್ರಕಾರ ಕರ್ಪೂರಕ್ಕೆ ವಿಶೇಷ ಸ್ಥಾನವಿದೆ ಮತ್ತು ಪ್ರತಿಯೊಂದು ಪೂಜೆಗೆ ಬಳಸಲಾಗುತ್ತದೆ. ಕರ್ಪೂರ ಜ್ವಾಲೆಯು ನಕಾರಾತ್ಮಕ ಶಕ್ತಿಯನ್ನು ದೂರವಿಡುತ್ತದೆ. ಹಿಂದೂ ನಂಬಿಕೆಯ ಪ್ರಕಾರ, ಕರ್ಪೂರದ ಬಳಕೆಯು ದೇವರು ಮತ್ತು ದೇವತೆಗಳನ್ನು ಸಮಾಧಾನಪಡಿಸುತ್ತದೆ.

ಕರ್ಪೂರವನ್ನು ಸುಡುವುದು ಬೆಳಕು ಮತ್ತು ಪರಿಮಳವನ್ನು ನೀಡುತ್ತದೆ, ಅದಲ್ಲದೆ ಇವೆರಡೂ ಆಧ್ಯಾತ್ಮಿಕತೆಗೆ ಸಂಬಂಧಿಸಿವೆ. ಕರ್ಪೂರದ ದಹನವು ದೇವರೊಂದಿಗೆ ಏಕತೆಯನ್ನು ಸೂಚಿಸುತ್ತದೆ ಮತ್ತು ಜ್ಞಾನ ಮತ್ತು ಒಳ್ಳೆಯತನದ ಬೆಳಕನ್ನು ಹರಡುತ್ತದೆ. ಅದಲ್ಲದೆ ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕರ್ಪೂರವನ್ನು ಬಳಸುವ ವಾಸ್ತು ಸಲಹೆಗಳು (Camphor Benefits) ಇಲ್ಲಿವೆ . ಮುಖ್ಯವಾಗಿ ಕರ್ಪೂರ ಸಕಾರಾತ್ಮಕ ಗುಣಗಳನ್ನು ಹೊಂದಿದೆ.

ಹೌದು, ಕರ್ಪೂರ ಮಾನವ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತವೆ. ಪ್ರಗತಿಯನ್ನು ಕಾಣಲು ದಾರಿ ದೀಪಾವಾಗಲಿದೆ. ಮನೆಯ ಆಗ್ನೇಯದಲ್ಲಿ ಸಂಜೆ ಕರ್ಪೂರದ ಹರಳುಗಳನ್ನು ಸುಡುವುದು ಸಮೃದ್ಧಿಯನ್ನು ಆಕರ್ಷಿಸುತ್ತದೆ. ವಾಸ್ತುವಿನ ಜೊತೆಗೆ, ಜ್ಯೋತಿಷ್ಯವೂ ಸಹ ತಪ್ಪಾದ ಸ್ಥಾನದಲ್ಲಿರುವ ನಕ್ಷತ್ರಗಳು ನಿಮ್ಮ ಅದೃಷ್ಟದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳುತ್ತದೆ. ತುಪ್ಪದೊಂದಿಗೆ ಕರ್ಪೂರವನ್ನು ಸುಡುವುದು ಈ ದೋಷಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ದೃಷ್ಟಿಗೆ ಒಳಗಾದ ವ್ಯಕ್ತಿಯ ತಲೆಯಿಂದ ಕಾಲಿನವರೆಗೆ ಕರ್ಪೂರದ ತುಂಡನ್ನು ತೆಗೆದುಕೊಂಡು ಪ್ರದಕ್ಷಿಣಾಕಾರವಾಗಿ ತಿರುಗಿಸಿ. ನಂತರ ಆ ಕರ್ಪೂರವನ್ನು ನೆಲದ ಮೇಲೆ ಇಟ್ಟು ಸುಡಬೇಕು. ಇದು ವ್ಯಕ್ತಿಯ ಮೇಲಾಗಿರುವ ಕೆಟ್ಟ ದೃಷ್ಟಿಗಳನ್ನು ತೆಗೆದುಹಾಕುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಪೂರವು ಪಿತ್ರ ದೋಷ ಮತ್ತು ಕಾಳಸರ್ಪ ದೋಷವನ್ನು ತೊಡೆದುಹಾಕಲು ತುಂಬಾ ಪರಿಣಾಮಕಾರಿಯಾಗಿದೆ. ಬೆಳಿಗ್ಗೆ, ಸಂಜೆ ಮತ್ತು ರಾತ್ರಿ ಮೂರು ಬಾರಿ ಮನೆಯಲ್ಲಿ ಕರ್ಪೂರವನ್ನು ಉರಿಸುವುದರಿಂದ ಈ ದೋಷಗಳಿಂದ ಮುಕ್ತಿ ಪಡೆಯಬಹುದು ಎಂದು ತಿಳಿಸಲಾಗಿದೆ.

ಇನ್ನು ರಾತ್ರಿ ಅಡುಗೆ ಮನೆಯ ಕೆಲಸವೆಲ್ಲ ಮುಗಿದ ನಂತರ ಬೆಳ್ಳಿಯ ಬಟ್ಟಲಿನಲ್ಲಿ ಲವಂಗ ಮತ್ತು ಕರ್ಪೂರವನ್ನು ಸುಟ್ಟು ಹಾಕಿ. ಇದನ್ನು ನಿಯಮಿತವಾಗಿ ಮಾಡುವುದರಿಂದ, ವ್ಯಕ್ತಿಯ ಸಂಪತ್ತು ವೃದ್ಧಿಸುತ್ತದೆ ಜೊತೆಗೆ ಧನಾತ್ಮಕ ಶಕ್ತಿಯು ಮನೆಯಲ್ಲಿ ನೆಲೆಸುತ್ತದೆ.

ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಸ್ಮಾರ್ಟ್ ಕ್ಲಾಸ್‍ನಲ್ಲಿ ಅಶ್ಲೀಲ ವೀಡಿಯೋ ತೋರಿಸಿದ ಶಿಕ್ಷಕ! ಈತನ ಅಸಭ್ಯ ವರ್ತನೆಯಿಂದ ಮುಂದೆ ಆದದ್ದೇನು?