Home Interesting Anaconda Video : ನೀವೆಂದೂ ಈ ದೈತ್ಯ ಹಾವನ್ನ ನೋಡಿರೋಕೆ ಸಾಧ್ಯನೇ ಇಲ್ಲ!

Anaconda Video : ನೀವೆಂದೂ ಈ ದೈತ್ಯ ಹಾವನ್ನ ನೋಡಿರೋಕೆ ಸಾಧ್ಯನೇ ಇಲ್ಲ!

Hindu neighbor gifts plot of land

Hindu neighbour gifts land to Muslim journalist

ಹಾವುಗಳು ಅಂದರೆ ಹೆಚ್ಚಿನವರಿಗೆ ಭಯ. ಹಲವಾರು ಬಗೆಗಳ ಹಾವುಗಳಿದ್ದು ಕೆಲವೊಂದು ಹಾವುಗಳು ಕಚ್ಚಿದರೆ ಮನುಷ್ಯ ಜೀವಂತ ಉಳಿಯಲು ಕಷ್ಟಕರ. ಆದರೆ ಇಲ್ಲೊಬ್ಬ ದೊಡ್ಡ ಹಾವಿನೊಂದಿಗೆ ವೀಡಿಯೋ ಮಾಡಿದ್ದಾನೆ. ಇವನ ಗುಂಡಿಗೆಯನ್ನು ಮೆಚ್ಚಲೇ ಬೇಕು.

ಹಾವುಗಳ ಹಲವು ಅಪಾಯಕಾರಿ ವಿಡಿಯೋಗಳನ್ನು ನೀವು ನೋಡಿರಬೇಕು. ಆದರೆ ಈತ ಅನಕೊಂಡವನ್ನು ವಿಡಿಯೋದಲ್ಲಿ ಹಿಡಿದಿದ್ದಾನೆ.

ಅನೇಕ ಜನರು ಹಾವುಗಳ ವಿಡಿಯೋಗಳನ್ನು ಇಷ್ಟಪಡುತ್ತಾರೆ. ಆದರೂ ಮುಟ್ಟಲು ಭಯ. ನಿಮಗೇನಾದರೂ ಹಾವುಗಳ ಬಗ್ಗೆ ಕ್ರೇಜ್‌ ಹೊಂದಿದ್ದರೆ ಈ ಟ್ರೆಂಡಿಂಗ್ ವಿಡಿಯೋವನ್ನು ನೀವು ಸಹ ಇಷ್ಟಪಡುತ್ತೀರಿ. ಹಾವಿನ ಹೆಸರಿನಿಂದಲೇ ಅನೇಕ ಜನರು ಭಯಭೀತರಾಗುತ್ತಾರೆ.

ಈ ವಿಡಿಯೋದಲ್ಲಿ ನೀವು ಗ್ರೀನ್ ಅನಕೊಂಡದ ಹತ್ತಿರ ಕುಳಿತಿರುವ ವ್ಯಕ್ತಿಯನ್ನು ನೋಡಬಹುದು. ಅಷ್ಟೇ ಅಲ್ಲ, ಹಾವನ್ನು ಮತ್ತೆ ಮತ್ತೆ ಮುಟ್ಟಲು ಸಹ ಆತ ಹೆದರುವುದಿಲ್ಲ. ಆತನ ಮುಖದ ಮೇಲೆ ನಗುವನ್ನು ಸಹ ನೀವು ಕಾಣಬಹುದು.

ಈ ವಿಡಿಯೋದಲ್ಲಿರುವ ವ್ಯಕ್ತಿ ಹಾವಿನೊಂದಿಗೆ ಕೆಲವು ಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳಲು ಪ್ರಯತ್ನಿಸುತ್ತಿರುವಂತೆ ತೋರುತ್ತದೆ. ವಿಡಿಯೋದಲ್ಲಿ, ಹಸಿರು ಅನಕೊಂಡ ತನ್ನ ನಾಲಿಗೆಯನ್ನು ಚಾಚಿಕೊಂಡಿರುವುದನ್ನು ಸಹ ಕಾಣಬಹುದು. ಹಾವು ವ್ಯಕ್ತಿಯ ಮೇಲೆ ಯಾವುದೇ ರೀತಿಯಲ್ಲಿ ದಾಳಿ ಮಾಡದಿದ್ದರೂ, ಹಾವುಗಳಿಂದ ಅಪಾಯ ತಪ್ಪಿದ್ದಲ್ಲ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ವಿಡಿಯೋವನ್ನು ತುಂಬಾ ಜನರು ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ ಸಾವಿರಾರು ಮಂದಿ ಸೋಶಿಯಲ್ ಮೀಡಿಯಾ ಬಳಕೆದಾರರು ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಜನರು ಭಯವಾದ ರೀತಿ ಕಾಮೆಂಟ್ ಮಾಡಿದ್ದಾರೆ.