Home Interesting ಆಧಾರ್ ಸಂಖ್ಯೆಯ ಮೂಲಕ ಹಣಕಾಸಿನ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಬಹುದು | UIDAI ಹೇಳಿದ್ದೇನು?

ಆಧಾರ್ ಸಂಖ್ಯೆಯ ಮೂಲಕ ಹಣಕಾಸಿನ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಬಹುದು | UIDAI ಹೇಳಿದ್ದೇನು?

Hindu neighbor gifts plot of land

Hindu neighbour gifts land to Muslim journalist

ಆಧಾರ್ ಕಾರ್ಡ್ ಎಂಬುದು ವ್ಯಕ್ತಿಯ ಗುರುತಾಗಿದ್ದು, ಇದು ಭಾರತದ ಪ್ರತಿಯೊಬ್ಬ ನಾಯಕನಿಗೂ ಕಡ್ಡಾಯವಾಗಿದೆ. ಸರ್ಕಾರಿ ಕೆಲಸದಿಂದ ಹಿಡಿದು ಬ್ಯಾಂಕ್ ವಹಿವಾಟುಗಳ ವರೆಗೂ ಇದರ ಕಾರ್ಯ ಮಹತ್ವದ್ದಾಗಿದೆ. ನಮ್ಮ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುವ ಆಧಾರ್ ಕಾರ್ಡ್ ಮತ್ತು ನಂಬರ್ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯ.

ಆಧಾರ್ ಕಾರ್ಡ್ ಅನ್ನು ಹುಷಾರಾಗಿ ಬಳಸಬೇಕೆಂದರೆ ಹೇಗೆ ಬಳಸಬೇಕು, ಎಲ್ಲೆಲ್ಲಿ ಬಳಸಬೇಕು, ಎಲ್ಲೆಲ್ಲಿ ಬಳಸಬಾರದು ಎಂಬುದು ಜನಸಾಮಾನ್ಯರಿಗೆ ಸ್ಪಷ್ಟ ಅರಿವು ಇರಬೇಕಾದ್ದು ಅಗತ್ಯ. ಯಾಕೆಂದರೆ ಆಧಾರ್‌ನ ಉಪಯುಕ್ತತೆ ಹೆಚ್ಚುತ್ತಿದ್ದು,  ಅದಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಇಂತಹ ಪರಿಸ್ಥಿತಿಯಲ್ಲಿ, UIDAI ತನ್ನ ಅಧಿಕೃತ ಟ್ವಿಟರ್​ನಲ್ಲಿ ಆಧಾರ್‌ಗೆ ಸಂಬಂಧಿಸಿದ ಯಾವುದೇ ತಪ್ಪು ಮಾಹಿತಿಯ ಕುರಿತಾಗಿ ಮಾಹಿತಿಯನ್ನು ಹಂಚಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಆಧಾರ್ ಸಂಖ್ಯೆಯ ಮೂಲಕ ಯಾರಾದರೂ ನಮ್ಮ ಹಣಕಾಸಿನ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಬಹುದು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿತ್ತು.

ಆದರೆ, ಈ ಕುರಿತು ಯುಐಡಿಎಐ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದು, ಯಾವುದೇ ಸಂದರ್ಭದಲ್ಲೂ ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ಯುಐಡಿಎಐ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್​ನಲ್ಲಿ ಮಾಹಿತಿ ನೀಡಿದೆ. UIDAI ಯಾವುದೇ ನಿವಾಸಿ ಹಣಕಾಸು ಮಾಹಿತಿ ಅಥವಾ ಡೇಟಾವನ್ನು ಹೊಂದಿಲ್ಲ. ಆಧಾರ್ ಸಂಖ್ಯೆಯ ಮೂಲಕ ಹಣಕಾಸು ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲಾಗುತ್ತಿದೆ ಎಂಬ ಹೇಳಿಕೆಯನ್ನು ಆಧಾರ್ ಸಂಖ್ಯೆಯ ಮೂಲಕ ಯಾವುದೇ ಹಣಕಾಸಿನ ಮಾಹಿತಿಯನ್ನು ಪ್ರವೇಶಿಸಲಾಗುವುದಿಲ್ಲ. ಇಂತಹ ನಕಲಿ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದ್ದು, ಅದಕ್ಕೆ ಮರುಳಾಗಬೇಡಿ ಎಂದು ತಿಳಿಸಿದೆ.