Home Interesting ಸ್ಮಾರ್ಟ್ ಫೋನ್ ಆಸೆಗೆ ಬಿದ್ದ ವಿದ್ಯಾರ್ಥಿನಿ | ಫೋನ್ ಗೆ ಹಣ ಪಾವತಿ ಮಾಡಲು ಈಕೆ...

ಸ್ಮಾರ್ಟ್ ಫೋನ್ ಆಸೆಗೆ ಬಿದ್ದ ವಿದ್ಯಾರ್ಥಿನಿ | ಫೋನ್ ಗೆ ಹಣ ಪಾವತಿ ಮಾಡಲು ಈಕೆ ಹಿಡಿದ ದಾರಿ ನಿಜಕ್ಕೂ ಆಘಾತಕಾರಿ!!!

Hindu neighbor gifts plot of land

Hindu neighbour gifts land to Muslim journalist

ಬೇಕು ಬೇಕಾದಾದನ್ನು ಕೊಂಡುಕೊಳ್ಳಲು ಹಣ ಬೇಕು ತಾನೇ. ಹಣ ಬೇಕು ಅಂದ್ರೆ ದುಡಿಬೇಕು. ದುಡಿಮೆ ಇಲ್ಲ ಅಂದ್ರೆ ಏನು ಮಾಡೋದು? ಹೌದು ಇಲ್ಲೊಬ್ಬಳು 16ವರ್ಷದ ಹುಡುಗಿ ಏನು ಮಾಡಿದ್ದಾಳೆ ನೀವೇ ನೋಡಿ.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯು ದಕ್ಷಿಣ ದಿನಾಜ್​ಪುರದ ತಾಪನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾರ್ಡಾದ ನಿವಾಸಿ. ಈಕೆಗೆ ಸ್ಮಾರ್ಟ್​ ಪೋನ್​ ಖರೀದಿಸಬೇಕೆಂಬ ಆಸೆ ಮಾತ್ರ ಅಲ್ಲ ಆನ್​ಲೈನ್​ನಲ್ಲಿ 9 ಸಾವಿರ ರೂ. ಮೌಲ್ಯದ ಸ್ಮಾರ್ಟ್​ಫೋನ್​ ಆರ್ಡರ್ ಮಾಡಿಯೇ ಬಿಟ್ಟಳು. ಆದರೆ, ಅಷ್ಟೊಂದು ಹಣವನ್ನು ವ್ಯವಸ್ಥೆ ಮಾಡುವುದು ಕಷ್ಟ ಎಂದು ತಿಳಿದಿತ್ತು. ಹಾಗಾಗಿ ತನ್ನ ರಕ್ತವನ್ನು ಮಾರಾಟ ಮಾಡಲು ನಿರ್ಧರಿಸಿದ್ದಾಳೆ.

ರಕ್ತ ಮಾರಾಟ ಮಾಡಲು ನಿರ್ಧಾರ ಮಾಡಿದ ವಿದ್ಯಾರ್ಥಿನಿ, ಬಲುರ್ಘಾಟ್​ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ತೆರಳಿ ರಕ್ತವನ್ನು ನೀಡಿದ್ದಾಳೆ.

ಬ್ಲಡ್ ಬ್ಯಾಂಕ್ ಉದ್ಯೋಗಿ ಕನಕ್ ದಾಸ್ ಪ್ರಕಾರ, ವಿದ್ಯಾರ್ಥಿನಿಯು ರಕ್ತದಾನಕ್ಕೆ ಬದಲಾಗಿ ಹಣಕ್ಕೆ ಬೇಡಿಕೆ ಇಟ್ಟಾಗ ಸಿಬ್ಬಂದಿಗೆ ಅನುಮಾನ ಬಂದಿತು. ಕೂಡಲೇ ಆಸ್ಪತ್ರೆಯ ಸಿಬ್ಬಂದಿ ಶಿಶುಪಾಲನಾ ವಿಭಾಗಕ್ಕೆ ಮಾಹಿತಿ ನೀಡಲಾಯಿತು. ಅವರು ಆಸ್ಪತ್ರೆಗೆ ಆಗಮಿಸಿ, ವಿಚಾರಿಸಿದಾಗ ವಿದ್ಯಾರ್ಥಿನಿಯ ಮೊಬೈಲ್​ ಬಯಕೆಯ ನಿಜವಾದ ಕಾರಣ ತಿಳಿಯಿತು ಎಂದು ಮಾಹಿತಿ ತಿಳಿಸಿದ್ದಾರೆ.

ಮಕ್ಕಳ ಆರೈಕೆ ಸದಸ್ಯೆ ರೀಟಾ ಮಹ್ತೋ ಪ್ರಕಾರ, ವಿದ್ಯಾರ್ಥಿನಿಯ ಬಳಿ ಕಾರಣವನ್ನು ಕೇಳಿದಾಗ, ಸ್ಮಾರ್ಟ್​ ಫೋನ್ ಶೀಘ್ರದಲ್ಲೇ ಡೆಲಿವರಿ ಆಗುತ್ತಿದೆ. ನನ್ನ ಬಳಿ ಹಣವಿಲ್ಲ. ಹೀಗಾಗಿ ಹಣವನ್ನು ಸಂಗ್ರಹಿಸಲು ರಕ್ತವನ್ನು ಮಾರಾಟ ಮಾಡುವ ನಿರ್ಧಾರ ಮಾಡಿದ್ದಾಗಿ ತಿಳಿಸಿದ್ದಾಳೆ ಎಂದಿದ್ದಾರೆ.

ಒಟ್ಟಾರೆ ಅಪ್ರಾಪ್ತ ಮಕ್ಕಳು ಯಾವ ರೀತಿ ದಾರಿ ತಪ್ಪುತ್ತಾರೆ ಅನ್ನೋದು ಊಹಿಸಲು ಕೂಡ ಅಸಾಧ್ಯ ಆಗಿದೆ.