Home Health ಮುಂದಿನ ಆರು ತಿಂಗಳು ಮಹಿಳೆಯರು ಗರ್ಭ ಧರಿಸುವಂತಿಲ್ಲ | ಮನೆಗೂ ಮನೆಗೂ ಕಾಂಡೋಂ‌ ವಿತರಣೆ

ಮುಂದಿನ ಆರು ತಿಂಗಳು ಮಹಿಳೆಯರು ಗರ್ಭ ಧರಿಸುವಂತಿಲ್ಲ | ಮನೆಗೂ ಮನೆಗೂ ಕಾಂಡೋಂ‌ ವಿತರಣೆ

Hindu neighbor gifts plot of land

Hindu neighbour gifts land to Muslim journalist

ರಾಜ್ಯದ ರಾಯಚೂರು ಜಿಲ್ಲೆಯಲ್ಲಿ ಮೊದಲ ಝಿಕಾ ವೈರಸ್ ಪ್ರಕರಣ ನಿನ್ನೆ ವರದಿಯಾಗಿತ್ತು. ಈ ಘಟನೆ ಜನರಲ್ಲಿ ಆಂತಕ ಸೃಷ್ಟಿ ಮಾಡಿದೆ. ಹಾಗಾಗಿ ಮಕ್ಕಳ ತಜ್ಞರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಲು ಹೆಚ್ಚು ಒತ್ತು ನೀಡಲು ಹೇಳುತ್ತಿದ್ದಾರೆ. ಈ ನಡುವೆ ಆರೋಗ್ಯ ಇಲಾಖೆ, ಮುಂದಿನ ಆರು ತಿಂಗಳ ಕಾಲ ಯಾರೂ ಗರ್ಭ ಧರಿಸದಂತೆ, ಸೂಚನೆಯೊಂದನ್ನು ಪ್ರಕಟಿಸಿದೆ.

ಝಿಕಾ ವೈರಸ್ ಗರ್ಭ ಧರಿಸಿರುವ ತಾಯಿಯ ಮೂಲಕ ಮಗುವಿಗೆ ತಗುಲುತ್ತದೆ ಎನ್ನುವುದು ಸಂಶೋಧನೆಯಿಂದ ಧೃಢಪಟ್ಟಿದೆ. ಇದರಿಂದ ಮಗು ಹುಟ್ಟುವ ಮುನ್ನವೇ ಗಂಭೀರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದೆ. ಹೀಗಾಗಿ ಈಗ ಆರೋಗ್ಯ ಇಲಾಖೆ, ಮಹಿಳೆಯರಿಗೆ ಮುಂದಿನ ಆರು ತಿಂಗಳ ಕಾಲ ಗರ್ಭ ಧರಿಸದಂತೆ ಸೂಚನೆ ನೀಡಿದೆ.

ಜಿಕಾ ವೈರಸ್ ಒಂದೇ ಮಾದರಿಯ ಆರ್‌ನ್‌ ವೈರಸ್ ಗುಂಪಿಗೆ ಪ್ಲೇಮಿ ವೈರಸ್ ಗುಂಪು ಸೇರಿದ್ದಾಗಿದೆ. ಈಡಿಸ್ ಜಾತಿಯ ಸೊಳ್ಳೆ ಕಚ್ಚುವುದರಿಂದ ಝಿಕಾ ಹರಡುತ್ತದೆ. ಡೆಂಘಿಗೂ ಇದೇ ಸೊಳ್ಳೆ ಕಾರಣ. ಹಳದಿ ಜ್ವರ, ಜಪಾನೀಸ್ ಎನ್ಸೆಲೈಟಿಸ್ ಮತ್ತು ವೆಸ್ಟ್ ನೈಲ್ ವೈರಸ್‌ಗಳೊಂದಿಗೆ ಇದು ನಿಕಟ ಸಂಬಂಧ ಹೊಂದಿದೆ ಎಂದು ಸಂಶೋಧನೆಯಿಂದ ಸಾಬೀತಾಗಿದೆ.

ಅಂದ ಹಾಗೇ, ರಾಯಚೂರು ಜಿಲ್ಲೆಯ ಮಕ್ಕಳ ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದು, ಜಿಕಾ ವೈರಸ್ ಕಾರಣ ಆತಂಕಗೊಂಡಿರುವ ಪೋಷಕರು ತಮ್ಮ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾರೆ. ಈಗ ಆರೋಗ್ಯ ಇಲಾಖೆ ಒಟ್ಟು 57 ಗರ್ಭಿಣಿಯರ ರಕ್ತದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರೀಕ್ಷೆ ಕಳುಹಿಸಿದೆ. ಕಳೆದ ವಾರವಷ್ಟೇ ರಾಜ್ಯದಲ್ಲಿ ಮೊದಲ ಬಾರಿಗೆ ಜಿಕಾ ವೈರಸ್ ಪತ್ತೆಯಾಗಿತ್ತು. ಇದು 5 ವರ್ಷದ ಬಾಲಕಿಗೆ ಓರ್ವಳಿಗೆ ಇದ್ದದ್ದು ಟೆಸ್ಟ್‌ನಲ್ಲಿ ದೃಢವಾಗಿತ್ತು. ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು.

ಇವೆಲ್ಲದರ ಮಧ್ಯೆ ಮಾಂಡೌಸ್ ಚಂಡಮಾರುತದಿಂದಾಗಿ ಚಳಿ ಇನ್ನಷ್ಟು ಹೆಚ್ಚಿದೆ. ಚಳಿಗಾಲ, ಅದರ ಜೊತೆ ಮಳೆಯೂ ಸೇರಿದ ಕಾರಣ ಮಕ್ಕಳಲ್ಲಿ ಜ್ವರ, ಕೆಮ್ಮು, ಶೀತ ಕಾಣಿಸಿಕೊಳ್ಳುತ್ತಿದೆ.

ಹಾಗಾಗಿ ಮನೆ ಮನೆಗೂ ತೆರಳಿ ಆಶಾ ಕಾರ್ಯಕರ್ತೆಯರು ಮತ್ತು ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್‌ಗಳು ಸರ್ವೆ ಕಾರ್ಯ ಮಾಡುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕಾಂಡೋಮ್ ಬಳಸುವಂತೆ ಜನರಿಗೆ ಮಾಹಿತಿ ನೀಡಿ ಕಾಂಡೋಮ್ ವಿತರಣೆ ಮಾಡುತ್ತಿದ್ದಾರೆ. ಗರ್ಭಿಣಿ, ಬಾಣಂತಿಯರಲ್ಲಿ ಝಿಕಾ ವೈರಸ್ ಕಂಡುಬಂದರೆ, ಹುಟ್ಟುವ ಮಕ್ಕಳಲ್ಲಿ ಅಂಗವೈಕಲ್ಯ ಬರುವ ಸಂಭವ ಹೆಚ್ಚಿರುವ ಕಾರಣ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ‌. ಹಾಗಾಗಿ ಸುರಕ್ಷಿತ ಲೈಂಗಿಕ ಸಂಪರ್ಕ ಹೊಂದಲು ಜನರಿಗೆ ತಿಳುವಳಿಕೆ ನೀಡಲಾಗುತ್ತಿದೆ.