Home Health Taller surgery : ಪ್ರಿಯತಮೆಗಾಗಿ 5 ಇಂಚು ಎತ್ತರವಾಗಲು ಈ ಪುಣ್ಯಾತ್ಮ ಏನು ಮಾಡಿದ್ದಾನೆ ನೀವೇ...

Taller surgery : ಪ್ರಿಯತಮೆಗಾಗಿ 5 ಇಂಚು ಎತ್ತರವಾಗಲು ಈ ಪುಣ್ಯಾತ್ಮ ಏನು ಮಾಡಿದ್ದಾನೆ ನೀವೇ ನೋಡಿ!

Hindu neighbor gifts plot of land

Hindu neighbour gifts land to Muslim journalist

Taller surgery : ಪ್ರಪಂಚದಲ್ಲಿ ಪ್ರೀತಿ ಒಂದು ಅಮಾನುಷವಾದ ಮತ್ತು ಬಲವಾದ ಶಕ್ತಿ ಕೂಡ ಹೌದು. ಪ್ರೀತಿಗಾಗಿ, ಪ್ರೀತಿಸುವವರಿಗಾಗಿ ಏನು ಬೇಕಾದರು ತ್ಯಾಗ ಮಾಡಲು ಪ್ರೇಮಿಗಳು ಸದಾ ಸಿದ್ಧ ಇರುತ್ತಾರೆ ಅಂತಲೂ ಕೇಳಿದ್ದೇವೆ.
ಅದೇ ರೀತಿ ಇಲ್ಲೊಂದು ಆಶ್ಚರ್ಯ ಸಂಗತಿ ನೀವು ತಿಳಿಯಲೇ ಬೇಕು.

ಅಮೆರಿಕಾದ ಮಿನ್ನೆಸೋಟಾ ರಾಜ್ಯದ ಮಿನ್ನಿಯಾಪೊಲಿಸ್ ಮೂಲದ 41 ವರ್ಷದ ಮೋಸೆಸ್ ಗಿಬ್ಬನ್ ತನ್ನ ಎತ್ತರದ ಕಡಿಮೆ ಇರೋದ್ರಿಂದ ಗರ್ಲ್‌ಫ್ರೆಂಡ್‌ನೊಂದಿಗೆ ಮಾತನಾಡಲು ವರ್ಷಗಳಿಂದ ಹೆಣಗಾಡುತ್ತಿದ್ದನು. ಅದಲ್ಲದೆ 15 ವರ್ಷದವನಾಗಿದ್ದಾಗಿನಿಂದಲೂ ತನ್ನ ಎತ್ತರದ ಬಗ್ಗೆ ಚಿಂತೆ ಮಾಡುತ್ತಿದ್ದನು.

ಬಳಿಕ ಎತ್ತರವಾಗಲು ಮೋಶೆ ಔಷಧಿಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದನು. ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದರು. ಅವರು ಹಗಲಿನಲ್ಲಿ ಸಾಫ್ಟ್ರ್ ಎಂಜಿನಿಯರ್ ಆಗಿ ಮತ್ತು ರಾತ್ರಿ ಉಬರ್ ಚಾಲಕನಾಗಿ ಹಣವನ್ನು ಉಳಿಸಲು ಕೆಲಸ ಮಾಡುತ್ತಿದ್ದರು.

ನಂತರ 2016 ರಲ್ಲಿ ಮೋಶೆ ಔಷಧಿಗಳ ಮೂಲಕ ಮೊದಲ ಬಾರಿಗೆ ಮೂರು ಹೆಚ್ಚುವರಿ ಇಂಚುಗಳನ್ನು ಪಡೆದನು. ಅದರೂ ಅತೃಪ್ತನಾಗಿ ಕೆಲ ತಿಂಗಳ ನಂತ್ರ ಆತ ಮತ್ತೊಂದು ಕಾರ್ಯವಿಧಾನಕ್ಕೆ ಒಳಗಾಗಲು ನಿರ್ಧರಿಸಿದರು.

ವೈದ್ಯರು ಮೋಶೆಯ ಶಸ್ತ್ರಚಿಕಿತ್ಸೆಗೆ (Taller surgery)ಒಳಗಾಗಿದ್ದು, ಟಿಬಿಯಾ ಮತ್ತು ಫೈಬುಲಾ ಮೂಳೆಗಳನ್ನು ಒಡೆದರು ಮತ್ತು ರಾಡ್ ಮೂಲಕ ಕೈಕಾಲು ಉದ್ದವನ್ನು ಮಾಡಿದರು ಬಳಿಕ . ಚೇತರಿಸಿಕೊಂಡ ನಂತರ, ಮೋಶೆಯು ಐದು ಅಡಿ-10-ಇಂಚುಗಳಲ್ಲಿ ನಿಲುತ್ತಾನೆ. ಆತ ಈಗ ದಿನಕ್ಕೆ ಮೂರು ಬಾರಿ ಎತ್ತರವನ್ನು ವಿಸ್ತರಿಸುವ ಸಾಧನವನ್ನು ಬಳಸಬೇಕಾಗಿದೆ.

ಆತನ ಪ್ರಕಾರ ‘ನಾನು 15 ವರ್ಷದವನಿದ್ದಾಗ, ನನ್ನ ಗೆಳೆಯರು ನನಗಿಂತ ಎತ್ತರವಾಗಿದ್ದಾರೆ ಎಂದು ಬೇಸರಗೊಂಡಿದ್ದೆ. ಸ್ವಲ್ಪ ಎತ್ತರವನ್ನು ಪಡೆಯಲು ನಾನು ನನ್ನ ಬೂಟುಗಳಲ್ಲಿ ವಸ್ತುಗಳನ್ನು ಹಾಕುತ್ತಿದ್ದೆ ಆದರೆ ಅದು ಹೆಚ್ಚು ಆಗಲಿಲ್ಲ’ ಎಂದು ಮನದಾಳದ ಮಾತು ವ್ಯಕ್ತ ಪಡಿಸಿದ್ದಾರೆ.

 

ಇದನ್ನು ಓದಿ : Scuba Diving :ಸಮುದ್ರದಲ್ಲಿ ಸ್ಕೂಬಾ ಡೈವಿಂಗ್‌ ಹೋದವರಿಗೆ ಕಾದಿತ್ತು ಬಿಗ್‌ ಶಾಕ್‌ …! ಏನಾಯ್ತು ಗೊತ್ತಾ?