Home Health Plastic Surgery ಯಲ್ಲಿ ಪ್ಲಾಸ್ಟಿಕ್ ಉಪಯೋಗ ಮಾಡುವುದಿಲ್ಲ | ಹಾಗಾದರೆ ಪ್ಲಾಸ್ಟಿಕ್ ಪದ ಯಾಕೆ ಬಳಕೆಗೆ...

Plastic Surgery ಯಲ್ಲಿ ಪ್ಲಾಸ್ಟಿಕ್ ಉಪಯೋಗ ಮಾಡುವುದಿಲ್ಲ | ಹಾಗಾದರೆ ಪ್ಲಾಸ್ಟಿಕ್ ಪದ ಯಾಕೆ ಬಳಕೆಗೆ ಬಂದಿದೆ?

Hindu neighbor gifts plot of land

Hindu neighbour gifts land to Muslim journalist

ಪ್ಲಾಸ್ಟಿಕ್ ಸರ್ಜರಿ ಹೆಸರು ನೀವು ಕೇಳಿರಲೇಬೇಕು. ಇಲ್ಲಿ ಸರ್ಜರಿ ಮಾಡುವಾಗ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ. ಹಾಗಾದರೆ ಬನ್ನಿ ತಿಳಿಯೋಣ. ‘ ಪ್ಲಾಸ್ಟಿಕ್ ಸರ್ಜರಿ’ ಎಂಬ ಪದವನ್ನು ಮೊದಲು 1837 ರಲ್ಲಿ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ನಲ್ಲಿ ಬಳಸಲಾಯಿತು.

ಒಂದು ವರದಿಯ ಪ್ರಕಾರ, ಓಹಿಯೋ ಮೂಲದ ಪ್ಲಾಸ್ಟಿಕ್ ಸರ್ಜನ್ ಡಾ.ಬ್ರಿಯಾನ್ ಡೋರ್ನರ್ ಅವರು ಸ್ತನ ಕಸಿಗಳನ್ನು ಪ್ಲಾಸ್ಟಿಕ್ ಸರ್ಜರಿಯೊಂದಿಗೆ ಸಂಯೋಜಿಸಲಾಗಿದೆ ಎಂದು ಹೇಳುತ್ತಾರೆ.

ಸ್ತನ ಕಸಿ ಪ್ಲಾಸ್ಟಿಕ್ ನಿಂದ ಮಾಡಲಾಗಿದೆ ಎಂದು ಡಾಕ್ಟರ್ ಹೇಳುತ್ತಾರೆ. ಆದ್ದರಿಂದ ಅದನ್ನು ಮಾಡುವ ಶಸ್ತ್ರಚಿಕಿತ್ಸೆಯನ್ನು ಪ್ಲಾಸ್ಟಿಕ್ ಸರ್ಜರಿ ಎಂದು ಕರೆಯಲಾಗುತ್ತದೆ. ಆದರೆ ಪ್ಲಾಸ್ಟಿಕ್ ಸರ್ಜರಿಯನ್ನು ಹಾಗೆ ಕರೆಯಲು ನಿಜವಾದ ಕಾರಣ ಬೇರೆನೇ ಇದೆ.

ಸ್ತನ ಇಂಪ್ಲಾಂಟ್ ಗಳನ್ನು ಸಿಲಿಕೋನ್ ಶೆಲ್ ಗಳಿಂದ ತಯಾರಿಸಲಾಗುತ್ತದೆ. ಇದು ಸಿಲಿಕೋನ್ ಜೆಲ್ ನಿಂದ ತುಂಬಿರುತ್ತದೆ ಎಂದು ಡಾ.ಬ್ರಿಯಾನ್ ಡೋರ್ನರ್ ಹೇಳುತ್ತಾರೆ. ಏಕೆಂದರೆ ಸಿಲಿಕೋನ್ ಕೂಡಾ ಒಂದು ರೀತಿಯ ಪ್ಲಾಸ್ಟಿಕ್ ಆಗಿದೆ. ರಬ್ಬರ್ ಮತ್ತು ಪ್ಲಾಸ್ಟಿಕ್ ಮಿಶ್ರಣದಿಂದ ಇದನ್ನು ತಯಾರಿಸಲಾಗುತ್ತದೆ. ಶಸ್ತ್ರಚಿಕಿತ್ಸೆಯಲ್ಲಿ ಪ್ಲಾಸ್ಟಿಕ್ ಪದದ ಬಳಕೆಯ ಹಿಂದಿನ ನಿಖರವಾದ ಕಾರಣ ದಶಕಗಳಷ್ಟು ಹಳೆಯದು.

ಪ್ಲಾಸ್ಟಿಕ್ ಎಂಬುದು ಲ್ಯಾಟಿನ್ ಪದ. ಪ್ಲಾಸ್ಟಿಕಸ್ ನಿಂದ ಅದು ಬಂದಿದೆ ಎಂದು ವರದಿ ಹೇಳುತ್ತದೆ. ಯಾವುದನ್ನಾದರೂ ಸರಿಹೊಂದುವಂತೆ ಗಾತ್ರವನ್ನು ಬದಲಾಯಿಸುವುದು ಎಂದರೆ ಪ್ಲಾಸ್ಟಿಕ್ ಎಂಬರ್ಥ. ವಿವಿಧ ರೂಪಗಳಲ್ಲಿ ರೂಪಿಸಬಹುದಾದ ವಸ್ತು ಇದು. 17 ನೇ ಶತಮಾನದಲ್ಲಿ, ಈ ಪದವನ್ನು ಹೆಚ್ಚು ಬಳಸಲು ಆರಂಭಿಸಲಾಯಿತು.

ಈ ರೀತಿಯಾಗಿ ಮಾನವ ದೇಹದ ಯಾವುದೇ ಭಾಗವು ಶಸ್ತ್ರಚಿಕಿತ್ಸೆಯಿಂದ ರೂಪುಗೊಳ್ಳುತ್ತದೆ. ಆದ್ದರಿಂದ ಇದನ್ನು ಪ್ಲಾಸ್ಟಿಕ್ ಸರ್ಜರಿ ಎಂದು ಕರೆಯಲಾಯಿತು. ಪ್ರಸ್ತುತ ದೇಹಕ್ಕೆ ಸುಂದರವಾದ ಮತ್ತು ಸರಿಯಾದ ಆಕಾರವನ್ನು ನೀಡಲು ಪ್ಲಾಸ್ಟಿಕ್ ಸರ್ಜರಿ ಮಾಡುವವರ ಸಂಖ್ಯೆ ಪ್ರಪಂಚದಾದ್ಯಂತ ಹೆಚ್ಚುತ್ತಿದೆ. ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವಲ್ಲಿ ಮಹಿಳೆಯರಷ್ಟೇ ಅಲ್ಲ, ಪುರುಷರ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ತಿಳಿದುಬಂದಿದೆ.