Home Health Men Hair: ಪುರುಷರ ಕೂದಲ ಸಮಸ್ಯೆಗೆ ಜಸ್ಟ್ ಒಂದೇ ಒಂದು ಎಣ್ಣೆ ಮಸಾಜ್ ಸಾಕು!

Men Hair: ಪುರುಷರ ಕೂದಲ ಸಮಸ್ಯೆಗೆ ಜಸ್ಟ್ ಒಂದೇ ಒಂದು ಎಣ್ಣೆ ಮಸಾಜ್ ಸಾಕು!

Men Hair

Hindu neighbor gifts plot of land

Hindu neighbour gifts land to Muslim journalist

Men Hair: ಯುವಕರಿಗೆ ಒಂದು ಸಖತ್ ಲುಕ್ ಕಾಣಲು ನಾನಾ ಪ್ರಯತ್ನ ಮಾಡುತ್ತಾರೆ. ಹೇಗಾದರೂ ಸರಿ ನಾನು ಚೆನ್ನಾಗಿ ಕಾಣಬೇಕೆಂಬ ಹಂಬಲ ಯುವಕರಿಗೆ ಇದ್ದೇ ಇರುತ್ತದೆ. ಅದಕ್ಕಾಗಿ ಪುರುಷರು ಡ್ರೆಸ್ಸಿಂಗ್ ಸ್ಟೈಲ್, ಬಾಡಿ ಬಿಲ್ಡ್, ಫೇಸ್ ಮಸಾಜ್, ಜೊತೆಗೆ ಮುಖ್ಯವಾಗಿ ಹೇರ್ ಸ್ಟೈಲ್ ಗೆ ತುಂಬಾ ಖರ್ಚು ಮಾಡುತ್ತಾರೆ. ಆದ್ರೆ ಕೂದಲ ಆರೋಗ್ಯದ ಆರೈಕೆ ಮಾಡದ ಕಾರಣ, ಪುರುಷರು ಕೂದಲಿನ (Men Hair)  ಅನೇಕ ಸಮಸ್ಯೆ ಎದುರಿಸುತ್ತಾರೆ.

ಹೌದು, ಕೂದಲಿನ ಆರೈಕೆ ಜೊತೆಗೆ ವಾರಕ್ಕೆ ಒಮ್ಮೆಯಾದ್ರೂ ತೆಂಗಿನ ಎಣ್ಣೆ ಮಸಾಜ್ ತುಂಬಾ ಮುಖ್ಯ. ಯಾಕಂದ್ರೆ ಕೂದಲಿಗೆ ಎಣ್ಣೆ ಅಂಶ ಸಿಗಲಿಲ್ಲ ಅಂದ್ರೆ ಕೂದಲು ನಿರ್ಜೀವಗೊಂಡಿರುತ್ತದೆ, ಇದ್ರಿಂದ ಕೂದಲು ಉದುರುತ್ತದೆ. ಅದಕ್ಕಾಗಿ ಕೂದಲು ಉದುರದೆ, ದಟ್ಟವಾಗಿರಬೇಕೆಂದ್ರೆ ಎಣ್ಣೆ ಹಚ್ಚುವುದು ಬಹಳ ಮುಖ್ಯ.

ಪುರುಷರ ತಲೆಹೊಟ್ಟು ನೆತ್ತಿಯ ತುರಿಕೆಗೆ ಕಾರಣವಾಗುತ್ತದೆ. ಇದಕ್ಕೆ ಪಮುಖ ಕಾರಣ ಒಣ ಚರ್ಮದ ಮತ್ತು  ಒತ್ತಡ ವಾಗಿದೆ. ಆದ್ದರಿಂದ ನಿಮ್ಮ ಕೂದಲಿನ ಚರ್ಮವನ್ನು ತೇವಾಂಶ ಕಳೆದುಕೊಳ್ಳದಂತೆ ಆರೋಗ್ಯವಾಗಿಡಲು ತೆಂಗಿನ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು. ಮಸಾಜ್ ಮಾಡುವುದರಿಂದ ನೆತ್ತಿಗೆ ಪೋಷಣೆ ಸಿಗುತ್ತದೆ. ತಲೆಹೊಟ್ಟು ನಿವಾರಣೆಯಾಗುತ್ತದೆ.

ಮುಖ್ಯವಾಗಿ ತೆಂಗಿನ ಎಣ್ಣೆಯು ಕೂದಲಿಗೆ ನೈಸರ್ಗಿಕ ಕಂಡೀಶನರ್ ಆಗಿ ಕೆಲಸ ಮಾಡುತ್ತದೆ. ಅದಕ್ಕಾಗಿ ಪುರುಷರು ರಾತ್ರಿ ಕೂದಲಿಗೆ ತೆಂಗಿನ ಎಣ್ಣೆ ಮಸಾಜ್ ಮಾಡಿ ಮಲಗಬೇಕು. ಮರುದಿನ ಕೂದಲನ್ನು ಶಾಂಪೂವಿನಿಂದ ಸ್ವಚ್ಛಗೊಳಿಸಬೇಕು.

ಹರ್ಬಲ್ ಹೇರ್ ಆಯಿಲ್‌ನಿಂದ ನಿಧಾನವಾಗಿ ಕೂದಲನ್ನು ಮಸಾಜ್ ಮಾಡಿದಾಗ ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ.

Bad Newz Censored: ಬಿಡುಗಡೆಗೂ ಮುನ್ನವೇ ವಿಕ್ಕಿ-ತೃಪ್ತಿ ಅಭಿನಯದ ‘ಬ್ಯಾಡ್ ನ್ಯೂಸ್’ ಚಿತ್ರಕ್ಕೆ ಶಾಕ್! ಸೆನ್ಸಾರ್ ಮಂಡಳಿಯಿಂದ 27 ಸೆಕೆಂಡ್‌ಗಳ ಹಾಟ್‌ ಕಿಸ್ಸಿಂಗ್‌ ದೃಶ್ಯಕ್ಕೆ ಬಿತ್ತು ಕತ್ತರಿ