Home Food Skin Care: ನಿದ್ರೆ ಮಾಡುವಾಗ ಎಂದಿಗೂ ಈ 5 ತಪ್ಪು ಮಾಡ್ಬೇಡಿ- ಮಾಡಿದ್ರೆ ಮುಖದ ತುಂಬಾ...

Skin Care: ನಿದ್ರೆ ಮಾಡುವಾಗ ಎಂದಿಗೂ ಈ 5 ತಪ್ಪು ಮಾಡ್ಬೇಡಿ- ಮಾಡಿದ್ರೆ ಮುಖದ ತುಂಬಾ ಮೊಡವೆಗಳಾದೀತು ಹುಷಾರ್ !!

Image Credit Source Zee news

Hindu neighbor gifts plot of land

Hindu neighbour gifts land to Muslim journalist

Acne-prone skin : ಚರ್ಮದ( Skin)ಮೇಲೆ ಕಾಣಿಸಿಕೊಳ್ಳುವ ಸಣ್ಣ, ಕೆಂಪು ದದ್ದು ಮತ್ತು ಗುಳ್ಳೆಗಳು ಉರಿಯೂತ ಉಂಟು ಮಾಡುತ್ತವೆ. ಸತ್ತ ಚರ್ಮದ ಕೋಶಗಳು ಮತ್ತು ಬ್ಯಾಕ್ಟೀರಿಯಾ ಕೆಟ್ಟ ಪ್ರಭಾವ ಬೀರುತ್ತದೆ. ನಾವು ಸೇವಿಸುವ ಆಹಾರ ಹಾಗೂ ನಾವು ಹಚ್ಚುವ ಕ್ರೀಮ್ ಮಾತ್ರವಲ್ಲದೇ ನಾವು ರಾತ್ರಿ ಮಾಡುವ ನಿದ್ದೆ ಕೂಡ ನಮ್ಮ ಆರೋಗ್ಯದ ( Skin Care)ಮೇಲೆ ಗಂಭೀರ ಸ್ವರೂಪದ(Acne-prone skin) ಪ್ರಭಾವ ಬೀರುತ್ತದೆ. ಹೆಚ್ಚಿನ ಮಂದಿಗೆ ತ್ವಚೆಯ ಆರೋಗ್ಯಕ್ಕೂ ನಿದ್ರೆಗೂ ನೇರ ಸಂಬಂಧವಿದೆ ಎಂಬುದು ತಿಳಿದಿಲ್ಲ. ಅದರಲ್ಲಿಯೂ ವಿಶೇಷವಾಗಿ ರಾತ್ರಿ ನಿದ್ರೆ ಮಾಡುವ ಸಂದರ್ಭದಲ್ಲಿ ನೀವು ಮಾಡುವ 5 ತಪ್ಪುಗಳು ಮುಖದಲ್ಲಿ ಮೊಡವೆಗೆ(Acne-prone skin ) ಕಾರಣವಾಗಬಹುದು.

ಸರಿಯಾದ ಸಮಯಕ್ಕೆ ನಿದ್ರೆ (Night Sleep)ಮಾಡದಿದ್ದರೆ ದೇಹದಲ್ಲಿ ಹಾರ್ಮೋನ್ಗಳ ಅಸಮತೋಲನ ಉಂಟಾಗುತ್ತದೆ. ಚರ್ಮದಲ್ಲಿ ಎಣ್ಣೆಯ ಉತ್ಪಾದನೆಯನ್ನು ನಿಯಂತ್ರಣ ಮಾಡುವಲ್ಲಿ ಹಾರ್ಮೋನ್ ಮುಖ್ಯ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ರಾತ್ರಿ ಹೊತ್ತಲ್ಲಿ ಸರಿಯಾಗಿ ನಿದ್ರೆ ಮಾಡಬೇಕು. ಇಲ್ಲದೇ ಇದ್ದರೆ, ಮುಖದಲ್ಲಿ ಎಣ್ಣೆಯಂಶ ಹೆಚ್ಚಾಗಿ ಮೊಡವೆ ಉಂಟಾಗಬಹುದು.

ನಿಮ್ಮ ಮುಖದ ಮೇಕಪ್ ( Face Make-up)ತೆಗೆಯದೇ ಸ್ವಚ್ಚ ಮಾಡದೇ ನೀವು ಹಾಗೆಯೇ ನಿದ್ರೆ ಮಾಡಿದರೆ ಇದರಿಂದ ನಿಮ್ಮ ಚರ್ಮದ ಮೇಲೆ ಪ್ರಭಾವ ಬೀರುತ್ತದೆ. ಮೇಕಪ್ಗಳು ಮೇದೋಗ್ರಂಥಿಗಳಲ್ಲಿ ಹಾನಿಯನ್ನುಂಟು ಮಾಡುವ ಜೊತೆಗೆ ತ್ವಚೆಗೆ ಉಸಿರಾಡಲು ಅನುವು ಮಾಡಿಕೊಡದು. ಇದರಿಂದ ಕೂಡ ಮೊಡವೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಮಲಗುವ ಮುನ್ನ ಮುಖದ ಮೇಲೆ ಯಾವುದೇ ಮೇಕಪ್ ಇಲ್ಲದ ಹಾಗೆ ಮುಖವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡು ಮಲಗಬೇಕು.

ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳಲು ಕೇವಲ ನಿಮ್ಮ ಆಹಾರ ಕ್ರಮ ಮಾತ್ರವಲ್ಲದೇ ಮಲಗುವ ದಿಂಬಿನ ಶುಚಿತ್ವ ಕೂಡ ಮೊಡವೆಗಳ (Pimples)ಮೇಲೆ ನೇರ ಪ್ರಭಾವ ಬೀರುತ್ತದೆ. ನಿಮ್ಮ ದಿಂಬು ಇಲ್ಲವೇ ಹೊದಿಕೆಗಳು ಕೊಳೆಯಾಗಿದ್ದರೆ ಇದರಿಂದ ಕೂಡ ಮುಖದಲ್ಲಿ ಎಣ್ಣೆಯಂಶ, ಬ್ಯಾಕ್ಟೀರಿಯಾಗಳ ಶೇಖರಣೆಗೆ ಕಾರಣವಾಗುವ ಸಾಧ್ಯತೆಯಿದೆ. ಇದಕ್ಕಾಗಿ, ನೀವು ವಾರಕ್ಕೆ ಒಮ್ಮೆಯಾದರೂ ನಿಮ್ಮ ದಿಂಬಿನ ಕವರ್ ಮತ್ತು ಬ್ಲಾಂಕೆಟ್ ಅನ್ನು ಕ್ಲೀನ್ ಮಾಡಬೇಕು.

ಮಲಗುವ ಸಮಯದಲ್ಲಿ ಕೆಫಿನ್ ಮತ್ತು ಸಕ್ಕರೆ ಅಂಶಯಿರುವ ಪಾನೀಯ ಅಥವಾ ತಿನಿಸುಗಳನ್ನು ಸೇವಿಸುವುದು ಒಳ್ಳೆಯದಲ್ಲ. ಇದರಿಂದ ಮೊಡವೆಗಳು ಏಳುತ್ತದೆ. ಅಷ್ಟೇ ಅಲ್ಲದೆ, ವ್ಯಕ್ತಿಯ ನಿದ್ರೆಯ ಮೇಲೆ ಗಂಭೀರ ಪ್ರಭಾವ ಬೀರುತ್ತದೆ.

ರಾತ್ರಿ ಹೊತ್ತಲ್ಲಿ ಚೆನ್ನಾಗಿ ನಿದ್ರೆ ಮಾಡುವುದು ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿದ್ದೆ ಮಾಡುವಾಗ ಆಗಾಗ ಎಚ್ಚರಗೊಳ್ಳುವುದರಿಂದ ಕಾರ್ಟಿಸೋಲ್ನಂತಹ ಒತ್ತಡ ಹೆಚ್ಚಿಸುವ ಹಾರ್ಮೋನ್ಗಳ ಉತ್ಪಾದನೆ ಹೆಚ್ಚುವ ಸಾಧ್ಯತೆಯಿದೆ. ಇವುಗಳು ಚರ್ಮದಲ್ಲಿ ಎಣ್ಣೆಯಂಶ ಹೆಚ್ಚಿಸಿ ಮೊಡವೆಗಳು ಉಂಟಾಗುವುದಕ್ಕೆ ಕಾರಣವಾಗುತ್ತದೆ. ಹೀಗಾಗಿ ರಾತ್ರಿ ಹೊತ್ತಲ್ಲಿ ಸರಿಯಾಗಿ ನಿದ್ರೆ ಮಾಡುವುದು ಅವಶ್ಯಕ.