Home Health Nose Hair: ಮೂಗಿನಲ್ಲಿರುವ ಕೂದಲು ಕತ್ತರಿಸುವ ಮೊದಲು ಈ ಮಾಹಿತಿ ಖಂಡಿತವಾಗಿ ತಿಳಿಯಿರಿ!

Nose Hair: ಮೂಗಿನಲ್ಲಿರುವ ಕೂದಲು ಕತ್ತರಿಸುವ ಮೊದಲು ಈ ಮಾಹಿತಿ ಖಂಡಿತವಾಗಿ ತಿಳಿಯಿರಿ!

Nose hair
Image source: Boldsky kannada

Hindu neighbor gifts plot of land

Hindu neighbour gifts land to Muslim journalist

Nose Hair: ಮೂಗಿನ ಕೂದಲು ಮೂಗಿನಿಂದ ಹೊರಬರುವುದನ್ನು ನೋಡುವುದು ಅಸಹಜವೆನಿಸುತ್ತದೆ. ಮುಖ್ಯವಾಗಿ ಮೂಗಿನಲ್ಲಿ ಕೂದಲು (Nose Hair) ಇರುವುದಕ್ಕೆ ಒಂದು ಉದ್ದೇಶವಿದೆ. ಅದೇನೆಂದರೆ, ಕೂದಲು ರಕ್ಷಣಾ ವ್ಯವಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ. ಆದರೆ ಮೂಗಿನ ಹೊಳ್ಳೆಗಳಿಂದ ಹೊರಬರುವ ಮೂಗಿನ ಕೂದಲು ತ್ವಚೆಯನ್ನು ಆಕರ್ಷಕವಾಗಿಸುವುದಿಲ್ಲ. ಮುಖದ ಸೌಂದರ್ಯಕ್ಕೆ ಜನರು ಹೆಚ್ಚಿನ ಮಹತ್ವ ನೀಡುವ ಕಾರಣ ಮೂಗಿನ ಒಳಗಿರುವ ಕೂದಲನ್ನು ಬಹುತೇಕ ಜನರು ತೆಗೆಯುತ್ತಾರೆ. ಆದರೆ ಈ ಕೂದಲು ತೆಗೆಯುವುದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಮೂಗಿನಲ್ಲಿ ಎರಡು ರೀತಿಯ ಕೂದಲಿರುತ್ತದೆ. ಒಂದು ಚಿಕ್ಕ ಕೂದಲಾಗಿದ್ದರೆ ಇನ್ನೊಂದು ದಪ್ಪ ಕೂದಲು. ಮುಖ್ಯವಾಗಿ ಮೂಗಿನಲ್ಲಿರುವ ಕೂದಲು ದೇಹದ ರಕ್ಷಣೆ ಕೆಲಸ ಮಾಡುತ್ತದೆ. ಉಸಿರಾಡುವಾಗ ಆಮ್ಲಜನಕವನ್ನು ಶುದ್ದೀಕರಿಸುವ ಜೊತೆಗೆ, ಧೂಳು ಒಳ ಹೋಗದಂತೆ ರಕ್ಷಿಸುತ್ತದೆ.

ಮೂಗಿನ ಮೇಲಿನ ಭಾಗದಿಂದ ತುಟಿಗಳ ಎರಡು ಮೂಲೆಗಳನ್ನು ಸೇರಿಸಿದರೆ, ತ್ರೀಕೋನ ಆಕಾರ ಕಾಣಿಸುತ್ತದೆ. ಮುಖದ ಈ ಭಾಗವನ್ನು ಅತೀ ಅಪಾಯಕಾರಿ ಎನ್ನಲಾಗುತ್ತದೆ. ಕಣ್ಣು, ಮೂಗು ಮತ್ತು ಬಾಯಿಯನ್ನು ಸಂಧಿಸುವ ಈ ಭಾಗ ಬಹಳ ಸೂಕ್ಷ್ಮವಾಗಿರುತ್ತದೆ. ದೇಹದ ಅನೇಕ ಪ್ರಮುಖ ರಕ್ತನಾಳಗಳು ಮುಖದ ಈ ಭಾಗಗಳ ಮೂಲಕ ಹಾದು ಹೋಗುತ್ತವೆ. ಅಲ್ಲದೆ ಅವುಗಳು ನೇರವಾಗಿ ಮೆದುಳನ್ನು ಸಂಪರ್ಕಿಸುತ್ತದೆ. ಕಣ್ಣು, ಬಾಯಿ ಮತ್ತು ಮೂಗಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾದರೆ ನೇರವಾಗಿ ಅದು ಮೆದುಳಿನ ಮೇಲೆ ಪ್ರಭಾವ ಬೀರುತ್ತದೆ. ಕೆಲವೊಂದು ಬಾರಿ ಸಣ್ಣ ಗಾಯಗಳೂ ಕೂಡ ಅಪಾಯಕಾರಿಯಾಗಿ ಪರಿಣಮಿಸಬಹುದು. ಅಂತದರಲ್ಲಿ ನೀವು ಮೂಗಿನ ಕೂದಲನ್ನು ಕಿತ್ತುಕೊಂಡರೆ ರಕ್ತನಾಳದಲ್ಲಿ ರಂಧ್ರವಾಗಿ ರಕ್ತಸ್ರಾವ ಉಂಟಾಗಬಹುದು.

ಬಹುತೇಕರು ತಮ್ಮ ಮೂಗಿನ ಕೂದಲನ್ನು ತೊಡೆದು ಹಾಕಲು ಟ್ವೀಜರ್‌ ಅನ್ನು ಬಳಸುತ್ತಾರೆ. ಇದು ಅತ್ಯಂತ ನೋವಿನ ಪ್ರಕ್ರಿಯೆಯಾಗಿದೆ. ಒಂದೊಂದು ಕೂದಲು ತೆಗೆಯುವಾಗಲು ಕಣ್ಣಿನಲ್ಲಿ ನೀರು ಹರಿಯುತ್ತದೆ.

ಹೀಗೆ ಟ್ವೀಜರ್‌ ನಿಂದ ಒಂದೊಂದೆ ಕೂದಲನ್ನು ತೆಗೆಯುವುದರಿಂದ ಕೆಲವು ಚರ್ಮದ ಸೋಂಕನ್ನು ಸಹ ಪಡೆಯಬಹುದು. ಕೆಲವೊಮ್ಮೆ ಕೀವು ಕೂಡ ತುಂಬಿ, ಉಬ್ಬುವಂತಹ ಸಮಸ್ಯೆಗಳನ್ನು ಅನುಭವಿಸಬೇಕಾಗಬಹುದು. ಇದು ಬಹಳಷ್ಟು ನೋವಿನ ಪ್ರಕ್ರಿಯೆಯಾಗಿದ್ದು, ಅಪ್ಪಿ ತಪ್ಪಿಯು ಟ್ವೀಜರ್‌ ಅನ್ನು ನಿಮ್ಮ ಮೂಗಿನ ಕೂದಲನ್ನು ತೆಗೆಯಲು ಬಳಸಬೇಡಿ.

ಇನ್ನು ಮಾರುಕಟ್ಟೆಯಲ್ಲಿ ಸಾಕಷ್ಟು ಬ್ರ್ಯಾಂಡ್‌ ಕೂದಲನ್ನು ಯಾವುದೇ ನೋವಿಲ್ಲದಂತೆ ತೆಗೆಯುವ ಉತ್ಪನ್ನಗಳು ದೊರೆಯುತ್ತವೆ. ಆ ಉತ್ಪನ್ನಗಳಲ್ಲಿ ಕೆರಾಟಿನ್‌ ಮತ್ತು ಪ್ರೋಟೀನ್‌ ಹೊಂದಿರುತ್ತದೆ. ಇದು ಕೂದಲು ನಾಶಪಡಿಸುವ ರಾಸಾಯನಿಕಗಳನ್ನು ಹೊಂದಿರುತ್ತವೆ.

ಈ ಕ್ರೀಮ್‌ಗಳನ್ನು ನಿಮ್ಮ ದೇಹದ ಯಾವುದೇ ಭಾಗಕ್ಕೂ ಕೂದಲು ತೆಗೆಯಲು ಬಳಸಬಹುದು. ಆದರೆ ಮೂಗಿನ ಹೊಳ್ಳೆಯೊಳಗೆ ಬಳಸುವುದು ಒಳ್ಳೆಯದಲ್ಲ. ಈ ಕ್ರೀಮ್‌ಗಳು ಸಾಕಷ್ಟು ರಾಸಾಯನಿಕಗಳು ಹೊಂದಿರುತ್ತವೆ. ಇದು ನಿಮ್ಮ ಉಸಿರಾಟ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಈ ಕ್ರೀಮ್‌ಗಳನ್ನು ಬಳಸುವುದನ್ನು ತಪ್ಪಿಸಿ.

ಮೂಗಿನ ಕೂದಲು ದೇಹಕ್ಕೆ ಒಳ್ಳೆಯದಾಗಿರುವ ಕಾರಣ ಯಾವುದೇ ಕಾರಣಕ್ಕೂ ಮೂಗಿನ ಕೂದಲನ್ನು ಕತ್ತರಿಸಬೇಡಿ. ಮೂಗಿನ ಕೂದಲು ತೆಗೆದುಹಾಕುವುದು ಅಗತ್ಯವಿದ್ದಲ್ಲಿ ಸಣ್ಣ ಕತ್ತರಿಯಿಂದ ಕತ್ತರಿಸಿ, ನೋಸ್ ಹೇರ್ ಟ್ರಿಮ್ಮರ್ ಬಳಕೆ ಮಾಡಿ.

 

ಇದನ್ನು ಓದಿ: Priyank Kharge: ಅರ್ಹ ಮಾನದಂಡದ ಆಧಾರದಲ್ಲೇ ಕಾಂಗ್ರೆಸ್‌ ಗ್ಯಾರಂಟಿ ಲಭ್ಯ : ಪ್ರಿಯಾಂಕ್​ ಖರ್ಗೆ