Home Health Meftal Tablets: ನೋವು ನಿವಾರಿಸಲು ಈ ಮಾತ್ರೆ ಸೇವಿಸುತ್ತೀರಾ?! ಹಾಗಿದ್ರೆ ಹುಷಾರ್, ಕೇಂದ್ರದಿಂದ ರೋಗಿಗಳನ್ನು ಸೇರಿ...

Meftal Tablets: ನೋವು ನಿವಾರಿಸಲು ಈ ಮಾತ್ರೆ ಸೇವಿಸುತ್ತೀರಾ?! ಹಾಗಿದ್ರೆ ಹುಷಾರ್, ಕೇಂದ್ರದಿಂದ ರೋಗಿಗಳನ್ನು ಸೇರಿ ವೈದ್ಯರಿಗೂ ಬಂತು ಖಡಕ್ ಎಚ್ಚರಿಕೆ !!

Hindu neighbor gifts plot of land

Hindu neighbour gifts land to Muslim journalist

 

Meftal Tablets: ಸಾಮಾನ್ಯವಾಗಿ ಬಳಸುವ ನೋವು ನಿವಾರಕ ʻಮೆಫೆನಾಮಿಕ್ ಆಮ್ಲʼ ಬಳಕೆಯ ಕುರಿತಂತೆ ವೈದ್ಯರು ಮತ್ತು ರೋಗಿಗಳಿಗೆ ಡ್ರಗ್ ಸುರಕ್ಷತಾ ಫಾರ್ಮಾ ಸ್ಟ್ಯಾಂಡರ್ಡ್ ಬಾಡಿ ಇಂಡಿಯನ್ ಫಾರ್ಮಾಕೊಪೊಯಿಯಾ ಕಮಿಷನ್ (IPC) ಎಚ್ಚರಿಕೆಯನ್ನು ನೀಡಿದೆ.

ಫಾರ್ಮಾಕೋವಿಜಿಲೆನ್ಸ್ ಪ್ರೋಗ್ರಾಂ ಆಫ್ ಇಂಡಿಯಾ (PvPI), ಪ್ರತಿಕೂಲ ಔಷಧ ಪ್ರತಿಕ್ರಿಯೆಗಳು (ADRs) ಮತ್ತು ಔಷಧೀಯ ಉತ್ಪನ್ನಗಳಿಗೆ ಸಂಬಂಧಿಸಿದ ಪ್ರತಿಕೂಲ ಘಟನೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತದೆ. ಔಷಧಿಯು ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಾಟ ಮಾಡಬಹುದಾದ OTC ಉತ್ಪನ್ನ ಆಗದೇ ಇದ್ದರೂ ಭಾರತದಲ್ಲಿ ಋತುಚಕ್ರದ ನೋವು, ತಲೆನೋವು ಮತ್ತು ಸ್ನಾಯು ಮತ್ತು ಕೀಲು ನೋವುಗಳನ್ನು ನಿವಾರಿಸಲು ನೋವು ನಿವಾರಕ ಮಾತ್ರೆಗಳನ್ನು ಬಳಸಲಾಗುತ್ತದೆ. ಇದನ್ನು ಮೆಫ್ಟಾಲ್(Meftal) ಬ್ರಾಂಡ್ ಹೆಸರಿನಲ್ಲಿ ಜನಪ್ರಿಯವಾಗಿ ಮಾರಾಟ ಮಾಡಲಾಗುತ್ತದೆ. ಬ್ಲೂ ಕ್ರಾಸ್ ಲ್ಯಾಬೊರೇಟರೀಸ್‌ನ ಮೆಫ್ಟಾಲ್, ಮ್ಯಾನ್‌ಕೈಂಡ್ ಫಾರ್ಮಾದ ಮೆಫ್‌ಕೈಂಡ್ ಪಿ, ಫಿಜರ್‌ನ ಪೊನ್‌ಸ್ಟಾನ್, ಸೀರಮ್ ಇನ್‌ಸ್ಟಿಟ್ಯೂಟ್‌ನ ಮೆಫಾನಾರ್ಮ್ ಮತ್ತು ಡಾ ರೆಡ್ಡೀಸ್ ಐಬುಕ್ಲಿನ್ ಪಿ ಈ ವಿಭಾಗದಲ್ಲಿ ಅಗ್ರ ಬ್ರಾಂಡ್‌ಗಳನ್ನು ಒಳಗೊಂಡಿದೆ.

ಇದನ್ನು ಓದಿ: Nirmala Sitharaman: ಫೋರ್ಬ್ಸ್ ಪಟ್ಟಿಯಲ್ಲಿ ಭಾರತೀಯ ಪ್ರಭಾವಿ ಮಹಿಳೆಯರಿಗೆ ಸ್ಥಾನ, ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಸ್ಥಾನ ಎಷ್ಟನೆಯದ್ದು ?!

DRESS ಸಿಂಡ್ರೋಮ್, ಇಸಿನೊಫಿಲಿಯಾ ಮತ್ತು ಸಿಸ್ಟಮಿಕ್ ರೋಗಲಕ್ಷಣಗಳ ಜೊತೆಗೆ ಅಲರ್ಜಿ ಉಂಟು ಮಾಡಬಹುದು. ನಿಮ್ಮ ದೇಹವು ಕೆಲವು ಔಷಧಿಗಳಿಗೆ ಬಲವಾಗಿ ಪ್ರತಿಕ್ರಿಯಿಸಿದ ಸಂದರ್ಭ DRESS ಸಿಂಡ್ರೋಮ್ ಕಂಡುಬರುತ್ತದೆ. ಅಷ್ಟೇ ಅಲ್ಲದೆ, ಚರ್ಮದ ದದ್ದು ಕಂಡುಬರುವ ಸಾಧ್ಯತೆಯಿದೆ. ನಿಮ್ಮ ಆಂತರಿಕ ಅಂಗಗಳ ಮೇಲೆ ಪರಿಣಾಮ ಬೀರಬಹುದು. ಈ ರೀತಿಯ ಲಕ್ಷಣಗಳನ್ನು ತಪ್ಪಿಸಲು ಔಷಧಿಗಳ ಬಗ್ಗೆ ಜಾಗ್ರತೆ ವಹಿಸಬೇಕು. ಹೀಗಾಗಿ, ಪ್ರತಿಕೂಲ ಔಷಧ ಪ್ರತಿಕ್ರಿಯೆಗಳನ್ನು ಸಲ್ಲಿಸುವ ಮೂಲಕ ದಯವಿಟ್ಟು IPC ಗೆ ವರದಿ ಮಾಡಿ” ಎಂದು ಫಾರ್ಮಾ ಸ್ಟ್ಯಾಂಡರ್ಡ್ ಬಾಡಿ ಇಂಡಿಯನ್ ಫಾರ್ಮಾಕೊಪೊಯಿಯಾ ಕಮಿಷನ್ ಎಚ್ಚರಿಕೆಯನ್ನು ನೀಡಿದೆ.

ಇದನ್ನು ಓದಿ: CM Siddaramaiah: ಗೃಹಲಕ್ಷ್ಮೀ, ಅನ್ನಭಾಗ್ಯ ಫಲಾನುಭವಿಗಳಿಗೆ ಭರ್ಜರಿ ಸಿಹಿ ಸುದ್ದಿ- ಯೋಜನೆ ಕುರಿತು ಸಿಎಂ ಸಿದ್ದರಾಮಯ್ಯ ಕೊಟ್ರು ಮತ್ತೊಂದು ಬಿಗ್ ಅಪ್ಡೇಟ್!!