Home National ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಒಮಿಕ್ರಾನ್‌ ಸೋಂಕಿನ ಪ್ರಕರಣ ವರದಿ|ಇದೀಗ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಒಮಿಕ್ರಾನ್‌ ಸೋಂಕಿನ ಪ್ರಕರಣ ವರದಿ|ಇದೀಗ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆ

Hindu neighbor gifts plot of land

Hindu neighbour gifts land to Muslim journalist

ಓಮಿಕ್ರೋನ್ ವೈರಸ್ ಭೀತಿ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ.ದೇಶದಲ್ಲಿ ಗುರುವಾರದಂದು ಮೊದಲ ಕೊರೊನಾ ಹೊಸ ರೂಪಾಂತರಿ ಒಮಿಕ್ರಾನ್‌ ಸೋಂಕಿನ ಪ್ರಕರಣ ಕರ್ನಾಟಕದಲ್ಲಿ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಇಬ್ಬರಿಗೆ ಈ ಸೋಂಕು ತಗುಲಿತ್ತು

ಬಳಿಕ ಶನಿವಾರದಂದು ಗುಜರಾತಿನ ಜಾಮ್‌ ನಗರ ಹಾಗೂ ಮಹಾರಾಷ್ಟ್ರದ ಮುಂಬೈನಲ್ಲಿ ತಲಾ ಒಂದೊಂದು ಒಮಿಕ್ರಾನ್ ಸೋಂಕಿನ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿತ್ತು.

ಇದೀಗ ಮತ್ತೆ ಇಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತೊಂದು ಒಮಿಕ್ರಾನ್‌ ಸೋಂಕಿನ ಪ್ರಕರಣ ವರದಿಯಾಗಿದ್ದು, ಈಗ ಒಟ್ಟು ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಟಾಂಜಾನಿಯಾದಿಂದ ದೆಹಲಿಗೆ ಬಂದಿದ್ದ ವ್ಯಕ್ತಿಗೆ ಓಮಿಕ್ರಾನ್‌ ಸೋಂಕು ತಗುಲಿದ್ದು, ಅವರನ್ನು ಎಲ್.‌ಎನ್.‌ಜೆ.ಪಿ. ಆಸ್ಪತ್ರೆಗೆ ದಾಖಲಿಸಲಾಗಿದೆ.